ಮಲ್ಲಾ (ಬಿ) ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕರ್ತವ್ಯಲೋಪ ದೇವು ದೊರೆ ಆಕ್ರೋಶ..

ಮಲ್ಲಾ (ಬಿ) ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕರ್ತವ್ಯಲೋಪ ದೇವು ದೊರೆ ಆಕ್ರೋಶ..

Share

ಸುರಪುರ ತಾಲೂಕಿನ ಮಲ್ಲಾ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರದೇ ವೈದ್ಯರು ಹಾಗೂ ಸಿಬ್ಬಂದಿಗಳು ಕರ್ತವ್ಯಾಲೋಪವೆಸಗಿದ್ದಾರೆ. ಇಂದು ಬೆಳಗಿನ ಜಾವ 8:ಗಂಟೆಗೆ ಸ್ಥಳೀಯ ರೋಗಿಯೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಗೆ ಬೀಗ ಹಾಕಿರುವುದು ಕಂಡುಬಂದಿದೆಯಾದರಿಂದ ಇ ಕೂಡಲೇ ಕರ್ತವ್ಯಕ್ಕೆ ಹಾಜರಾಗದೆ ಕರ್ತವ್ಯಾಲೋಪವೆಸಗಿದ ವೈದ್ಯರನ್ನು ಬೇರೆ ಕಡೆ ವರ್ಗಾವಣೆ ಮಾಡಿ ಬೇರೆ ವೈದ್ಯಧಿಕಾರಿಗಳನ್ನು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಅಧ್ಯಕ್ಷರಾದ ದೇವು ದೋರೆ ಅವ್ರು ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿಗಳಿಗೆ ಮತ್ತು ಸುರಪುರ ತಾಲೂಕ ವೈದ್ಯಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೇಳಿಕೆ ಸಮಯಕ್ಕೆ ಸರಿಯಾಗಿ ವೈದ್ಯರು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿಲ್ಲವಾದರಿಂದ ಈ ಅಧಿಕಾರಿಗಳ ವಿರುದ್ಧ ಸುರಪುರ ತಾಲೂಕ ವೈದ್ಯಧಿಕಾರಿಗಳಿಗೆ ದೂರು ಕೊಡಲಾಗಿದೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಅಧ್ಯಕ್ಷರು ದೇವು ದೊರೆ.
ವರದಿ ಜೆಟ್ಟೆಪ್ಪ ಎಸ್ ಪೂಜಾರಿ


Share