ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯ

ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯ

Share

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಾರದಹಳ್ಳಿಯ ಶ್ರೀ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಬಾದ್ಮಿ ಅಮಾವಾಸ್ಯೆಯ ನಿಮಿತ್ತ ಸುಕ್ಷೇತ್ರ ದೇವರ ಗೋನಾಲದ ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಬುಧವಾರ ಜರುಗಿದ ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಸ್ವರ ಸಿರಿ ರಾಜ್ಯ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು.ಸತತ ಒಂಭತ್ತು ತಿಂಗಳಿಂದ ಪ್ರತೀ ಅಮವಾಸ್ಯೆಯಂದು ಜಗದ್ಗುರು ಶ್ರೀ ಮೌನೇಶ್ವರ ಸಂಗೀತ ಸೇವಾ ಬಳಗ ಇವರ ವತಿಯಿಂದ ನಡೆಸಿಕೊಂಡು ಬಂದಿರುವ ಅಹೋರಾತ್ರಿ ಸಂಗೀತ ಕಾರ್ಯಕ್ರಮವು ಗುರುವಾರದ ಬಾದ್ಮಿ ಅಮವಾಸ್ಯೆಯಂದು ತನ್ನ ಹತ್ತನೆಯ ಸರಣೀ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಶಂಕ್ರಪ್ಪ ವಿ. ಆಚಾರ್ಯ ಚಾರಿಟೇಬಲ್ ಟ್ರಸ್ಟ್ (ರಿ.) ಶಾರದಹಳ್ಳಿ ಇವರ ವತಿಯಿಂದ ಹಿರಿಯ ಸಂಗೀತ ಕಲಾವಿದರಾದ ಶ್ರೀ ಮೌನೇಶ ವಿಶ್ವಕರ್ಮ ಹಂದಿಗನೂರ ಇವರಿಗೆ ಸ್ವರ ಸಿರಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿ, ಬಸವರಾಜ ಎಂ. ವಿಶ್ವಕರ್ಮ ಸೈದಾಪುರ ಇವರಿಗೆ ವಿಶೇಷ ಸನ್ಮಾನ ನೆರವೇರಿಸಲಾಯಿತು. ನಂತರ ಪ್ರಾಸ್ತಾವಿಕ ಮಾತನಾಡಿದ ರಮೇಶ ಎಂ ವಿಶ್ವಕರ್ಮ ಸಗರ ರವರು, ಪ್ರತೀ ಅಮವಾಸ್ಯೆಯ ಸಂಗೀತ ಕಾರ್ಯಕ್ರಮದಲ್ಲಿ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಶ್ಲಾಘನೀಯ ಕಾರ್ಯವೆಂದರು.ನಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶಹಾಪುರ ನಗರದ ಶ್ರೀ ವಿಶ್ವಕರ್ಮ ಏಕದಂಡಿಗಿ ಮಠದ ಪೂ. ಶ್ರೀ ವಿರುಪಾಕ್ಷ ಸ್ವಾಮಿಗಳು ಆಶಿರ್ವಚನ ನೀಡಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪೂ. ಶ್ರೀ ಲಿಂಗಯ್ಯ ಸ್ವಾಮಿಗಳು ಹಾಗೂ ಸಂಗೀತ ಕಲಾವಿದರು, ಸಮಾಜದ ಹಿರಿಯರು, ನಿರೂಪಕ ಬಾಲರಾಜ ಎಂ ವಿಶ್ವಕರ್ಮ ಅರಳಗುಂಡಗಿರವರು, ಯುವಕರು, ದೇವರ ಗೋನಾಲದ ಗ್ರಾಮಸ್ಥರು ಇನ್ನೀತರರು ಉಪಸ್ಥಿತರಿದ್ದರು.


Share