ರೈತ ಸಂಪರ್ಕ ಕೇಂದ್ರ ಯಡ್ರಾಮಿಯಲ್ಲಿ ಬಿತ್ತನೆ ಬೀಜ ವಿತರಣೆ.

ರೈತ ಸಂಪರ್ಕ ಕೇಂದ್ರ ಯಡ್ರಾಮಿಯಲ್ಲಿ ಬಿತ್ತನೆ ಬೀಜ ವಿತರಣೆ.

Share

ಯಡ್ರಾಮಿ ಸುದ್ದಿ
ಯಡ್ರಾಮಿ ತಾಲೂಕಿನ ರೈತ ಸಂಪರ್ಕ ಕೇಂದ್ರ ( ಆರ್ ಎಸ್ ಕೆ) ವ್ಯಾಪ್ತಿಯಲ್ಲಿ ಬರುವ ಯಡ್ರಾಮಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ರೈತರು ಬಿತ್ತನೆ ಮಾಡಲು ಉತ್ಸಾಹಕರಾಗಿದ್ದಾರೇ ಆದಕಾರಣ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜದ ತಳಿಗಳಾದ -GRG-152,GRG-811,TS3R ಬಿತ್ತನೆ ಬೀಜ ಲಭ್ಯವಿರುತ್ತದೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವಂತಹ ರೈತರು ಆಧಾರ್ ಕಾರ್ಡ್ ಮತ್ತು ಪಹಣಿಯನ್ನು ತಂದು ಬಿಜ ತೆಗೆದುಕೊಂಡು ಹೋಗಬೇಕೆಂದು ಸೂಚಿಸಲಾಗಿದೆ. ರೈತರಿಗೆ ಬಿಜ ವಿತರಣೆ ಮಾಡುವ ಸಂದರ್ಭದಲ್ಲಿ ರಮೇಶ ಉಕನಾಳ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು, ವಿಜಯಲಕ್ಷ್ಮಿ ಲೆಕ್ಕಸಹಾಯಕರು. ಹಾಗೂ ರೈತರು ಉಪಸ್ಥಿತರಿದ್ದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾದ ಶ್ರೀ ಕೆ. ಎಸ್ ಕಟ್ಟಿಮನಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.


Share