ರಷ್ಯಾ: ಸೇಂಟ್ ಪೀಟರ್ಸ್ ಬರ್ಗ್ ಬಳಿ ನದಿಯಲ್ಲಿ ಮುಳುಗಿ 4 ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಸಾವು

ರಷ್ಯಾ: ಸೇಂಟ್ ಪೀಟರ್ಸ್ ಬರ್ಗ್ ಬಳಿ ನದಿಯಲ್ಲಿ ಮುಳುಗಿ 4 ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಸಾವು

Share

ಮಾಸ್ಕೋ: ರಷ್ಯಾದ ನದಿಯಲ್ಲಿ ಮುಳುಗಿ ನಾಲ್ವರು ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಓರ್ವನನ್ನು ರಕ್ಷಿಸಲಾಗಿದೆ.

ಸೈಂಟ್‌ ಪೀಟರ್ಸ್‌ಬರ್ಗ್‌ ಬಳಿ ನದಿಯಲ್ಲಿ ಈ ಅವಘಡ ಸಂಭವಿಸಿದೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ದೃಢಪಡಿಸಿದೆ. ಶವಗಳನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲು ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯ ಮೃತಪಟ್ಟಿದ್ದು, ಇವರ ವಯಸ್ಸು ಅಂದಾಜು 18-20 ವರ್ಷ. ಇವರು ವೆಲಿಕಿ ನೊವ್ಗೊರೊಡ್ ನಗರದ ಸಮೀಪದಲ್ಲಿರುವ ನೊವ್ಗೊರೊಡ್ ಸ್ಟೇಟ್ ಯೂನಿವರ್ಸಿಟಿ(Novgorod State University)ಯಲ್ಲಿ ಅಧ್ಯಯನ ಮಾಡುತ್ತಿದ್ದರುʼʼ ಎಂದು ಮೂಲಗಳು ವರದಿ ಮಾಡಿವೆ.

ವೋಲ್ಖೋವ್ ನದಿಗೆ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಲು ಆಕೆಯ ನಾಲ್ವರು ಸ್ನೇಹಿತರು ಯತ್ನಿಸಿದ ವೇಳೆ ಈ ದುರಂತ ನಡೆದಿದೆ. ಈ ಪೈಕಿ ಓರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾದ ಮಾಧ್ಯಮಗಳು ಹೇಳಿವೆ. ಸಾಧ್ಯವಾದಷ್ಟು ಬೇಗ ಶವಗಳನ್ನು ಸಂಬಂಧಿಕರಿಗೆ ಕಳುಹಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಅಪಾಯದಿಂದ ಪಾರಾದ ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.


Share