ಕುಮಟಾ: ಬಹು ನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾದ ಯಶಸ್ಸು ಸಾಧಿಸಲೆಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ತಾಲೂಕಿನ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಕಾಂತಾರ ಸಿನಿಮಾ ಬಹು ಯಶಸ್ಸು ಕಂಡಿತ್ತು.ಡಿವೈನ್ ಸ್ಟಾರ್ ಎಂದೇ ಹೆಸರಾದ ರಿಷಬ್ ದೈವಗಳ ಅಪ್ಪಣೆಯಂತೆ ಕಾಂತಾರ ಚಾಪ್ಟರ್ 1 ಕ್ಕೆ ತಯಾರಿ ನಡೆಸಿದ್ದರು. ಅದರಂತೆ ಸಿನಿಮಾದ ಯಶಸ್ಸು ಕೋರಿ ಗೋಕರ್ಣದ ಮಹಾಗಣಪತಿ ಹಾಗೂ ಮಹಾಬಲೇಶ್ವರ ದೇವಾಲಯಕ್ಕೆ ಕುಟುಂಬದೊಟ್ಟಿಗೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ.ದೇವಾಲಯದ ಅರ್ಚಕ ರಾಜಗೋಪಾಲ್ ಅಡಿ ನೇತೃತ್ವದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ರಿಷಬ್ ನೆರವೇರಿಸಿದ್ದಾರೆ.ಈಗಾಗಲೇ ಹಲವು ದೇವಾಲಯಗಳಿಗೆ, ದೈವ ಸ್ಥಾನಗಳಿಗೂ ಭೇಟಿ ನೀಡಿರುವ ರಿಷಬ್ ಎಲ್ಲೆಡೆ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.