ಯಡ್ರಾಮಿ ತಾಲೂಕಿನಲ್ಲಿ ಕಂದಾಯ ಮತ್ತು ತಹಸೀಲ್ ಇಲಾಖೆಯ ಕಚೇರಿಯನ್ನು ನೂತನವಾಗಿ ನಿರ್ಮಾಣ ಮಾಡಲಿ ಶಾಂತಪ್ಪ ಮಾಸ್ಟರ್ ಹೊಸಮನಿ ಸರ್ಕಾರಕ್ಕೆ ಆಗ್ರಹ

ಯಡ್ರಾಮಿ ತಾಲೂಕಿನಲ್ಲಿ ಕಂದಾಯ ಮತ್ತು ತಹಸೀಲ್ ಇಲಾಖೆಯ ಕಚೇರಿಯನ್ನು ನೂತನವಾಗಿ ನಿರ್ಮಾಣ ಮಾಡಲಿ ಶಾಂತಪ್ಪ ಮಾಸ್ಟರ್ ಹೊಸಮನಿ ಸರ್ಕಾರಕ್ಕೆ ಆಗ್ರಹ

Share

ಯಡ್ರಾಮಿ ಸುದ್ದಿ
ಯಡ್ರಾಮಿ ತಾಲೂಕಿನ ತಹಸೀಲ್ ಇಲಾಖೆ ಮತ್ತು ಕಂದಾಯ ಇಲಾಖೆಯ ಕಚೇರಿಗಳನ್ನು ನೂತನವಾಗಿ ನಿರ್ಮಾಣ ಮಾಡಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನವನ್ನು ತಾಲೂಕಿನ ಶಾಸಕರಾದ ಡಾ. ಅಜಯ್ ಸಿಂಗಅವರು ಯಡ್ರಾಮಿ ತಾಲೂಕಿನ ಅಭಿವೃದ್ಧಿಗೆ ಪಣತೊಡಬೇಕು ಯಾಕೆಂದರೆ ತಾಲೂಕಿನ ನಾಡಕಚೇರಿ ತಹಸಿಲ್ ಕಚೇರಿ ಕಂದಾಯ ಇಲಾಖೆಯ ಕಚೇರಿಗಳು ಸಹಿತ ಮಳೆಗಾಲ ಬಂದರೆ ಸಾಕು ಆಫೀಸ್ ಗಳು ನೀರಿನಿಂದ ಸೋರಿ ಬಚ್ಚಲು ಗುಂಡಿಯಂತಾಗುತ್ತವೆ ಇಂತಹ ಅವ್ಯವಸ್ಥೆಯಲ್ಲಿ ಸರ್ಕಾರಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕೆಲಸ ಮಾಡುತ್ತಾರೆ . ಇದಕ್ಕೆ ಸಂಬಂಧಪಟ್ಟಂತಹ ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನ ಶಾಸಕರಾದ ಡಾ. ಅಜಯ್ ಸಿಂಗ್ ಅವರು ಯಡ್ರಾಮಿ ತಾಲೂಕವನ್ನು ನೂತನವಾಗಿ ನಿರ್ಮಾಣ ಮಾಡಿ ಸಿಂಗಾಪುರ ಸಿಟಿಯಂತೆ ಕಂಗೊಳಿಸುವಂತೆ ಮಾಡಬೇಕೆಂದು ಪ್ರಗತಿಪರ ವಿಚಾರವಾದಿ ಶಾಂತಪ್ಪ ಮಾಸ್ಟರ್ ಹೊಸಮನಿ ಬಿಳವಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ


Share