ಗಂಗಾವತಿ: ಕೊಪ್ಪಳ ಲೋಕಸಭಾ ಕ್ಷೇತ್ರ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್, ಪ್ರಮುಖರು ಹಾಗು ಕಾರ್ಯಕರ್ತರ ನಿರಂತರ ಶ್ರಮದಿಂದ ದಾಖಲರ್ಹ ಅಂತರದಲ್ಲಿ ಗೆಲುವು ದಕ್ಕಿದ್ದು ಪಕ್ಷದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ್ಯ ಅವರಿಗಿದ್ದು ಮುಂದಿನ ದಿನಗಳಲ್ಲಿ ಪಕ್ಷ ಇನ್ನೂ ಸದೃಢವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ್ ಹೇಳಿದರು.ಅವರು ತಮ್ಮ ಮಂಗಳವಾರ ನಿವಾಸದಲ್ಲಿ ಸಂಸದ ಹಿಟ್ನಾಳ್ ಗೆಲುವಿನ ಸಂಭ್ರಮಾಚರಣೆಯ ನಂತರ ಹಾಲಮತ ಸಮಾಜ ಬಾಂದವರಿAದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕಾಂಗ್ರೆಸ್ ಭದ್ರಕೋಟೆ ಕೊಪ್ಪಳ ಮತ್ತೆ ತೆಕ್ಕಗೆ ಜಾರಿರುವುದು ಹರ್ಷ ತಂದಿದೆ, ಕ್ಷೇತ್ರಕ್ಕೆ ಹಾಗು ಜನರಿಗೆ ಕೇಂದ್ರದ ಯೋಜನೆಗಳನ್ನು ಸಮರ್ಥವಾಗಿ ಮುಟ್ಟಿಸುವಲ್ಲಿ ಹಿಟ್ನಾಳ್ ಯಶಸ್ವಿಯಾಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ್ದರ ಫಲವಾಗಿ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿದೆ. ರಾಜಕಾರಣದಲ್ಲಿ ಯಾವದನ್ನು ಅಲ್ಲಗಳೆಯುವಂತಿಲ್ಲ, ಛಲಬಿಡದೆ ಹೋರಾಟ ನಡೆಸಿದ ರಾಹುಲ್ ಗಾಂಧಿಯವರು, ಪ್ರಧಾನ ಮಂತ್ರಿಯಾದರೂ ಅಚ್ಛರಿಯಿಲ್ಲ, ರಾಜಕಾರಣದಲ್ಲಿ ಅಸಾಧ್ಯ ಎನ್ನುವುದಿಲ್ಲ ಒಟ್ಟಾರೆ ಕಾಂಗ್ರೆಸ್ ಪಕ್ಷಕ್ಕೆ ಶುಕ್ರದೆಸೆ ಆರಂಭವಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಶ್ರೀ ಸಿದ್ದಯ್ಯ ಗುರುವಿನ, ಸರ್ವೇಶ್ ಮಾಂತಗೊAಡ, ರಾಜಶೇಖರ್ ಮುಷ್ಟೂರು, ಹೆಚ್.ಆರ್.ಭರತ್ ಹಾಗು ಹನುಂತರಾಯ ವಡ್ಡರಹಟ್ಟಿ ಇತರರಿದ್ದರು.