ಭೂಮಿ ಹಸಿ ಆಗುವುದು ಮಳೆಯ ಕೃಪೆಯಿಂದ
ಮನಸ್ಸಿಗೆ ನೋವಾಗುವುದು ಇನ್ನೊಬ್ಬ ಬೈಗುಳದಿಂದ
ಬಿಸಿಲು ಹೆಚ್ಚಾಗುವುದು ಮರ ಇಲ್ಲದೆ ಇರುವುದರಿಂದ
ಇರಲಿ ಊರಲ್ಲಿ ವನ ಮರೆಯದಿರು ಮರನೆಡುವುದು
ಹಸಿರು ಉಸಿರು ಉಸಿರಿಗೆ ಬೇಕು ಹಸಿರಿನಗಾಳಿ
ಮನಸ್ಸಿನ ನೆಮ್ಮದಿಗೆ ಇರಲಿ ಶುದ್ಧ ಸೊಗಸಾದಗಾಳಿ
ಮನೆಗೊಂದು ಮಗು ಊರಿಗೊಂದು ವನಮರೆಯದಿರು
ಕಛೇರಿ ಶಾಲೆಯ ಆವರಣದಲ್ಲಿ ಇರಲಿ ಒಂದು ಮರ
ಪ್ರಜ್ಞಾವಂತರ ಮಾತು ಪ್ರತಿಯೊಬ್ಬರ ಆಜ್ಞೆ ಆಗಲಿ
ಬಿಸಿಲು ಓಡಿಸಿ ಆರೋಗ್ಯ ನಿಸರ್ಗದ ಗಾಳಿ ಇರಲಿ
ಮನೆಯ ಮುಂದೆ ಇರಲಿ ಒಂದು ಹೆಮ್ಮೆರ ಊರಲ್ಲಿ
ಪರಿಸರ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಇರಲಿ
ಪಕ್ಷಿಪ್ರಾಣಿಗಳಿಗೆ ಗೂಡು ಕಟ್ಟುವಕನಸು ಇಂದುಕಾಣೆವು
ಬದುಕು ಕಟ್ಟಿಕೊಳ್ಳಲು ತುದಿಗಾಲಲ್ಲಿ ಇರುವುದುಕಾಣೆವು
ಪ್ರಕೃತಿ ಒಡಲು ಖುಷಿ ಪಡೆಯಲು ಗಿಡವನ್ನು ಕಾಣೆವು
ಮನಸ್ಸಿನ ಸ್ಪರ್ಶದಲ್ಲಿ ಹುಟ್ಟಲ್ಲಿಮರವು ಬೆಳೆಸುವುದು