ಶ್ರೀ ಮರುಳಸಿದ್ದೇಶ್ವರ ದೇವರ ಕಾರ್ತಿಕ ಮಾಸದ ಜಾತ್ರೆ ಮಹೋತ್ಸವ

ಶ್ರೀ ಮರುಳಸಿದ್ದೇಶ್ವರ ದೇವರ ಕಾರ್ತಿಕ ಮಾಸದ ಜಾತ್ರೆ ಮಹೋತ್ಸವ

Share

ಇಂದಿನಿಂದ ಪುರಾಣ ಪ್ರಾರಂಭ

ಇಂಡಿ:ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿ ಶ್ರೀ ಮರುಳಸಿದ್ದೇಶ್ವರ ದೇವರ ಕಾರ್ತಿಕ ಮಾಸದ ಜಾತ್ರೆ ಮಹೋತ್ಸವದ ಪ್ರಯುಕ್ತ ಇದೆ ದಿನಾಂಕ:04-11-2024 ರಂದು ಸೋಮವಾರ ಸಾಯಂಕಾಲ ಏಳು ಗಂಟೆಗೆ “ಅಬ್ಬೆ ತುಮಕೂರು ವಿಶ್ವರಾಧ್ಯ”ರ ಪುರಾಣ ಪ್ರಾರಂಭೋತ್ಸವ ನಡೆಯಲಿದೆ.ಈ ಕಾರ್ಯಕ್ರಮ ದಿವ್ಯ ಸಾನ್ನಿಧ್ಯವನ್ನು ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹಿರೇಮಠ ತಡವಲಗಾ ಹಾಗೂ ಸಾನಿಧ್ಯ ಶ್ರೀ ಪೂಜ್ಯ ಶ್ರೀ ಶಿವಯೋಗಿ ದೇವರು ಹಿರೇಮಠ ತಡವಲಗಾ.ಹಾಗೂ ಸಮ್ಮಖ ಪೂಜ್ಯ ಶ್ರೀ ವಿಜಯಾನಂದ ಮಾಹಾರಾಜರು ತಡವಲಗಾ ಇವರು ವಹಿಸಲಿದ್ದು.ಈ ಕಾರ್ಯಕ್ರಮವನ್ನು ಇಂಡಿ ಮತಕ್ಷೇತ್ರದ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರು ಉದ್ಘಾಟಿಸುವರು.ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ ಅವರು ವಹಿಸಲಿದ್ದು.ಈ ಕಾರ್ಯಕ್ರಮದಲ್ಲಿ ತಡವಲಗಾ ಗ್ರಾಮದ ವಿವಿಧ ರಾಜಕೀಯ ಪಕ್ಷಗಳ ಗಣ್ಯಾತಿ ಗಣ್ಯರು, ಗುರು ಹಿರಿಯರ ಉಪಸ್ಥಿತಿ ಇರಲಿದ್ದಾರೆ.ಪ್ರತಿ ದಿನ ಸಾಯಂಕಾಲ ಏಳು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯ ವರಿಗೆ “ಅಬ್ಬೆ ತುಮಕೂರು ವಿಶ್ವರಾಧ್ಯ ಪುರಾಣವನ್ನು ” ಖ್ಯಾತ ಪುರಾಣಿಕರಾದ ಶ್ರೀ ವೇ!! ಶಿವಾನಂದಯ್ಯ ಶಾಸ್ತ್ರಿಗಳು ಹಿರೇಮಠ ತಡವಲಗಾ ಇವರಿಂದ ನಡೆಯಲಿದ್ದು.ಸಂಗೀತ ರಸದೌತಣ ಗಾನಕೋಗಿಲೆ ಶ್ರೀ ಶರೀಫ್ ಎಂ ಯಲಗಾರ. ಗವಾಯಿಗಳು ಬನ್ನಿಕೊಪ್ಪ ಹಾಗೂ ತಬಲಾ ಚತುರ ಶ್ರೀ ಸಿದ್ದನಗೌಡ ಪೋಲೀಸ ಪಾಟೀಲ ಅರಳಹಳ್ಳಿ ಇವರು ನಡಿಸಿಕೊಡಲ್ಲಿದ್ದಾರೆ.ಆ ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುರಾಣ ಕೇಳಿ ಪುನಿತರಾಗಬೇಕು.ಹಾಗೂ ಪುರಾಣ ಮಂಗಲ ನಂತರ ಮಾಹಾ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ತಡವಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ತಮ್ಮಣ್ಣ ಪೂಜಾರಿ ಹಾಗೂ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಅಧ್ಯಕ್ಷರಾದ ಶ್ರೀ ಮರುಳಸಿದ್ದಪ್ಪ ಖಸ್ಕಿ, ಅವರು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಇಂಡಿ, ಪ್ರಧಾನ ಕಾರ್ಯದರ್ಶಿ ಸಹೇಬಗೌಡ ಇಂಡಿ ಹಾಗೂ ಗಣಪತಿ ನಂದ್ಯಾಳ, ಮಲ್ಲಪ್ಪ ತೆನ್ನಿಹಳ್ಳಿ, ಕುತಬುದ್ದಿನ ಬಾಗವಾನ, ಶ್ರೀಶೈಲ ಕಟಾಯಿ, ಜೇಟ್ಟೆಪ್ಪ ಪಂತೋಜಿ, ವಿಠೋಬಾ ಖಸ್ಕಿ, ಹಣಮಂತ ಅಗಸಿಮನಿ, ಬಸವರಾಜ ಚವಡಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Share