ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರನ್ನು ಟೆಸ್ಲಾ ಮತ್ತು ಎಕ್ಸ್ ಮಾಲೀಕ ಎಲೋನ್ ಮಸ್ಕ್ ಅವರು ಅಭಿನಂದಿಸಿದ್ದಾರೆ.
ತಮ್ಮ X ಟೈಮ್‌ಲೈನ್‌ನಲ್ಲಿನ ಪೋಸ್ಟ್‌ನಲ್ಲಿ, ತಮ್ಮ ಕಂಪನಿಗಳು ಭಾರತದಲ್ಲಿ ಅತ್ಯಾಕರ್ಷಕ ಕೆಲಸವನ್ನು ಮಾಡಲು ಎದುರು ನೋಡುತ್ತಿರುವುದಾಗಿ ಮಸ್ಕ್ ಹೇಳಿದ್ದಾರೆ.
“ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು! ಭಾರತದಲ್ಲಿ ನನ್ನ ಕಂಪನಿಗಳು ಅತ್ಯಾಕರ್ಷಕ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ” ಎಂದು ಎಲೋನ್ ಮಸ್ಕ್ ಶುಕ್ರವಾರ X ನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ವರ್ಷದ ಏಪ್ರಿಲ್‌ನಲ್ಲಿ ಮಸ್ಕ್ ಭಾರತಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದರು. ಆದರೆ ಅವರು ಕೊನೆಯ ಕ್ಷಣದಲ್ಲಿ ಭಾರತ ಪ್ರವಾಸವನ್ನು ರದ್ದುಗೊಳಿಸಿದರು.
“ದುರದೃಷ್ಟವಶಾತ್, ಟೆಸ್ಲಾ ಕಟ್ಟುಪಾಡುಗಳಿಂದಾಗಿ ಭಾರತ ಭೇಟಿ ವಿಳಂಬವಾಗುತ್ತದೆ. ಆದರೆ ಈ ವರ್ಷಾಂತ್ಯದಲ್ಲಿ ಭೇಟಿ ನೀಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಮಸ್ಕ್ ಹೇಳಿದ್ದರು.
ಟೆಸ್ಲಾ ಸಿಇಒ ಈ ಹಿಂದೆ ಭಾರತಕ್ಕೆ ತಮ್ಮ ಮೊದಲ ಭೇಟಿಯನ್ನು ಖಚಿತಪಡಿಸಿದ್ದರು ಮತ್ತು ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕಿತ್ತು.