ಸಂತ ಲಾರೆನ್ಸ್ ಟ್ರೋಫಿ, ಸಂಶಿ 2024

ಸಂತ ಲಾರೆನ್ಸ್ ಟ್ರೋಫಿ, ಸಂಶಿ 2024

Share

ಹೊನ್ನಾವರ: ಹೊನ್ನಾವರ ತಾಲೂಕಿನ ಸಂಶಿಯಲ್ಲಿ ಸಂತ ಲಾರೆನ್ಸ ಯುತ ಅವರು ಕ್ರೈಸ್ತ ಸಮುದಾಯದ ಜಿಲ್ಲಾಮಟ್ಟದ ವಾಲಿಬಾಲ ಟೂರ್ನಾಮೆಂಟನ್ನು ಫಾದರ ಗಾಬ್ರಿಯಲ ಮೈದಾನವಾದ ಸಂಶಿಯಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.
ಸಭೆಯ ಅತಿಥಿಗಳನ್ನು ಶೆರೊನ ನೊರೊನ್ಹಾ ಅವರು ಸ್ವಾಗತಿಸಿದರು. ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದ “ಸುಮರಣಾ ಮಾತೆ ಚರ್ಚ ” ಸಂಶಿಯ ಧರ್ಮಗುರುಗಳಾದ ವಂದನೆಯ ಫಾ| ಆಲ್ಪಿನ ಡೆಸಾ ಅವರು ಮಾತನಾಡಿ, ಕ್ರಿಡೆಯು ನಮ್ಮ ಜೀವನದಲ್ಲಿ ಉತ್ಸಾಹ ನಿಡುತ್ತದೆ ಮತ್ತು ಇದರ ಅನಿಸಿಕೆ ಹಾಗೂ ಮಾರ್ಗದರ್ಶನದ ಬಗ್ಗೆ ಹಿತನುಡಿದರು. ನಂತರ ಬ್ರದರ್ ಡಿಕನ್ ಫ್ರಾನ್ಸಿಸ್ ಫರ್ನಾಂಡಿಸ ಅವರು ಮಾತನಾಡಿ ನಮ್ಮ ಜೀವನದಲ್ಲಿ ಕ್ರಿಡೆಯು ಒಂದು ಪ್ರಮುಖ ಪಾತ್ರವಹಿಸುತ್ತದೆ ಮತ್ತು ಕ್ರಿಡೆಯಿಂದ ನಮ್ಮ ಮಾನಸಿಕ ಸ್ಥಿತಿ ಚುರುಕುಗೊಳಿಸುತ್ತದೆ ಎಂದು ನುಡಿದರು ನಂತರ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಸಾಲ್ವಾದೊರ ಲೋಪಿಸ ಅವರು ಮಾತನಾಡಿ, ಕ್ರಿಡೆಯನ್ನು ಏರ್ಪಡಿಸಲು ಇದರ ಹಿಂದೆ ಬಹಳಷ್ಟು ಜನರ ಪರಿಶ್ರಮ ಇದೆ ಮತ್ತು ಈ ಊರಿನ ಯುವಕರು ತುಂಬಾ ಉತ್ಸಾಹದಿಂದ ಕೆಲಸ ಮಾಡಿರುವುದು ನಾನು ನೋಡಿದ್ದೇನೆ ಎಂದು ಹೂಗಳಿದರು. ಉದ್ಯಮಗಾರರಲ್ಲಿ ಒಬ್ಬರಾದ ಎಫಿಫನ ಮಿರಾಂದಾ ಅವರು ನಮ್ಮ ಊರಿನ ಯುವಕರು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳಗಳಿ ಎಂದು ಹಾರೈಸಿದರು ನಂತರ ಸಂಶಿ ಚರ್ಚಿನ ಸಮುದಾಯದ ಕಾರ್ಯದರ್ಶಿಯಾದ ಡೆವಿಡ ಮಿರಾಂದಾ ಅವರು ಪಂದ್ಯಾಟದ ಜವಾಬ್ದಾರಿಯನ್ನು ಎಫಿಫನ ಮತ್ತು ಮಾರಿಯೊ ಅವರು ಹಾಗೂ ಊರಿನ ಯುವಕರು ಕೇವಲ ಒಂದೆ ವಾರದಲ್ಲಿ ಎರ್ಪಡಿಸಿದ್ದಾರೆ ಎಂದು ಹೂಗಳಿದರು ಹಾಗೆ ಈ ಪಂದ್ಯಾವಳಿಯುಲ್ಲಿ ಚರ್ಚಿನ ಮಹಿಳಾ ಅಧ್ಯಕ್ಷೆ ಫಿಲೊಮೆನಾ ಮಿರಾಂದಾ, ಅಮಿತ ಕ್ರಿಯೆಟಿವಿನ ಪೀಟರ ಮಿರಾಂದಾ, ಯುವಕ ಸಂಘದ ಅಧ್ಯಕ್ಷರು ಬ್ರೆನನ್ ನೊರೊನ್ಹಾ ಉಪಸ್ಥಿತರಿದ್ದರು.ಹಿರಿಯ ಆಟಗಾರರಾದ ಲಾಜರ ಮಿರಾಂದಾ, ಆಗ್ನೆಲ್ ನೊರೊನ್ಹಾ, ಫಾ| ಕಾಲಿಸ್ತ ಮಿರಾಂದಾ, ರೂನಾಲ್ಡ ಮಿರಾಂದಾ, ರಾಜೇಶ ರೋಡ್ರಿಗಿಸ, ಜೊಸೆಫ ಮಿರಾಂದಾ (J.K ), ರೋಶನ ನೊರೊನ್ಹಾ , ಉಲ್ಲಾಸ ಲೋಪಿಸ , ಮತ್ತು ಆಲ್ಬರ್ಟ ನೊರೊನ್ಹಾ ಇವರನ್ನು ಪುಷ್ಪ ನಿಡುವುದರ ಮೂಲಕ ಸನ್ಮಾನಿಸಲಾಯಿತು. ನಂತರ ಧರ್ಮ ಗುರುಗಳು ಹಾಗೂ ಗಣ್ಯರು ಟ್ರೋಫಿ ಮತ್ತು ಕ್ರಿಡಾಂಗಣವನ್ನು ಉದ್ಗಾಟಿಸಿದರು. ಜೊಶ್ವಾ ನೊರೊನ್ಹಾ ಅವರು ಕೃತಜ್ಜತೆಯನ್ನು ಸಲ್ಲಿಸಿ ಬಿಬಿಯಾನ ನೊರೊನ್ಹಾ ಅವರು ಕಾರ್ಯನಿರ್ವಾಹಕಿಯಾಗಿ ಅಚ್ಚುಕಟ್ಟಾಗಿ ನೆರವೇರಿಸಿದರು. ಪಂದ್ಯದ ವಿಜೇತರಾದ ಮೊದಲನೆಯ ಸ್ಥಾನ ಸಂತ ಲಾರೆನ್ಸ A, ಎರಡನೆಯ ಸ್ಥಾನ ಸಿದ್ಧಾಪುರ, ಮೂರನೆಯ ಸ್ಥಾನ ಸಂತ ಲಾರೆನ್ಸ B, ಹಾಗೂ ನಾಲ್ಕನೆಯ ಸ್ಥಾನ ಹೋಲಿಕ್ರಾಸ ಬೆಳ್ಳಿಮಕ್ಕಿಯವರು ಪಡೆದಿದ್ದಾರೆ.


Share