ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಜವಾಬ್ದಾರಿ ಹೊತ್ತ ಸರ್ಕಾರಿ ಕಚೇರಿಯ ಕಟ್ಟಡವೇ ದುಃಸ್ಥಿತಿಯಲ್ಲಿದೆ.ಶಿಥಿಲಗೊಂಡ ಕಟ್ಟಡದಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇಲ್ಲಿನ ಸಿಬ್ಬಂದಿಗಳು ಜೀವಭಯದಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕಟ್ಟಡವನ್ನ ಸುಸ್ಥಿತಿಗೆ ತರುವ ಗೋಜಿಗೆ ಹಿರಿಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.ಯಾವಾಗ ಬೇಕಿದ್ರೂ ಕುಸಿಯುವ ಹಂತದಲ್ಲಿರುವ ಈ ನಾಡಕಚೇರಿಗೆ ಕಾಯಕಲ್ಪ ಬೇಕಿದೆ.ಇದು ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ನಾಡಕಚೇರಿಯ ದುಃಸ್ಥಿತಿ.ಮಳೆ ಬಂದರೆ ಕಚೇರಿಯ ಒಳಗೆ ಸೋರುತ್ತದೆ.ಗೋಡೆಗಳು ಅಲ್ಲಲ್ಲಿ ಉದುರಿಹೋಗಿದೆ.ಶಿಥಿಲಗೊಂಡ ಕಟ್ಟಡ.ಮಳೆ ಬಂದರೆ ಅಧ್ವಾನ.ಇಂತಹ ಶಿಥಿಲಗೊಂಡ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗಳದ್ದು.ಕಳೆದ ಐದಾರು ವರ್ಷಗಳಿಂದ ಮಳೆ ಬಂದರೆ ಸಿಬ್ಬಂದಿಗಳಿಗೆ ಪೀಕಲಾಟ.ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ನಾಡಕಚೇರಿಗೆ ಪ್ರತಿದಿನ ನೂರಾರು ಮಂದಿ ಭೇಟಿ ನೀಡುತ್ತಾರೆ.ಶಿಥಿಲಗೊಂಡ ಕಟ್ಟಡ ಯಾವಾಗ ಬೇಕಾದ್ರೂ ಕುಸಿಯುವ ಸಂಭವವಿದೆ.ಕಟ್ಟಡದ ಅಭಿವೃದ್ದಿಗಾಗಿ ಮಾಡಿದ ಮನವಿ ಕಸದಬುಟ್ಟಿ ಸೇರಿದೆ.ಪರ್ಯಾಯ ಕಟ್ಟಡಕ್ಕೆ ಸ್ಥಳಾಂತರಿಸದ ಹಿರಿಯ ಅಧಿಕಾರಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.ಶೀಘ್ರದಲ್ಲಿ ಈ ನಾಡಕಚೇರಿಗೆ ಕಾಯಕಲ್ಪ ಒದಗಿಸಬೇಕಿದೆ.