ಸುಲೇಪೇಟದಲ್ಲಿ ಅಶ್ವಾರೂಢ ಬಸವಣ್ಣನವರ ಪುತ್ಥಳಿ ಲೋಕಾರ್ಪಣೆ

ಸುಲೇಪೇಟದಲ್ಲಿ ಅಶ್ವಾರೂಢ ಬಸವಣ್ಣನವರ ಪುತ್ಥಳಿ ಲೋಕಾರ್ಪಣೆ

Share

ಚಿಂಚೋಳಿ:– ತಾಲೂಕಿನ ಸುಲೇಪೇಟ ಗ್ರಾಮದ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ವಿಶ್ವಗುರು ನ್ನು ಡಾ. ಬಸವಲಿಂಗ ಪಟ್ಟದೇವರು ಲೋಕಾರ್ಪಣೆ ಮಾಡಿದರು ನಂತರ ಕಾರ್ಯಕ್ರಮವನ್ನ ಜ್ಯೋತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸುಲೇಪೇಟ್ ಗ್ರಾಮದ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಒಳ್ಳೆಯ ರೀತಿಯಿಂದ ಈ ಕಾರ್ಯಕ್ರಮವನ್ನು ಧನ್ಯವಾದಗಳು ಸಲ್ಲಿಸಿದರು ಏಕೆಂದರೆ ಬಸವೇಶ್ವರ ಮೂರ್ತಿಗಾಗಿ ಸರ್ಕಾರದಿಂದ ಅಥವಾ ಬೇರೆ ಸಮಾಜ ವತಿಯಿಂದ ಒಂದು ರೂಪಾಯಿಯನ್ನು ತೆಗೆದು ಕೊಳ್ಳದೆ ವೀರಶೈವ ಲಿಂಗಾಯತ ಸಮಾಜ ಬಾಂಧವರು ಕೂಡಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿದ್ದಕ್ಕೆ ಬಹಳ ಸಂತೋಷದ ವಿಷಯವಾಗಿದೆ.ವಿಶ್ವಗುರು ಬಸವಣ್ಣ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ ಆದರೆ ವಿಶ್ವಗುರು ಬಸವಣ್ಣನವರು ವಿಶ್ವ ಸಾಂಸ್ಕೃತಿಕ ನಾಯಕ ಎಂದು ಕೇಂದ್ರ ಸರ್ಕಾರವು ಘೋಷಣೆ ಮಾಡಬೇಕೆಂದು ಹೇಳಿದರು. ವಿಶ್ವಗುರು ಬಸವಣ್ಣನವರ ವಚನಗಳು ಇಂದಿನ ಮಕ್ಕಳಿಗೆ ದಿನಾಲು ಎರಡು ಇಲ್ಲ ಮೂರು ವಚನಗಳನ್ನು ಎಲ್ಲಾ ಪಾಲಕರು ಓದಿಸಿ ಮಕ್ಕಳನ್ನು ಮಲಗಿಸಬೇಕು ಯಾಕೆಂದರೆ ಬಸವಣ್ಣನವರ ವಚನಗಳನ್ನು ನಾವೆಲ್ಲರೂ ಮರೆತು ಹೋಗಿದ್ದೇವೆ ಹಾಗಾಗಿ ಮುಂಬರುವ ದಿನಗಳಲ್ಲಿ ನಾವೆಲ್ಲರೂ ಬಸವಣ್ಣನ ವಚನವನ್ನು ಮತ್ತು ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕೆಂದು ಎಂದು ಹೇಳಿದರು ಕಾರ್ಯಕ್ರಮದಲ್ಲಿ ನಾಡೋಜ ಪುರಸ್ಕೃತ ಸಂಸ್ಥಾನ ಹಿರೇಮಠ ಭಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು, ಮಹಾಂತೇಶ್ವರ ಮಠ ಸುಲೇಪೇಟದ ವೀರ ತಪಸ್ವಿ ವೀರಭದ್ರ ಶಿವಾಚಾರ್ಯರು , ಶಿವಶಂಕರ ಮಠ ಸೇಡಂದ ಶಿವಶಂಕರ ಶಿವಾಚಾರ್ಯರು ,ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ ಹುಲಸುರದ ಡಾ. ಶಿವಾನಂದ ಮಹಾಸ್ವಾಮಿಗಳು , ಭರತನೂರ ಚಿಕ್ಕ ಗುರುರಾಜ ಮಹಾಸ್ವಾಮಿಗಳು ,ಕಟ್ಟಿಮನಿ ಹಿರೇಮಠ ಮುಗಳನಾಗಾಂವದ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಸಿದ್ದರಾಮ ಮಹಾಸ್ವಾಮಿಗಳು ವಿರಕ್ತ ಮಠ ರಟಗಲ್, ರೇವಣಸಿದ್ದ ಶಿವಾಚಾರ್ಯರು ಶಿವಲಿಂಗೇಶ್ವರ ಮಠ ರಾಯಕೋಡ್,ಸಿದ್ದಲಿಂಗ ಶಿವಾಚಾರ್ಯರು ಹಿರೇಮಠ ಹೊಸಳ್ಳಿ, ಅಭಿನವ ಪರ್ವತೇಶ್ವರ ಶಿವಾಚಾರ್ಯರು ಹಿರೇಮಠ ಚಂದನಕೇರ, ಶಿವಕುಮಾರ ಶಿವಾಚಾರ್ಯರು ನರನಾಳ, ಪಂಚಾಕ್ಷರಿ ಮಹಾಸ್ವಾಮಿಗಳು ಹಾಲಪ್ಪಯ್ಯ ವಿರಕ್ತಮಠ ಸೇಡಂ, ಸಿದ್ದರಾಮ ಶಿವಾಚಾರ್ಯರು ಸಾಲಿ ಟೆಂಗಿನ ಮಠ ಸುಲೇಪೇಟ,ಖಂಟ್ವಾಂಗೇಶ್ವರ ದೇವರು ಸುಲೇಪೇಟ, ವಿಜಯ ಮಹಾಂತೇಶ್ವರ ಶಿವಾಚಾರ್ಯರು ಐನಾಪುರ, ಪಂಚಾಕ್ಷರಿ ದೇವರು ಐನಾಪುರ, ಶರಣೆ ಅಕ್ಕ ಗಂಗಾಭಿಕ ಹರಳಯ್ಯ ಪೀಠ ಬಸವಕಲ್ಯಾಣ ಅವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷರಾದ ಮುರಗೆಪ್ಪ ಕುಕ್ಕಡಿ,ಮಹಾರುದ್ರಪ್ಪ ದೇಸಾಯಿ,ವಿರೇಶ ದೇಸಾಯಿ, ಸುನಿಲಕುಮಾರ ಕೋರಿ, ಶಿವಕುಮಾರ ಸೊಂತ,ಶಿವಕುಮಾರ ಸೊಂತ, ಮಲ್ಲಿಕಾರ್ಜುನ ದೇಸಾಯಿ, ಶಿವಾನಂದ ಪಾಟೀಲ, ಶಿವಕುಮಾರ ಕಂತಿ,ಜಯಂತ ಶೀಲವಂತ, ಚಂದ್ರಶೇಖರ ಸ್ವಾಮಿ, ಮಹೇಶ ಬೇಮಳಗಿ,ಶಿವಲಿಂಗಯ್ಯ ಶಾಸ್ತ್ರಿ, ದಯಾನಂದ ರೇಮಣಿ,ವಿರೇಶ ಹಿರೆನ್, ಸುಭಾಷ್ ಪಾಟೀಲ್, ರಾಜಕುಮಾರ ಮಳಖೇಡ್, ಅಮರೇಶ ಸೊಂತ,ನಾಗೇಶ ಚಾಂಗಲೇರಾ,ಶರಣಬಸಪ್ಪ ಸೊಂತ,ರಮೇಶ ದೇಸಾಯಿ,ಶರಣು ಮೇದಾರ, ಸಂಗಮೇಶ ಕಂತಿ,ಮಹೇಶ ಅವರಾದಿ, ವೈಜನಾಥ ದಾದಿ, ಮಂಜು ಪಟವಾದಿ, ಲಿಂಗರಾಜ ಸ್ವಾಮಿ, ಸುಲೇಪೇಟ್ ಪಿಎಸ್ ಐ ನಂದಿನಿ ಅವರು ಸೇರಿದಂತೆವೀರಶೈವ ಲಿಂಗಾಯತ ಸಮಾಜದ ಮುಖಂಡರು ಮತ್ತು ಬಸವಾಭಿಮಾನಿಗಳು ಇದ್ದರು.
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್


Share