ಗಂಗಾವತಿ:ಗುತ್ತಿಗೆದಾರರಾದ ಎಂ.ರವಿಚಂದ್ರರವರು ತಮ್ಮ ಹುಟ್ಟುಹಬ್ಬದ ನಿಮಿತ್ಯ,ಗಂಗಾವತಿ ನಗರದ ಲಯನ್ಸ್ ಬುದ್ಧಿಮಾಂಧ್ಯ ಶಾಲೆಯ ಮಕ್ಕಳಿಗೆ, ತಾಲೂಕಿನ ಹೊಸಕೇರ ಕ್ಯಾಂಪ್ ಮತ್ತು ಸವಳಕ್ಯಾಂಪ್ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್‌ಬುಕ್‌ಗಳ ವಿತರಣೆ ಹಾಗೂ ಅನ್ನಸಂತರ್ಪ ಮಾಡಿ, ನಂತರ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ) ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಅನ್ನ ಸಂತರ್ಪಣೆ ಮಾಡುವ ಮೂಲಕ “ನಿಮ್ಮೊಂದಿಗೆ ನಾವಿದ್ದೇವೆ” ಎನ್ನುವ ಸಂದೇಶದೊAದಿಗೆ ತಮ್ಮ ಹುಟ್ಟುಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸಿಕೊಂಡರು.ಲಯನ್ಸ್ ಬುದ್ಧಿಮಾಂಧ್ಯ ಶಾಲೆಯ ಮುಖ್ಯೋಪಾಧ್ಯಾಯರು, ಹೊಸಕೇರಕ್ಯಾಂಪ್ ಹಾಗೂ ಸವಳಕ್ಯಾಂಪ್ ಶಾಲೆಗಳ ಮುಖ್ಯೋಪಾಧ್ಯಾಯರು ಎಂ. ರವಿಚಂದ್ರರವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸುತ್ತ, ನೊಂದವರ ಬಾಳಿಕೆ ಬೆಳಕಾಗುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಲು ದೇವರು ಇವರಿಗೆ ಶಕ್ತಿ ನೀಡಲಿ ಎಂದು ಆಶಿಸಿದರು.ಸಿಂಧನೂರಿನ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ, ಎಂ. ರವಿಚಂದ್ರರವರು ಪ್ರತಿ ವರ್ಷವೂ ಕೂಡ ನಮ್ಮ ಕರುಣೆಯ ಕಾರುಣ್ಯ ಕುಟುಂಬದಲ್ಲಿ ಕರುಣೆಯ ಕಾರುಣ್ಯ ಮೂರ್ತಿಗಳಾಗಿ ತಮ್ಮ ಜನ್ಮದಿನ ಮತ್ತು ತಮ್ಮ ಸ್ನೇಹಿತರ ವಿಶೇಷ ಕಾರ್ಯಕ್ರಮಗಳನ್ನು ಕಾರುಣ್ಯಾಶ್ರಮದಲ್ಲಿ ನೆರವೇರಿಸುವ ಮೂಲಕ ಕಾರುಣ್ಯ ಕುಟುಂಬದ ಹಸಿವು ನೀಗಿಸುತ್ತಿದ್ದಾರೆ. ಇಂತಹ ಕರುಣಾಮಯಿಗಳಿಂದ ಕಾರುಣ್ಯ ಆಶ್ರಮದ ದೈನಂದಿನ ಬದುಕು ಸಾಗುತ್ತಿದೆ. ಇವರಿಗೆ ಭಗವಂತ ಐಶ್ವರ್ಯ, ಸಿರಿ ಸಂಪತ್ತು, ಆಯುಷ್ಯ, ಆರೋಗ್ಯ ಕರುಣಿಸಲೆನ್ನುವ ವಿಶೇಷ ಪ್ರಾರ್ಥನೆಯೊಂದಿಗೆ ಅವರಿಗೆ ಶುಭ ಹಾರೈಸುತ್ತೇವೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಲಯನ್ಸ್ ಬುದ್ಧಿಮಾಂಧ್ಯ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಗಳು, ಹೊಸಕೇರಾಕ್ಯಾಂಪ್, ಸವಳಕ್ಯಾಂಪ್ ಸರಕಾರಿ ಶಾಲಾ ಸಿಬ್ಬಂದಿಗಳು, ಎಂ. ರವಿಚಂದ್ರರವರ ಗೆಳೆಯರ ಬಳಗದ ಜೊತೆಗೆ ನಾಗಲಿಂಗೇಶ್ವರಗೌಡ, ರವಿಕುಮಾರ, ಮಂಜುನಾಥ, ಜಿ. ಈರಬಾಬು, ಭಾಷಾಸಾಬ್, ಹುಸೇನಭಾಷಾ, ಉದಯ್, ಆದಮ್, ನಾಗರಾಜ, ಖಾಸೀಮ್, ತನ್ವೀರ್, ರಾಜಾಸಿಂಗ್, ಸಂತೋಷ, ಶೇಖರ, ಆಲಂ ಹಾಗೂ ಸಿಂಧನೂರಿನ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ, ಶರಣಮ್ಮ, ಸಿದ್ದಯ್ಯ ಸ್ವಾಮಿ, ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.