ಕೆಎಸ್ ಆರ್ ಟಿಸಿ ಬಸ್ ಹಾಗೂ ಬುಲೆರೋ ನಡುವೆ ಭೀಕರ ಅಪಘಾತ

ಕೆಎಸ್ ಆರ್ ಟಿಸಿ ಬಸ್ ಹಾಗೂ ಬುಲೆರೋ ನಡುವೆ ಭೀಕರ ಅಪಘಾತ

Share

ಸಿದ್ದಾಪುರ: ಸಿದ್ದಾಪುರ ಸಾಗರ ರಾಜ್ಯ ಹೆದ್ದಾರಿಯ ಅರೆಂದೂರು ಸಮೀಪ ಸಾರಿಗೆ ಬಸ್ ಹಾಗೂ ಪಿಕ್ಅಪ್ ವಾಹನದ ನಡುವೆ ಭೀಕರ ಡಿಕ್ಕಿ ಸಂಭವಿಸಿ ಪಿಕ್ಅಪ್ ವಾಹನ ಚಾಲಕನಿಗೆ ತೀವ್ರತರನಾದ ಗಾಯಗಳಾದ ಘಟನೆ ಸಂಭವಿಸಿದೆ. ಶಿರಸಿಯಿಂದ ಸಾಗರಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಹಾಗೂ ಸಾಗರ ಕಡೆಯಿಂದ ಸಿದ್ದಾಪುರ ಕಡೆಗೆ ಪಿಕ್ಅಪ್ ವಾಹನ ಬರುತ್ತಿತ್ತು ಎನ್ನಲಾಗಿದ್ದು, 8 ಕ್ಕೂ ಹೆಚ್ಚು ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ. ಪಿಕ್ಅಪ್ ವಾಹನ ಸಾಗರದ್ದೆಂದು ಹೇಳಲಾಗಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ತನಿಖೆಯಿಂದ ಸ್ವಷ್ಟ ಚಿತ್ರಣ ಸಿಗಲಿದೆ


Share