ಬಿಳವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ..

ಬಿಳವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ..

Share

ಯಡ್ರಾಮಿ
ತಾಲೂಕಿನ ಬಿಳವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದ ಕುರಿತು ಬಸಯ್ಯ ಸಾಲಿಮಠ ಮುಖ್ಯ ಗುರುಗಳು ಮಾತನಾಡಿದರು . ಪರಿಸರ ಅಥವಾ ಅರಣ್ಯ ನಾಶದಿಂದ ಪ್ರಕೃತಿಯಲ್ಲಿ ಏರುಪೇರಾಗುತ್ತಿದ್ದು ಮರಗಳ ಮಾರಣಹೋಮದಿಂದ ರಾಜ್ಯದಲ್ಲಿ ಹಾಗೂ ದೇಶದಲ್ಲಿ ವಣ ಹವಾಮಾನ ಮುಂದುವರೆದು ಮಳೆಯ ಪ್ರಮಾಣ ಗರಿಷ್ಠವಾಗಿ ಕಡಿಮೆಯಾಗುತ್ತಿದೆ ಇದಕ್ಕೆಲ್ಲ ಕಾರಣ ನಮ್ಮ ಸುತ್ತಲಿನ ಪರಿಸರ ಹಸಿರುಮಯವಾಗ ಬೇಕು. ಆದರೆ ಸುಮಾರು 20 ವರ್ಷಗಳ ಹಿಂದಿನ ಹವಮಾನ ಈಗಿಲ್ಲ ಎಲ್ಲಿ ಬೇಕಾದರಲ್ಲಿ ಕಾಂಕ್ರೀಟ್ ರೋಡು ಕಾಂಕ್ರೀಟ್ ಮನೆಗಳು ಎಲ್ಲವೂ ಕಾಂಕ್ರೀಟ್ಮಯವಾಗಿರುವಾಗ ನೈಸರ್ಗಿಕ ವಿಕೋಪ ಉಂಟಾಗಿ ಕುಡಿಯುವ ನೀರಿಗೆ ಹಾಹಾಕಾರ ತಲೆದೂರಿ .ಎಸಿ ರೂಮ್ .ಎಸಿ ಫ್ಯಾನು ಫಿಲ್ಟರ್ ನೀರು ಕುಡಿಯುವ ಸಂದರ್ಭ ಇಂದಿನ ಪೀಳಿಗೆಗೆ ಬಂದಿದ್ದು ದುರ್ದೇವದ ಸಂಗತಿ. ನೈಸರ್ಗಿಕವಾಗಿ ಪ್ರತಿಯೊಬ್ಬ ಮಕ್ಕಳು ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಬೇಕು ತಮ್ಮ ತಮ್ಮ ಮನೆಗಳಲ್ಲಿ ಮರಗಳನ್ನು ಬೆಳೆಸಬೇಕು ಅರಣ್ಯ ನಾಶವನ್ನು ತಪ್ಪಿಸಬೇಕು ಮರಗಳ ಮಾರಣಹೋಮ ಮಾಡುವಂತಹ ನರಹಂತಕರಿಗೆ ಸಂಬಂಧಪಟ್ಟ (ಫಾರೆಸ್ಟ್ )ಅರಣ್ಯ ಇಲಾಖೆಗೆ ದೂರು ಕೊಡಬೇಕು ಅಂದಾಗ ಮಾತ್ರ ನೈಸರ್ಗಿಕ ಅರಣ್ಯ ಸಂಪತ್ತು ಉಳಿಯಲು ಕಾರಣವಿದೆ ಒಂದು ವೇಳೆ ಹೀಗೆ ಮುಂದುವರೆದರೆ ಒಣಹವಮಾನ ಮುಂದುವರೆದು ಮಾನವ ಕುಲ ನಾಶವಾಗುವುದರಲ್ಲಿ ಸಂದೇಹವಿಲ್ಲ ಈಗಾಗಲೇ ಭೂಮಿಯ ಮೇಲೆ ನೈಸರ್ಗಿಕ ಸಂಪತ್ತು ಶೇಕಡ 80ರಷ್ಟು ಅರಣ್ಯ ಪ್ರದೇಶ ನಾಶವಾಗಿದೆ ಇದಕ್ಕೆಲ್ಲ ಕಾರಣ ಮಾನವನ ಹಣದ ದಾಹಕ್ಕೆ ಬಲಿಯಾಗಿದ್ದೆ ಆದ್ದರಿಂದ ಇಂದಿನ ಪೀಳಿಗೆ ಕೂಡಲೆ ಎಚ್ಚೆತ್ತುಕೊಂಡು ಮನೆಗೊಂದು ಮರ ಬೆಳೆಸಲು ಪಣತೊಡಬೇಕು ಪ್ರತಿಯೊಬ್ಬರೂ ಪರಿಸರದ ಉಳುವಿಗೆ ಶ್ರವಿಸಬೇಕೆಂದು ಶಾಲೆಯ ಮುಖ್ಯ ಗುರುಗಳಾದ ಬಸಯ್ಯ ಸಾಲಿಮಟ್ಟವರು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು ಹಾಗೂ ಈ ಕಾರ್ಯಕ್ರಮದಲ್ಲಿ ನಿಜಲಿಂಗಪ್ಪ ಮಾನವಿ ಶಿಕ್ಷಕರು ದೈಹಿಕ ಶಿಕ್ಷಕರಾದ ನಬಿಲಾಲ್ ನಾಟಿಕರ್ ಮತ್ತು ಸಾಯ್ಬಣ್ಣ ಶಿಕ್ಷಕರು ರವೀಂದ್ರ ಸಹ ಶಿಕ್ಷಕರು ಬಸವರಾಜ್ ತಳಗೇರಿ ಸಹ ಶಿಕ್ಷಕರು ಮತ್ತು ಶ್ರೀಮತಿ ರಾಧಿಕಾ ಮೇಡಂ ಶ್ರೀಮತಿ ಅನುಪಮ ಮೇಡಂ ಶ್ರೀಮತಿ ಶ್ರೀದೇವಿ ಮೇಡಂ ಮತ್ತು ಶ್ರೀಮತಿ ಮಹಾಲಕ್ಷ್ಮಿ ಮೇಡಂ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ ಜಟ್ಟಪ್ಪ ಎಸ್ ಪೂಜಾರಿ


Share