2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ : ಪ್ರಕಾಶ ಸಿಂದಗಿ

2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ : ಪ್ರಕಾಶ ಸಿಂದಗಿ

Share

2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ : ಪ್ರಕಾಶ ಸಿಂದಗಿ

ದೇವರಹಿಪ್ಪರಗಿ : ಕನ್ನಡ ನಾಡು ನುಡಿಗಾಗಿ ನಾವೆಲ್ಲ ಶ್ರಮಿಸಬೇಕು. ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸು ಕಾಯಕದಲ್ಲಿ ತೊಡಗಬೇಕೆಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.

ಶುಕ್ರವಾರ ಪಟ್ಟಣದ 1008 ಜಗದ್ಗುರು ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ 2 ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು, ಹಲವಾರು ಮಹನೀಯರ ಸತತ ಪ್ರಯತ್ನದಿಂದ ಕನ್ನಡ ಕಳೆಗಟ್ಟಿದೆ. ಕನ್ನಡ ನಾಡು ನುಡಿಗಾಗಿ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕೆಂದು ಕರೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ವಿಜಯಲಕ್ಷ್ಮೀ ನವಲಿ, ಕುವೆಂಪು, ಜಿ ಎಸ್ ಶಿವರುದ್ದಪ್ಪ ಬೇಂದ್ರೆಯಂತಹ ಸಹಸ್ರಾರು ಕಲಿಗಳ ಬೀಡಾಗಿದ್ದು, ಉಸಿರಿರುವ ತನಕ ಕನ್ನಡ ತಾಯಿ ಸೇವೆ ಮಾಡೋಣ ಕನ್ನಡಕ್ಕಾಗಿ ಸದಾ ಸಿದ್ಧರಿದ್ದು, ಕನ್ನಡವೇ ನಮ್ಮೂಸಿರಾಗಲಿ ಕನ್ನಡತನಕ್ಕೆ ಕೈ ಜೋಡಿಸೋಣ ಎಂದರು.

ಇದೇ ಸಂದರ್ಭದಲ್ಲಿ ನಾಡು ನುಡಿಗಾಗಿ ಶ್ರಮಿಸಿದ ಹಲವಾರು ಗಣ್ಯರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣ ಪಂಚಾಯತ ಅಧ್ಯಕ್ಷೆ ಜಯಶ್ರೀ ದೇವಣಗಾಂವ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪ.ಪಂ ಉಪಾಧ್ಯಕ್ಷ ರಮೇಶ ಮಸಬಿನಾಳ, ಕ.ಸಾ.ಪ ಅಧ್ಯಕ್ಷ ಜಿ.ಪಿ. ಬಿರಾದಾರ,ಬಿಜೆಪಿ ಯುವ ಮೋರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Share