ಯಡ್ರಾಮಿ ತಾಲೂಕು ಪಂಚಾಯತ್ 2 ಕೋಟಿ ಹಣ ದುರುಪಯೋಗ,ಸದಸ್ಯರು ಇಲ್ಲದ ಪಂಚಾಯತ್ ಅಧಿಕಾರಿ ಆಡಿದ್ದೆ ಆಟ.

ಯಡ್ರಾಮಿ ತಾಲೂಕು ಪಂಚಾಯತ್ 2 ಕೋಟಿ ಹಣ ದುರುಪಯೋಗ,ಸದಸ್ಯರು ಇಲ್ಲದ ಪಂಚಾಯತ್ ಅಧಿಕಾರಿ ಆಡಿದ್ದೆ ಆಟ.

Share

ಯಡ್ರಾಮಿ:ತಾಲೂಕ ಪಂಚಾಯತಿಯ ಅನಿರ್ಭಂದಿತ ಯೋಜನೆಯ ರಿಪೇರಿ ಕಾಮಗಾರಿಗಳು ಸಂಪೂರ್ಣ ಹಣ ರಿಪೇರಿ ಕಾಮಗಾರಿ ಮಾಡದೇ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಿಸಿಲು ನಾಡಿನ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಶಪೀ ಉಲ್ಲಾ ದಖನಿ ಆರೋಪಿಸಿದ್ದಾರೆ.ತಾಲೂಕ ಪಂಚಾಯತಿಯಾಗಿ ಹಲವಾರು ವರ್ಷಗಳು ಕಳೆದರೂ ಕೂಡ ಚುನಾವಣೆ ಆಗದೆ ಚುನಾಯಿತ ಸದಸ್ಯರು ಇಲ್ಲದೆ ಇರುವದರಿಂದ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಆಡಳಿತ ಮಾಡುತ್ತಿದ್ದಾರೆ.2023-24 ಸಾಲಿನ ನಿರ್ಭಂದಿತ ಯೋಜನೆ ಅಡಿಯಲ್ಲಿ ಸುಮಾರು 2 ಕೋಟಿಯ ತಾಲೂಕನ 16 ಪಂಚಾಯತಿ ವ್ಯಾಪ್ತಿಯಲ್ಲಿ ಸುದಾರಣಾ ಕಾಮಗಾರಿಗಳಾದ ಶಾಲಾ ಅಂಗನವಾಡಿ ಕಂಪೊಂಡ್ ವಾಲ್ ರಿಪೇರಿಯ ಹೀಗೆ ಮಾಡಬೇಕು.
ಮಹಾಂತೇಶ ಪುರಾಣಿಕ ಪ್ರಭಾರಿ ಕಾರ್ಯನಿರ್ವಾಹಕ ತಾಲೂಕು ಪಂಚಾಯತಿ ಅಧಿಕಾರಿಯೂ ಪ್ರತಿಯೊಂದು ಗ್ರಾಮಗಳಿಗೆ ಬೇಟೆ ನೀಡಿ ಕಾಮಗಾರಿ ಕ್ರೀಯಾಯೋಜನೆ ಮಾಡಬೇಕು ತಮ್ಮ ಬೇಕಾದ ಮುಖಂಡರು ಹೇಳಿದ ಕಾಮಗಾರಿ ಕ್ರೀಯಾಯೋಜನೆ ಮಾಡಿ ಬಿಲ್ ಮಾಡಿಕೊಂಡಿದ್ದಾರೆ.ಹೊಸ ಕಟ್ಟಡಗಳಿಗೂ ರಿಪೇರಿ ಮಾಡಲಾಗಿದೆ ಹಾಗೂ ಕೆಲವು ಕಾಮಗಾರಿಯೂ ಸುಣ್ಣ ಬಣ್ಣ ಹಚ್ಚಿ ರಪೇರಿ ಮಾಡಲಾಗಿದೆ ಎಂದು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದು.ಯಾವುದೇ ಕಾಣಕ್ಕೂ ಸ್ಥಳೀಯರನ್ನು ಅಧಿಕಾರಿಯಾಗಿ ನೀಡಬಾರದು ಹೀಗೆ ಇದ್ದರು ಕೂಡ ಪ್ರಭಾರಿಯಾಗಿ ಸುಮಾರು ಎರಡೂ ವರ್ಷಗಳಿಂದ ಕಾರ್ಯ ಮಾಡುತ್ತಿದ್ದು ತಕ್ಷಣ ಜಿಲ್ಲಾ ಆಡಳಿತ ಸುಕ್ತವಾದ ತನಿಖೆ ಕೈಗೊಂಡು ಕಾನೂನು ಕ್ರಮಕೈಗೊಳ್ಳಬೇಕು.ಈಗಾಗಲೇ ಹಲವಾರು ಸಾರ್ವಜನಿಕರು ಜಿಲ್ಲಾ ಪಂಚಾಯತಿ ಕಾರ್ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಯಾವುದೇ ಕ್ರಮ ಮಾತ್ರ ಇಲ್ಲ ಹೀಗೆ ಮುಂದುವರಿದರೆ ತಾಲೂಕಿನಲ್ಲಿ ಉಗ್ರಹವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕ್ಕೆ ನೀಡಿದ್ದಾರೆ.
ಹೇಳಿಕೆ1:ತಾಲೂಕಿನ ಎಲ್ಲಾ ಗ್ರಾಮಗಳಿಗೂ ಬೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಬಿಲ್ ಮಾಡಲಾಗಿದ್ದು.ಯಾವುದೇ ದುರುಪಯೋಗ ಕಂಡು ಬಂದಿಲ್ಲ.ಮಹಾಂತೇಶ ಪುರಾಣಿಕ.ಪ್ರಭಾರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಯಡ್ರಾಮಿ.
ಹೇಳಿಕೆ2:ಸ್ಥಳೀಯರನ್ನು ಪ್ರಭಾರಿ ತಾಲೂಕು ಪಂಚಾಯತಿ ಅಧಿಕಾರಿಗಳಾಗಿ ನೀಡಿದ್ದರಿಂದ ಎಲ್ಲಾ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ತಕ್ಷಣ ತನಿಖೆ ಮಾಡಿ.ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ಶಪೀ ಉಲ್ಲಾ ದಖನಿ ಬಿಸಿಲು ನಾಡಿನ ಹಸಿರು ಸೇನಯ ಜಿಲ್ಲಾ ಅಧ್ಯಕ್ಷರು.


Share