ಯಡ್ರಾಮಿ ತಾಲೂಕಿನ ಶ್ರೀ ಕ್ಷೇತ್ರ ಪುರಾಣ ಪುರುಷ ಬಿಳವಾರ ಗ್ರಾಮದ ಅವಧೂತ ಮಹಿಮಾ ಪುರುಷ ಶ್ರೀ ಗುರು ನರಸಿಂಹ ಅವತಾರಿ ಶ್ರೀ ಗುರು ಜೆಟ್ಟಿಂಗರಾಯ ದೇವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು . ಈ ಸಂದರ್ಭದಲ್ಲಿ ದೀಪಾವಳಿ ಅಮಾವಾಸ್ಯೆಯ ಪ್ರಯುಕ್ತವಾಗಿ ಜೆಟ್ಟಿಂಗರಾಯ ದೇವರ ಪಲ್ಲಕ್ಕಿಯ ಮೆರವಣಿಗೆಯ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹು ಅದ್ದೂರಿಯಾಗಿ ಜರುಗಿತು .ಈ ಸಂದರ್ಭದಲ್ಲಿ ಬಿಳವಾರ ಗ್ರಾಮದ ಮುತ್ತೈದೆಯರು ಮಂಗಳಾರತಿ ಬೆಳಗಿದರು ಅಲ್ಲದೆ ಈ ಸಂದರ್ಭದಲ್ಲಿ ಶ್ರೀ ಗುರುವಿಗೆ ಜಲಾಬಿಶೆಕ ಕಾರ್ಯಕ್ರಮವು ನಡೆಯಿತು ಈ ಸಂದರ್ಭದಲ್ಲಿ ಪರಸ್ತಳದಿಂದ ಬಂದಂತಹ ಭಕ್ತಾದಿಗಳು ಶ್ರೀ ಗುರುವಿನ ಆಶೀರ್ವಾದ ಪಡೆದರು ಹಾಗೂ ಕಲಿಯುಗದ ಭೂಕೈಲಾವೆಂದು ಪ್ರಸಿದ್ಧಿಯಾದ ಕಲಿಯುಗದ ಮಹಿಮಾ ಪುರುಷ ಶ್ರೀ ಗುರು ಮಹಿಮಾ ಪುರುಷ ಜೆಟಿಂಗರಾಯ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಗುರು ಜೆಟ್ಟಿಂಗರಾಯ ಸೇವಾ ಕಮಿಟಿ ವತಿಯಿಂದ ಪರಸ್ಥಳದಿಂದ ಜಾತ್ರೆಗೆ ಆಗಮಿಸಿದಂತಹ ಭಕ್ತಾದಿಗಳಿಗೆ ಉಚಿತ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಯಡ್ರಾಮಿ ತಾಲೂಕಿನ ಕಾಂಗ್ರೆಸ್ ಯುವ ಮುಖಂಡರಾದ ಶರಣು ಪೂಜಾರಿ ದೊಡ್ಡಮನಿ ಬಿಳವಾರ್ ಅವರು ದೇವೇಂದ್ರ ಪೂಜಾರಿ ಮಲ್ಲಾಬಾದ್ ಹಾಗೂ ರಾಜೇಂದ್ರ ಪೂಜಾರಿ ಕಾಂಗ್ರೆಸ್ ಯುವ ಮುಖಂಡರು ಈ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವರದಿ ಜೆಟ್ಟೆಪ್ಪ ಎಸ್ ಪೂಜಾರಿ