ಕುಮಟಾ :” ಪ್ರತಿಯೊಬ್ಬರು ಎಲ್ಲಾ ಭಾಷೆಗಳನ್ನು ಗೌರವಿಸಬೇಕು ನಮ್ಮ ಮಾತೃಭಾಷೆಯಾದ ಕನ್ನಡವನ್ನು ಹೃದಯದಲ್ಲಿಟ್ಟು ಪೂಜಿಸಬೇಕು ಎಂದು ಸ.ಹಿ.ಪ್ರಾ ಶಾಲೆ ಹೊಸ್ಕೇರಿ ಕಡಮೆಯ ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಈಶ್ವರ್ ಮಡಿವಾಳರವರು ನುಡಿದರು. ಅವರು ಕಡಮೆ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕರಾದ ಉಮಾ ನಾಯ್ಕ ರವರು “ಕಲಿಯಲು ಕೋಟಿ ಭಾಷೆ ಇದ್ದರೂ ಸಹ ನಮ್ಮ ಭಾಷೆ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು.
ಶಿಕ್ಷಕ ಆನಂದ ನಾಯ್ಕ ಮಾತನಾಡಿ “ಕರ್ನಾಟಕ ರಾಜ್ಯ ಏಕೀಕರಣ ಗೊಂಡ ರೀತಿ ಕನ್ನಡ ನಾಡು ನುಡಿಯ ಹಿರಿಮೆ ಆಚರಣೆಯ ವಿಶೇಷತೆ ಬಗ್ಗೆ ಮಾತನಾಡಿ ಕನ್ನಡ ಭಾಷೆಯ ಅಧ್ಯಯನದ ಬಳಕೆ ಹೆಚ್ಚಾದಂತೆ ನಮ್ಮಲ್ಲಿ ಭಾಷಾ ಪ್ರೌಢಿಮೆ ಬೆಳೆಯುತ್ತದೆ” ಎಂದರು.
ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಕುರಿತು ಭಾಷಣ, ಗಾಯನ ಹಾಡುವ ಮೂಲಕ ಕನ್ನಡಾಭಿಮಾನ ತೋರಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ಲತಾ ಗೌಡ,ರಾಜೀವ ಗಾಂವಕರ, ದೇವಯಾನಿ ನಾಯಕ, ನಯನಾ ಜಿ ಪಿ, ವೈಶಾಲಿ ನಾಯಕ, ನಾಗರತ್ನ ಗೌಡ, ಸವಿತಾ ಗೌಡ, ಉಪಸ್ಥಿತರಿದ್ದರು.
ಕಾರ್ಯಕ್ರಮವು ಲಕ್ಷ್ಮೀ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಾಲಾ ವಿದ್ಯಾರ್ಥಿನಿ ದೀಕ್ಷಾ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಖುಷಿ ಸರ್ವರನ್ನು ವಂದಿಸಿದರು.