10,11,ಮತ್ತು 12ನೇ ಜೂನ್ ಮೂರು ದಿನಗಳ ಕಾಲ ಗಂಗಮ್ಮ ದೇವಿ ಜಾತ್ರೆ ಮಹೋತ್ಸವ , ಹಸೀ ಕರಗ ಉತ್ಸವ

10,11,ಮತ್ತು 12ನೇ ಜೂನ್ ಮೂರು ದಿನಗಳ ಕಾಲ ಗಂಗಮ್ಮ ದೇವಿ ಜಾತ್ರೆ ಮಹೋತ್ಸವ , ಹಸೀ ಕರಗ ಉತ್ಸವ

Share

ಮಲ್ಲೇಶ್ವರಂ:ಕೋದಂಡರಾಮಪುರದಲ್ಲಿ ಓಂ ಶ್ರೀ ಗಂಗಮ್ಮ ದೇವಿಯ ಜಾತ್ರೆ ಮತ್ತು ಹಸೀ ಕರಗದ ಮಹೋತ್ಸವ ಸಮಾರಂಭ ದಿನಾಂಕ 10,11ಮತ್ತು 12ನೇ ತಾರೀಖನಂದು ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ ಇದರ ಕುರಿತು
ಮಾಧ್ಯಮಗೋಷ್ಟಿಯಲ್ಲಿ ಏರ್ಪಡಿಸಲಾಗಿತ್ತು .ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಅನೂಪ್ ಅಯ್ಯಂಗಾರ್, ಮತ್ತು ಓಂ ಶ್ರೀ ಗಂಗಮ್ಮ ದೇವಿಯ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧಾಕರ್ ನಟರಾಜ್ ರವರು ಭಾಗವಹಿಸಿದ್ದರು.ಬಿ.ಕೆ.ಶಿವರಾಂರವರು ಮಾತನಾಡಿ ಮಲ್ಲೇಶ್ವರ ಐತಿಹಾಸಿಕ ಇತಿಹಾಸವಿದೆ , ಸಂಸ್ಕೃತಿ ಸಂಪ್ರಾದಯ ಉಳಿಸಿ, ಬೆಳಸಿಕೊಂಡು ಆಧುನಿಕ ಯುಗದಲ್ಲಿ ಮುಂದಿನ ಪೀಳಿಗೆ ನಮ್ಮ ಸಂಪ್ರಾದಾಯಗಳನ್ನು ನೆನಪಿನಲ್ಲಿ ಇಟ್ಟಿಕೊಳ್ಳವಂತೆ ಮಾಡಲು ಇಂತಹ ಮಹೋತ್ಸವಗಳು ಅವಶ್ಯಕತೆ ಇದೆ .ಶ್ರೀ ಗಂಗಮ್ಮ ದೇವಿಯ ಜಾತ್ರೆ ಮಹೋತ್ಸವ ಮತ್ತು ಹಸೀ ಕರಗ ಮಹೋತ್ಸವ ಕಾರ್ಯಕ್ರಮವನ್ನು ಜೂನ್ 10,11, ಮತ್ತು 12ನೇ ತಾರೀಖಿನಂದು ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ.ಶ್ರೀ ಗಂಗಮ್ಮ ದೇವಿ ಅರಾಧನೆಗೆ 96ನೇ ವರ್ಷದ ಇತಿಹಾಸವಿದೆ.ಚಂಗವಲ್ಲ ನಾಯಕರ್ ಕುಟುಂಬವು ಗಂಗಮ್ಮ ದೇವಿಯ ಪೂಜೆ ಪುನಸ್ಕಾರಗಳನ್ನು ಜವಾಬ್ದಾರಿಯನ್ನು ಹೊತ್ತು ನಡೆಸಲಾಗುತ್ತಿದೆ.ಸ್ವಾತಂತ್ರ ಪೂರ್ವದಲ್ಲಿ ಪ್ಲೇಗ್ ಮಹಾಮಾರಿ ತುತ್ತಾಗಿದ್ದಾಗ ಸರ್ಕಲ್ ಮಾರಮ್ಮ ದೇವಸ್ಥಾನ ಸುತ್ತಮುತ್ತಲು ವಾಸಿಸುತ್ತಾರೆ ನಂತರ ಗಂಗಮ್ಮ ದೇವಿಯ ಪೂಜೆಯ ಶುರುವಾಯಿತು. ಭಕ್ತಾಧಿಗಳ ಆಶಯದಂತೆ 2004ರಲ್ಲಿ ಗಂಗಮ್ಮ ದೇವಿಗೆ ಶಾಶ್ವತ ದೇವಸ್ಥಾನವನ್ನು ನಿರ್ಮಿಸಲಾಯಿತು.

10ನೇ ತಾರೀಖು ಸಂಜೆ 5ಗಂಟೆಗೆ ಕ್ಷೀರಕುಂಭ ಮೆರವಣಿಗೆ , ಸಾವಿರಾರು ಮಹಿಳೆಯರು ಕಳಸ ಹೊತ್ತು ಸರ್ಕಲ್ ಮಾರಮ್ಮ ದೇವಸ್ಥಾನದಿದ ಹೊರಟು ಕೇದಂಡರಾಮಪುರವನ್ನು ತಲುಪುವುದು.

11ನೇ ತಾರೀಖು ಬೆಳಗ್ಗೆ 6ಗಂಟೆಗೆ ಶ್ರೀ ಗಂಗಮ್ಮ ದೇವಿಗೆ ಮಾಂಗಲ್ಯ ಸೂತ್ರಧಾರಣೆ ಮತ್ತು ಮಹಾಮಂಗಳಾರತಿ. ಮಧ್ಯಾಹ್ನ 12ಗಂಟೆ ಕುಂಭನೈವೇದ್ಯ ಹಾಗೂ ಮಹಾಮಂಗಳಾರತಿ ಸಂಜೆ 7ಗಂಟೆಗೆ ಹಸೀ ಹೂವಿನ ಕರಗ ದೇವಸ್ಥಾನದಿಂದ ಹರಟು ಕೋದಂಡರಾಮಪುರ, ವೈಯಾಳಿಕಾವಲ್ , ಮಲ್ಲೇಶ್ವರಂ ರಸ್ತೆಗಳ ಮೂಲಕ ಬೆಳಗಿನ ಜಾವ 2ಗಂಟೆಗೆ ದೇವಸ್ಥಾನವನ್ನು ತಲುಪುವುದು.

12ನೇ ತಾರೀಖು ಬೆಳಗ್ಗೆ 9-30ಕ್ಕೆ ಸುಮಂಗಲಿ ಪೂಜೆ ಮಧ್ಯಾಹ್ನ 12ಗಂಟೆಗೆ ಅನ್ನಸಂತರ್ಪಣೆ ಯನ್ನು ಕೋದಂಡರಾಮಪುರ ಪ್ರೌಡಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ.ಸಂಜೆ 5-30ಕ್ಕೆ ದೇವಿಯ ರಥೋತ್ಸವ ಕೇದಂಡರಾಮಪುರ, ಮಲ್ಲೇಶ್ವರಂ,ವೈಯ್ಯಾಳಿಕಾವಲ್ , ಮತ್ತು ಗುಟ್ಟಹಳ್ಳಿ ರಸ್ತೆಗಳ ಮುಖಾಂತರ ಬೆಳಗ್ಗೆ 4ಗಂಟೆಗೆ ದೇವಸ್ಥಾನ ತಲುಪುವುದು.

ಬೆಂಗಳೂರು ಧರ್ಮಸ್ವಾಮಿ ದೇವಸ್ಥಾನದಲ್ಲಿ ಜರುಗುವ ಕರಗದಲ್ಲಿ ಇರುವ ಅಚರಣೆ, ಸಂಪ್ರಾದಾಯ, ಪೂಜೆ ಶೈಲಿ ಗಂಗಮ್ಮ ದೇವಿ ಹಸೀ ಕರಗದಲ್ಲಿ ಅಚರಿಸಲಾಗುತ್ತಿದೆ.ರೋಗ,ರುಜಿನಗಳು ಬರಬಾರದು, ನಾಡಿನ ಜನರಿಗೆ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಎಂದು ಗಂಗಮ್ಮ ದೇವಿಯ ಪೂಜೆ ಮಾಡಲಾಗುತ್ತಿದೆ.ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ದೇವಿಯ ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ವಿಶ್ವಪರಿಸರ ದಿನಾಚರಣೆ ಅಂಗವಾಗಿ ಬರುವ ಭಕ್ತಾಧಿಗಳಿಗೆ ಹತ್ತು ಸಾವಿರ ಬೇವಿನ ಮತ್ತು ತುಳಸಿ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.ಸ್ಥಳೀಯ ಸಂಘ, ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಸಹಕಾರ ನೀಡುತ್ತದ್ದಾರೆ ಮತ್ತು ದೇಶಿಯ ಕಲಾತಂಡಗಳಿಗೆ ವಿಶೇಷ ಅವಕಾಶ ನೀಡಲಾಗಿದೆ.ಬೆಂಗಳೂರುನಗರ, ಕೋಲಾರ ಚಿಕ್ಕಬಳ್ಳಾಪುರ, ದೇವನಹಳ್ಳಿ, ಯಲಹಂಕ ,ಮೈಸೂರು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ದೇವಿಯ ದರುಶನಕ್ಕೆ ಆಗಮಿಸಲಿದ್ದಾರೆ.


Share