ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು: ಸಚಿವ ಸ್ಥಾನಕ್ಕೆ ಚಲುವರಾಯಸ್ವಾಮಿ ರಾಜಿನಾಮೆ?

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು: ಸಚಿವ ಸ್ಥಾನಕ್ಕೆ ಚಲುವರಾಯಸ್ವಾಮಿ ರಾಜಿನಾಮೆ?

Share

ಮಂಡ್ಯ: ಶತಾಯ ಗತಾಯ ಮಂಡ್ಯದಲ್ಲಿ ಕುಮಾರಸ್ವಾಮಿ ಅವರನ್ನು ಸೋಲಿಸಬೇಕೆಂದು ತೊಡೆ ತಟ್ಟಿದ್ದ ಮಂಡ್ಯ ಕೈ ನಾಯಕರಿಗೆ ಇದೀಗ ತೀವ್ರ ಮುಖಭಂಗವಾಗಿದೆ.

ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಸೋತರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಇರಬೇಕಾಗುತ್ತೆ ಎಂದು ಸಚಿವ ಚಲುವರಾಯಸ್ವಾಮಿ ಬಹಿರಂಗವಾಗಿ ಹೇಳಿದ್ದರು. ಇದೀಗ ಆ ಹೇಳಿಕೆಯನ್ನು‌ ಜೆಡಿಎಸ್ ಕಾರ್ಯಕರ್ತರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಸೋತರೆ ಸಚಿವ ಸ್ಥಾನಕ್ಕೆ‌ ರಾಜೀನಾಮೆ ಕೊಡಬೇಕಾಗುತ್ತೆ. ಚುನಾವಣೆ ಸೋತರೇ ನನಗೆ ಕೆಲಸ ಮಾಡುವುದಕ್ಕೆ ಮನಸು ಬರಲ್ಲ. ಸಂಪುಟದಲ್ಲಿ ತಲೆ ಎತ್ತಿ ಮಾತಾಡಲು ಆಗಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಕೆಲಸ ಮಾಡಬೇಕು.

ಈ ಚುಣಾವಣೆಯಲ್ಲಿ ಸೋತರೆ ಅಳಲ್ಲ, ಯಾರ ಕೈಗೂ ಸಿಗುವುದಿಲ್ಲ. ಎರಡು ತಿಂಗಳು ಎಲ್ಲಾದರೂ ಹೊರಗಡೆ ಪ್ರವಾಸಕ್ಕೆ ಹೋಗುತ್ತೇನೆ. ಮೊಬೈಲ್​ ನ ಹಳೇ ಸಿಮ್ ಕಿತ್ತೆಸೆದು ಹೊಸ ಸಿಮ್ ಹಾಕಿಕೊಳ್ತೇನೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿ, ನೆಮ್ಮದಿಯಾಗಿ ಇರ್ತೀನಿ ಎಂದು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಚಲುವರಾಯಸ್ವಾಮಿ ಭಾಷಣ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಚಲುವರಾಯಸ್ವಾಮಿ ರಾಜೀನಾಮೆ ಬಗ್ಗೆ ಚರ್ಚೆ ಜೋರಾಗಿದೆ.


Share