ಯಡ್ರಾಮಿ
ತಾಲೂಕಿನ ಹಂಗರಗಾ (ಕೆ) ಗ್ರಾಮದಲ್ಲಿ ಶ್ರೀ ಆದಿಪರಾಶಕ್ತಿ ಶ್ರೀ ಮರಗಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ಶ್ರೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯ ರಥೋತ್ಸವ ಹಾಗೂ ಕುಂಭ ಕಳಸ ಬಾಜಿ ಭಜಂತ್ರಿ ಡೋಳಿನ ಮೇಳದವರು ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಮೆರಗು ಕೊಟ್ಟರು ಹಾಗೂ ಈ ಸಂದರ್ಭದಲ್ಲಿ ಶ್ರೀ ಮರಗಮ್ಮದೇವಿಯ ರಥೋತ್ಸವಕ್ಕೆ ಗ್ರಾಮದ ಮುತ್ತೈದೆಯರು ಜಲಾಭಿಷೇಕ ಮಾಡುವುದರೊಂದಿಗೆ ಕಾಯಿ ಕರ್ಪೂರ ನೈವೇದ್ಯ ಅರ್ಪಿಸಿದರು ಗ್ರಾಮದ ಹಿರಿಯರು ಹಾಗೂ ಕಿರಿಯರು ಹಾಗೂ ಸಮಸ್ತ ನಾಗರಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಈ ಸಂದರ್ಭದಲ್ಲಿ ಗ್ರಾಮದ ದೇವಸ್ಥಾನದ ಮಂಡಳಿ ವತಿಯಿಂದ ಉಚಿತ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಗ್ರಾಮದ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು
ವರದಿ ಜಟ್ಟಪ್ಪ ಎಸ್ ಪೂಜಾರಿ