ಮೋದಿ ಸೋಲನ್ನು ಒಪ್ಪಿಕೊಳ್ಳಬೇಕು ಯಾಕೆಂದರೆ…: ಸಂಜಯ್ ರಾವತ್

ಮೋದಿ ಸೋಲನ್ನು ಒಪ್ಪಿಕೊಳ್ಳಬೇಕು ಯಾಕೆಂದರೆ…: ಸಂಜಯ್ ರಾವತ್

Share

ಮುಂಬೈ: ಜನರು ನಿಮ್ಮ ಸರ್ಕಾರವನ್ನು ತಿರಸ್ಕರಿಸಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಸೋಲನ್ನು ಒಪ್ಪಿಕೊಳ್ಳಬೇಕು ಎಂದು ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಮಂಗಳವಾರ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದಾರೆ.

“ನಾವು ನರೇಂದ್ರ ಮೋದಿಯನ್ನು ಮಹಾರಾಷ್ಟ್ರದಲ್ಲಿ ತಡೆದಿದ್ದೇವೆ. ಜನರು ನಿಮ್ಮ ಸರ್ಕಾರವನ್ನು ತಿರಸ್ಕರಿಸಿರುವುದರಿಂದ ನರೇಂದ್ರ ಮೋದಿ ಅವರು ಸೋಲನ್ನು ಒಪ್ಪಿಕೊಳ್ಳಬೇಕು” ಎಂದು ಸೇನಾ(ಯುಬಿಟಿ) ನಾಯಕ ಹೇಳಿದ್ದಾರೆ.ಇತ್ತೀಚಿನ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಜೆಪಿ 233 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ದೇಶಾದ್ಯಂತ ಹತ್ತು ಸ್ಥಾನಗಳನ್ನು ಗೆದ್ದಿದೆ. ಆರಂಭಿಕ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣ 231 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಎಕ್ಸಿಟ್ ಪೋಲ್‌ಗಳ ಭವಿಷ್ಯ ಸುಳ್ಳಾಗಿದೆ


Share