ದಿನಾಂಕ:10-06-2024ರ ಸೋಮವಾರ ಬೆಳಗ್ಗೆ 10-30 ಗಂಟೆಗೆ ದಾವಣಗೆರೆಯ ಎಪಿಎಂಸಿ (APMC) ಟೆಂಡರ್ ಹಾಲ್ ನಲ್ಲಿ ರಾಜ್ಯ ಸಮಿತಿಯ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಿ ತಿರ್ಮಾನಗಳನ್ನು ತೆಗೆದುಕೊಳ್ಳ ಬೇಕಾಗಿರುವುದರಿಂದ ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಜಿಲ್ಲಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಎಲ್ಲಾ ತಾಲ್ಲೂಕು ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ತಪ್ಪದೇ ಸರಿಯಾದ ಸಮಯಕ್ಕೆ ಸಭೆಗೆ ಹಾಜರಾಗಬೇಕು.
ಸಭೆಯ ವಿಷಯಗಳು
1. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈಗಿನವರಿಗೂ ರೈತರಿಗೆ ಬರಗಾಲ ಪರಿಹಾರ ನೀಡದೆ ಇರುವುದರ ಬಗ್ಗೆ.
2. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಘಟನೆಯನ್ನು ಮಾಡುವ ಬಗ್ಗೆ ರೂಪುರೇಷೆಗಳನ್ನು ರೂಪಿಸುವ ಬಗ್ಗೆ.
3. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಬಗ್ಗೆ.
4. ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದೇ ಇರುವ ಬಗ್ಗೆ.
5. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ.
6. ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡುವ ಬಗ್ಗೆ.
7. ಸರ್ಕಾರಗಳು ನೀಡುವ ಬರಪರಿಹಾರ ಮತ್ತು ಸಹಾಯಧನವನ್ನು ಬ್ಯಾಂಕ್ ಗಳು ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಬಗ್ಗೆ.
8. ಮುಂದಿನ ಚುನಾವಣೆಗಳಲ್ಲಿ ರೈತ ಸಂಘದ ಪಾತ್ರ ಮತ್ತು ಭಾಗವಹಿಸುವ ಬಗ್ಗೆ.
9. ಕೊಳವೆ ಬಾವಿ ಮರುಪೂರ್ಣ ಮತ್ತು ಮಳೆ ನೀರು ಕೊಯ್ಲುಗೆ ಸಹಾಯಧನ ನೀಡುವ ಬಗ್ಗೆ.
10. ಬಿತ್ತನೆ ಬೀಜಗಳ ಬೆಲೆಯನ್ನು 70% ಹೆಚ್ಚಳ ಮಾಡಿರು ಬಗ್ಗೆ.
11. ಇತರೇ ವಿಷಯಗಳು (ಅಧ್ಯಕ್ಷರ ಅಪ್ಪಣೆ ಮೇರೆಗೆ)
ವಂದನೆಗಳೊಂದಿಗೆ
ಹೆಚ್ ಆರ್ ಬಸವರಾಜಪ್ಪ
ರಾಜ್ಯಾಧ್ಯಕ್ಷರು
ಕುರುವ ಗಣೇಶ್
ರಾಜ್ಯ ಗೌರವಾಧ್ಯಕ್ಷರು
ಸಿದ್ದವೀರಪ್ಪ
ಅಬ್ಬಣಿ ಶಿವಪ್ಪ
ರಾಜ್ಯ ಕಾರ್ಯಾಧ್ಯಕ್ಷರು
ಅಮೀನ್ ಪಾಷಾ ದಿದ್ದಗಿ
ನಜೀರ್ ಸಾಬ್ ಮೂಲಿಮನಿ
ರಾಜ್ಯ ಪ್ರಧಾನ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಸೋಮನಗೌಡ ಎಸ್ ಪಾಟೀಲ್ ಬಳಬಟ್ಟಿಯವರು ಪತ್ರಿಕಾ ಪ್ರಟಣೆಯಲ್ಲಿ ತಿಳಿಸಿದ್ದಾರೆ