ಕಲಬುರಗಿ:-ಆಳಂದ ತಾಲ್ಲೂಕಿನ ಮೋಕ ತಾಂಡಾ ಆಳಂದ ಮತ್ತು ಕಲಬುರಗಿಯಲ್ಲಿ ಮಹಿಳಾ ಕುಶಲಕರ್ಮಿಗಳಿಗಾಗಿ ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಸ್ಥಳಗಳಲ್ಲಿ ಸುಮಾರು 110 ಮಹಿಳೆಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಫುಲ್ಬ್ರೈಟ್ ವಿದ್ವಾಂಸರ ಅಲುಮ್ನಿ ಎಂಗೇಜ್‍ಮೆಂಟ್ ಇನೊವೇಶನ್ ಫಂಡ್ ಪ್ರಾಜೆಕ್ಟ್ 2023 ರ ಅಡಿಯಲ್ಲಿ ಆಯೋಜಿಸಲಾಗಿದೆ, ಇದನ್ನು ಯುಎಸ್ ಡಿಪಾಟ್ಮೆರ್ಂಟ್ ಆಫ್ ಸ್ಟೇಟ್ ಬ್ಯೂರೋ ಆಫ್ ಎಜುಕೇಶನಲ್ ಅಂಡ್ ಕಲ್ಚರಲ್ ಅಫೇರ್ಸ್ ಪ್ರಾಯೋಜಿಸಿತ್ತು. ಬೆಂಗಳೂರಿನ ಪರ್ಲ್ ಅಕಾಡೆಮಿಯ ಡಾ. ಸಂಯೋಗಿತಾ ಮತ್ತು ತಮಿಳುನಾಡಿನ ಸೆಂಟ್ರಲ್ ಯೂನಿವರ್ಸಿಟಿಯ ಡಾ.ಸುಲೋಚನಾ ಅವರು ಫುಲ್‍ಬ್ರೈಟ್ ವಿದ್ವಾಂಸರು ಮತ್ತು ಡಾ.ಛಾಯಾ ಪಬ್ಲಿಕ್ ಅಫೇಸ್ಸೆರ್ಂಟರ್ ಹಾಗೂ ಪವಿತ್ರ ವಿಮೋರ್ ಫೌಂಡೇಶನ್‍ನ ಅವರು ಈ ಮಹಿಳೆಯರ ಕರಕುಶಲ ವಿನ್ಯಾಸ ಮತ್ತು ಮಾರುಕಟ್ಟೆ ಅಗತ್ಯಗಳ ಕುರಿತು ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿದೆ ಎಂದು ಆಕೃತಿ ಟ್ರಸ್ಟ್‍ನ ಮಂಜುಳಾ ತಿಳಸಿದ್ದಾರೆ.
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್