ಯಡ್ರಾಮಿ ತಾಲೂಕಿನಲ್ಲಿ ಅಗ್ನಿಶಾಮಕ ಕಚೇರಿ ಶೀಘ್ರದಲ್ಲಿ ಆರಂಭವಾಗಲಿ ಶಿವಶಂಕರ್ ಗುಂಡಗೂರ್ತಿ.

ಯಡ್ರಾಮಿ ತಾಲೂಕಿನಲ್ಲಿ ಅಗ್ನಿಶಾಮಕ ಕಚೇರಿ ಶೀಘ್ರದಲ್ಲಿ ಆರಂಭವಾಗಲಿ ಶಿವಶಂಕರ್ ಗುಂಡಗೂರ್ತಿ.

Share

ಯಡ್ರಾಮಿ
ತಾಲೂಕಿನಲ್ಲಿ ಅತಿ ಶೀಘ್ರದಲ್ಲಿ ಅಗ್ನಿಶಾಮಕ ಕಚೇರಿ ನಿರ್ಮಾಣವಾಗಬೇಕೆಂದು ಅಹಿಂದ ಸಂಘಟನಾ ತಾಲೂಕ ಅಧ್ಯಕ್ಷ ಶಿವಶಂಕರ ಗುಂಡಗೂರ್ತಿ ಬಳಬಟ್ಟಿಯವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಯಾಕೆಂದರೆ ಯಡ್ರಾಮಿ ತಾಲೂಕಿನ ರೈತರು ಕಬ್ಬು ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಕೆಲವು ಸಮಯದಲ್ಲಿ ರೈತರ ಬೆಳೆಗಳು ಆಕಸ್ಮಿಕ ಬೆಂಕಿಗೆಆಹುತಿಯಾಗಿ ಸುಟ್ಟುಹೋದ ಹಲವಾರು ಉದಾಹರಣೆಗಳು ನಮ್ಮ ಕಣ್ಮುಂದೆಯೆ ಇವೆ ಆದರೆ ಜೆವರ್ಗಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ಇದೆ ಆದರೆ ಆ ತಾಲೂಕಿನಿಂದ ಈ ನಮ್ಮ ತಾಲೂಕಿಗೆ ಅಗ್ನಿಶಾಮಕ ವಾಹನ ಬರುವದು ತುಂಬಾ ಸಮಯ ಹಿಡಿಯುತದೆ ಆದಕಾರಣ ಯಡ್ರಾಮಿ ತಾಲೂಕಿನಲ್ಲಿ ಈ ಭಾಗದ ರೈತರ ಹಿತ ದೃಷ್ಟಿಯಿಂದ ಕೂಡಲೆ ಒಂದು ಅಗ್ನಿಶಾಮಕ ಠಾಣೆಯನ್ನು ಮಂಜೂರು ಮಾಡುವದಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಗಮನಕ್ಕೆ ಅತಿ ಶೀಘ್ರದಲ್ಲಿ ತರುವದಾಗಿ ಈ ಭಾಗದ ರೈತರ ಹಿತ ದೃಷ್ಟಿಯಿಂದ ಅಗ್ನಿಶಾಮಕ ಠಾಣೆಯನ್ನು ಮಂಜೂರು ಮಾಡೆ ಮಾಡಿಸ್ತೀವಿ ಅಂತ ಅಹಿಂದ್ ಸಂಘಟನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಶಿವಶಂಕರ್ ಗುಂಡುಗುರ್ತಿ ಬಳಬಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share