ಶತಮಾನೋತ್ಸವ ಆಚರಣೆ
ಆಲಮೇಲ : ಸಾಯಂಕಾಲ ಯಲ್ಲಮ್ಮ ದೇವಿಯ ಬಯಲಾಟ ಪ್ರದರ್ಶನದಲ್ಲಿ ಗ್ರಾಮದ ಹಿರಿಯ ಜೀವಿ ಸಾಯಬವ್ವ ಜಮಾದಾರ ಇವರನ್ನು ಗ್ರಾಮದ ಗಣ್ಯರಾದ ಬಸಮ್ಮಗೌಡತಿಯವರು ಗೌರವಿಸಿ ಸನ್ಮಾನಿಸಿ ಶತಮಾನೋತ್ಸವಕ್ಕೆ ದಾಪುಗಾಲು ಹಾಕುತ್ತಿರುವ ಹಿರಿಯ ಜೀವಿಗೆ ಶುಭ ಕೋರಿದರು.ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗೌಡಪ್ಪಗೌಡ, ರೇವಣಸಿದ್ದ, ಬಸವಂತ್ರಾಯ, ಮಲ್ಲಣ್ಣಗೌಡ, ಸಿದ್ದು ನಾಟೀಕಾರ, ಪಿ.ಕೆ.ಪಿ.ಎಸ್, ಕಾರ್ಯನಿರ್ವಾಹಣ ಅಧಿಕಾರಿ ಯಲ್ಲಪ್ಪ ಜಮಾದಾರ, ಬಾಗಣ್ಣ ಗುರುಕಾರ, ಉಪಸ್ಥಿತರಿದ್ದರು.ಪೋಟೋ:೦೧ ತಾಲೂಕಿನ ತಾವರಖೇಡ ಗ್ರಾಮದ ಹಿರಿಯ ಜೀವಿ ಸಾಯಬವ್ವ ಜಮಾದಾರ ಇವರಿಗೆ ಗ್ರಾಮದ ಬಸಮ್ಮ ಗೌಡತಿಯವರು ಗೌರವಿಸಿ ಸನ್ಮಾನಿಸಿದರು.