ಟಿ20 ವಿಶ್ವಕಪ್ ಗೆಲುವಿನ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕನ್ನಡಿಗನ ಪರಿಶ್ರಮ

ಟಿ20 ವಿಶ್ವಕಪ್ ಗೆಲುವಿನ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕನ್ನಡಿಗನ ಪರಿಶ್ರಮ

Share

ಕುಮಟಾ :- ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಈ ಬಾರಿ ಇರಲಿಲ್ಲ ಅನ್ನೋದು ಬೇಸರ ಸಂಗತಿ ಆದರೆ ಭಾರತ ತಂಡದ ಗೆಲುವಿಗೆ ಹಾಗೂ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ಸಕ್ಸಸ್ ಹಿಂದೆ ಕನ್ನಡಿಗರಿದ್ದ ಖುಷಿಯ ಸಂಗತಿ ಮರೆಯುವಂತಿಲ್ಲ. ಅವರೇ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೀವಗಿ ರಾಘವೇಂದ್ರ ಸುಮಾರು 13 ವರ್ಷದಿಂದ ಭಾರತ ತಂಡ ಜೊತೆ ಇದ್ದು ತಂಡದ ಯಶಸ್ವಿಗೆ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ.ಈ ಒಂದು ಪರಿಶ್ರಮಕ್ಕೆ ಟೀ ಟ್ವೆಂಟಿ ವಿಶ್ವಕಪ್ನಲ್ಲಿ ದೊಡ್ಡ ಪ್ರತಿಫಲ ಸಿಕ್ಕಿದೆ. ಓರ್ವ ಶಿಕ್ಷಕರ ಮಗನಾದ ರಾಘವೇಂದ್ರ ಮೋಹನ್ ದೀವಗಿ 24 ವರ್ಷಗಳ ಹಿಂದೆ ನಾನು ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಕಂಡು ಕೇವಲ 21 ರೂಪಾಯಿನೊಂದಿಗೆ ಮನೆಬಿಟ್ಟರು. ಬಳಿಕ ಇವರ ಆಸೆ ಕಮರಿತು.ಕಳೆದುಕೊಂಡದ್ದನ್ನು ಹುಡುಕಲು ಹೊರಟಿ ಇಂದು ಭಾರತದ ಟಿ20 ವಿಶ್ವಕಪ್ ರೂವಾರಿಗಳಲ್ಲಿ ಒಬ್ಬರಾಗಿ ನಿಂತಿದ್ದಾರೆ. ರಾಘವೇಂದ್ರ ಅವರ ಪ್ರಯಾಣ ಭಾರತ ವಿಶ್ವ ಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವಲ್ಲಿ ಬಂದು ತಲುಪಿದೆ. ಈ ಗೆಲುವಿನ ಹಿಂದೆ ಕನ್ನಡಿಗನ ಪಾತ್ರ ಇದೆ ಅನ್ನೋದು ಮರೆಯುವಂತಿಲ್ಲ. ಟೀಮ್ ಇಂಡಿಯಾ ಬಳಗದಲ್ಲಿ ಗುರುತಿಸಿಕೊಂಡಿರುವ ರಾಘವೇಂದ್ರ ದೀವಗಿ ಥ್ರೋಡೌನ ಎಕ್ಸ್ಪರ್ಟ್ ಅಭ್ಯಾಸದ ಸಮಯದಲ್ಲಿ ಎಲ್ಲಾ ಆಟಗಾರರಿಗೂ ಬೌನ್ಸ ರ ಶಾರ್ಟ್ ಬಾಲ್ ಎಸೆದು ಅವರ ಯಶಸ್ವಿಗೆ ಕಾರಣರಾಗಿದ್ದಾರೆ.ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಪ್ರತಿಯೊಬ್ಬ ಬ್ಯಾಟ್ಸ್ಮನ್ ಗಳಿಗೆ ರಾಘವೇಂದ್ರ ತಲಾ 3೦೦ಎಸೆತಗಳನ್ನು ಒಬ್ಬರಿಗೆ ಎಸೆದು ಸರಿಸುಮಾರು 3000 ಎಸತೆಗಳನ್ನು ಬ್ಯಾಟ್ಸ್ಮನ್ ಗಳಿಗೆ ಎಸೆಯುತ್ತಾರೆ. ರಾಘವೇಂದ್ರ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸಿ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಂಡರು. ಕಳೆದ 13 ವರ್ಷಗಳಿಂದ ಭಾರತ ತಂಡದ ಯಶಸ್ಸಿಗೆ ಪಾತ್ರ ವಹಿಸುತ್ತಾ ಬಂದಿದ್ದಾರೆ ಈ ಕನ್ನಡಿಗನ ಸಾಧನೆಗೆ ಇಡೀ ಕರ್ನಾಟಕವೇ ಹೆಮ್ಮೆಪಡುವ ವಿಚಾರವಾಗಿದೆ


Share