ಪುರಸಭೆ ಯ ಕಸವಿಲೇವಾರಿ ವಾಹನ ಕ್ಕೆ ಕಸ ನೀಡಬೇಕಾಗಿ ವಿನಂತಿ; ಮುಖ್ಯಾಧಿಕಾರಿ ಕಾರ್ಕಳ ಪುರಸಭೆ!

ಪುರಸಭೆ ಯ ಕಸವಿಲೇವಾರಿ ವಾಹನ ಕ್ಕೆ ಕಸ ನೀಡಬೇಕಾಗಿ ವಿನಂತಿ; ಮುಖ್ಯಾಧಿಕಾರಿ ಕಾರ್ಕಳ ಪುರಸಭೆ!

Share

ಕಾರ್ಕಳ, ಪುರಸಭಾ ವ್ಯಾಪ್ತಿಯಲ್ಲಿರುವ 2ನೇ ವಾರ್ಡ್ ನ ಕಲ್ಲೋಟ್ಟೆ ಸದ್ಭಾವನಾ ನಗರ ದ ಪರಿಸರ ದಲ್ಲಿ ಕಸದ ರಾಶಿ ಅಲ್ಲಲ್ಲಿ ಕಂಡು ಬಂದಿದ್ದು ಸಾರ್ವಜನಿಕರು ಕಸ ಗಳನ್ನು ಪುರಸಭೆಯ ಕಸ ವಿಲೇವಾರಿ ವಾಹನಕ್ಕೆ ನೀಡಬೇಕಾಗಿ ಕಾರ್ಕಳ ಪುರಸಭಾ ಮುಖ್ಯಧಿಕಾರಿ ರೂಪಾ. ಟಿ. ಶೆಟ್ಟಿ ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು, ಮುಂದಿನ ದಿನಗಳಲ್ಲಿ ಇದೇ ರೀತಿ ಈ ಪರಿಸರ ದಲ್ಲಿ ಕಸ ಗಳನ್ನು ಹಾಕಿದ್ದು ಯಾರೆಂದು ಕಂಡು ಬಂದಲ್ಲಿ ಅವರಿಗೆ ಐದು ಸಾವಿರ ದಿಂದ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.ಪುರಸಭಾ ಮುಖ್ಯಧಿಕಾರಿ ರೂಪಾ ಟಿ. ಶೆಟ್ಟಿ, ಆರೋಗ್ಯ ಅಧಿಕಾರಿ ಲೈಲಾ ಥೋ ಮಸ್, ಸುದೇಶ್, ಹಾಗೂ ವಾರ್ಡ್ ಸದಸ್ಯರು ನೀತಾ ಆಚಾರ್ಯ ಪುರ ಸಭಾ 2ನೇ ವಾರ್ಡ್, ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.


Share