ಹಾಸನ್:ಕಸದ ವಾಹನ ಬಾರದ ಹಿನ್ನೆಲೆಯಲ್ಲಿ ನಗರದ ಹೋರ ವಲಯದ ಕೌಶಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀರಾಮನಗರ ಸೇರಿ ವಿವಿಧ ಬಡಾವಣೆಗಳು ಗಬ್ಬು ನಾರುತ್ತಿವೆ.ಕೆಳೆದ ಅನೇಕ ದಿನಗಳಿಂದ ಈ ಭಾಗದಲ್ಲಿ ಕಸದ ವಾಹನ ಸಂಚಾರ ನಿಲ್ಲಿಸಲಾಗಿದೆ ಇದರಿಂದ ಮನೆ-ಮನೆಗಳಲ್ಲಿ ಉತ್ಪತ್ತಿ ಆಗುವ ನೂರಾರು ಕೆಜಿ ಕಸವನ್ನು ಜನರು ರಸ್ತೆ ಬದಿ ಹಾಗೂ ಬಡಾವಣೆಯ ಅಲ್ಲಲ್ಲಿ ರಾಶಿ ಹಾಕಲಾಗುತ್ತಿದೆ ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರು ಯಾರೊಬ್ಬರೂ ಈ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಸ್ಥಳೀಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಇಲ್ಲಿ ಸುಮಾರು 3000 ಜನರು ವಾಸವಿದ್ದು, ಸರಿಯಾದ ರಸ್ತೆ,ಚರಂಡಿ ವ್ಯವಸ್ಥೆಯಿಲ್ಲದೆ ತುಂಬಾ ಸಮಸ್ಯೆ ಎದುರಾಗುತ್ತಿವೆ. ಡೆಂಗ್ಯೂ ಭೀತಿ ಎದುರಾಗಿದೆ ಕಸದ ರಾಶಿ ಮಳೆಯಲ್ಲಿ ನೆನೆದು ಗಬ್ಬು ನಾರುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ.ಜೊತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲ ಬದಿ ಮಾತ್ರ ಒಳಚರಂಡಿ ವ್ಯವಸ್ಥೆ ಇದ್ದು ಅದರಲ್ಲಿ ಕಸ ತುಂಬುತ್ತಿದೆ. ಎಡ ಬದಿ ಒಳಚರಂಡಿ ಇಲ್ಲದ ಕಾರಣ ಮಳೆಗಾಲದಲ್ಲಿ ಮನೆಗಳಿಗೆಲ್ಲಾ ನೀರು ನುಗ್ಗಿ ತುಂಬಾ ತೊಂದರೆಯಾಗುತ್ತಿದೆ,ಇದಕ್ಕೆಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗೆ ಅನೇಕ ಬಾರಿ ದೂರು ನೀಡಿದರು ನಿರ್ಲಕ್ಷ ತೋರಿಸುತ್ತಿದ್ದಾರೆ ಎಂದು ಬಡಾವಣೆಯ ನಿವಾಸಿಗಳಾದ ಜಗದೀಶ್, ತುಳಸಿ ಎಂಬುವವರು ಆರೋಪಿಸಿ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.