ಕಲಬುರಗಿ:– ಕರ್ನಾಟಕ ಛಾಯಾಗ್ರಾಹಕರ ಸಂಘದ ವತಿಯಿಂದ ತುಮಕೂರಿನ ಮಾರುತಿ ಮಹರಾಜ ಕನ್ವೆಷನ್ ಹಾಲ್‍ನಲ್ಲಿ ಆಯೋಜಿಸಿದ್ದ 11ನೇ ರಾಜ್ಯಮಟ್ಟದ ಸಮಾವೇಶದ ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಮಹಾಸ್ವಾಮಿಗಳು ಪೋಟೋ ಕ್ಲಿಕ್ ಮಾಡುವ ಮುಲಕ ಸಮಾವೇಶವನ್ನು ಉದ್ಘಾಟಿಸಿದರು.ಅಲ್ಲದೆ ಛಾಯಾ ಸ್ಪಂದನ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ನಾಡಿನ ಛಾಯಾಗ್ರಾಹಕರ ಶ್ರಮ ನಾಡಿಗೆ ಮತ್ತು ರಾಜಕಾರಣಿಗಳಿಗೆ ಬಹು ಮುಖ್ಯವಾಗಿದೆ. ಸಮಾಜದ ಯಾವುದೇ ರೀತಿಯ ಪ್ರಮುಖ ಫೋಟೋ ದಿಂದನೆ ಈ ನಾಡಿನ ನಾವೆಲ್ಲರೂ ಕಾಣಬಹುದು ಎಂದು ಹೇಳಿದರು.ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕಲಬುರಗಿ ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಸಿ ತೋಟದ ಅವರು ಮಾತನಾಡುತ್ತ, ಪ್ರತಿ ಜಿಲ್ಲೆಯಿಂದ ಒಬ್ಬ ಪ್ರತಿನಿಧಿಯಾಗಿ ತೆಗೆದುಕೊಳ್ಳಬೇಕು ಅಂದಾಗ ಮಾತ್ರ ರಾಜ್ಯ ಸಂಘಕ್ಕೆ ಅನುಕೂಲವಾಗುತ್ತೆ. ಅದೇ ರೀತಿ ಎಲ್ಲಾ ಜಿಲ್ಲೆಯಲ್ಲಿ ಕೂಡ ತಾಲ್ಲೂಕಿನ ಒಬ್ಬ ಪ್ರತಿನಿಧಿ ತೊಗಳ್ಳಬೆಕು ಅಂದಾಗ ಮಾತ್ರ ಛಾಯಾಗ್ರಾಕರ ಒಗ್ಗಟ್ಟಾಗಲು ಸಾಧ್ಯ ಇಡೀ ರಾಜ್ಯಾದ ಛಾಯಾಗ್ರಾಹಕರು ಸೇರಿ ಒಗ್ಗಟ್ಟಾಗಿ ಮನವಿ ಮಾಡಿದರೆ ಸರ್ಕಾರದಿಂದ ಯಾವುದೇ ರೀತಿಯಾಗಿ ಸವಲತ್ತುಗಳನ್ನು ತೊಗಳ್ಳಬಹುದು ಎಂದು ಹೇಳಿದರು.ಈ ಸಂಧರ್ಭದಲ್ಲಿ ರಾಜ್ಯಾದ್ಯಕ್ಷ ಎಚ್.ಎಸ್.ನಾಗೇಶ್, ಕಾರ್ಯದರ್ಶಿ ಎ.ಎಂ. ಮುರಳಿ, ಆಳಂದ ತಾಲ್ಲೂಕಿನ ಅಧ್ಯಕ್ಷ ಪ್ರಕಾಶ ಜಂಗಲೆ ಹಾಗೂ ಚಿಂಚೊಳಿ ಅಧ್ಯಕ್ಷ ಸಂಜುಕುಮಾರ, ಉಪಾಧ್ಯಕ್ಷ ಅಂಬರೀಶ್, ಕಾರ್ಯದರ್ಶಿ ಶ್ರೀನಿವಾಸ ಹಾಗೂ ಎಲ್ಲಾ ಜಿಲ್ಲೆಯ ಅನೇಕ ಛಾಯಾಗ್ರಾಹಕರು ಉಪಸ್ಥಿತಿರಿದ್ದರು.
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್