ಬಂಗಾರ ಮತ್ತು ಮೋಟಾರ್ ಸೈಕಲ್ ಕಳುವ ಮಾಡಿದ ಕಳ್ಳರು ಬಂಧನ.

ಬಂಗಾರ ಮತ್ತು ಮೋಟಾರ್ ಸೈಕಲ್ ಕಳುವ ಮಾಡಿದ ಕಳ್ಳರು ಬಂಧನ.

Share

ಸಿರುಗುಪ್ಪ ನಗರದ ಸಿರುಗುಪ್ಪ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮನೆ ಕಳ್ಳತನ ಪ್ರಕರಣಗಳ ಹೆಚ್ಚಾಗಿದ್ದು.
ಪ್ರಕರಣಗಳಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಹಚ್ಚಿ 03,06,2024 ರಂದು ಸಿರುಗುಪ್ಪ ಸಿರಿಗೇರಿ, ಬಳ್ಳಾರಿ ಗ್ರಾಮೀಣ,ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು ಆರು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಆರೋಪಿತನಾದ ಕೆ ಕಾರ್ತಿಕ ತಂದೆ ರಾಮಾಂಜನಿ 30ವರ್ಷ, ವಿಳಾಸ ಅಕೋಲಾ ಚಾಲಮಯ್ಯ ಬೀದಿ ಕಪ್ಪಗಲ್ ರೋಡ್ ಎಸ್‌ಬಿಐ ಬ್ಯಾಂಕ್ ಹಿಂದೆ ಬಳ್ಳಾರಿ ರವರನ್ನು ವಸಕ್ಕೆ ಪಡೆದು 9,60,000 ಮೌಲ್ಯದ 16 ತೊಲೆ ಬಂಗಾರದ ಆಭರಣಗಳು ಹಾಗೂ ಸುಮಾರು ಒಂದು ಲಕ್ಷ 50 ಸಾವಿರ ಮೌಲ್ಯದ ಒಂದು ಬಜಾಜ್ ಕಂಪನಿಯ ಪಲ್ಸರ್ ಮೋಟಾರ್ ಸೈಕಲ್ ಅನ್ನು ಜಪ್ತಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ ಎಂದು ತಿಳಿಸಿದರು.
ಒಟ್ಟು ಜಪ್ತಿಪಡಿಸಿಕೊಂಡ ಮಾಲಿನಿ ಅಂದಾಜು 11,10,000 ರೂಗಳಾಗಿರುತ್ತವೆ ಎಂದು ತಿಳಿಸಿದ ಶ್ರೀ ರಂಜಿತ್ ಕುಮಾರ್ ಭಂಡಾರು ಐಪಿಎಸ್, ಕಳುವು ಮಾಡಿದ ಮೋಟಾರ್ಸೈಕಲ್ ಮತ್ತು ಬಂಗಾರ ಕಳುವ ಮಾಡಿದ ಕಳ್ಳರನ್ನು ಹಿಡಿಯಲು ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದು ತಂಡದಲ್ಲಿ ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು ಬಳ್ಳಾರಿ ಜಿಲ್ಲೆ, ಶ್ರೀ ಕೆ ಪಿ ರವಿಕುಮಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1 ಬಳ್ಳಾರಿ ಶ್ರೀ ನವೀನ್ ಕುಮಾರ್ ಹೆಚ್ಚುವರಿ ಪೊಲೀಸ ಅಧ್ಯಕ್ಷರು- 2 ಬಳ್ಳಾರಿ, ಉಪಾಧೀಕ್ಷರು, ಸಿರುಗುಪ್ಪ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ವೈ ಎಸ್ ಹನುಮಂತಪ್ಪ ವೃತ್ತ ನಿರೀಕ್ಷಕರು, ಸಿರುಗುಪ್ಪ ವೃತ್ತ ತಿಮ್ಮಣ್ಣ ಪಿಎಸ್ಐ ಸಿರುಗುಪ್ಪ ಪೊಲೀಸ್ ಠಾಣೆ, ಪರಶುರಾಮ ಪಿಎಸ್ಐ ಹಚೋಳ್ಳಿಠಾಣೆ , ಸಿಬ್ಬಂದಿಗಳಾದ ಸಿರುಗುಪ್ಪ ಪೊಲೀಸ್ ಠಾಣೆಯ ವಿಷ್ಣು ಮೋಹನ್ ಪಿಸಿ -1202,ಬಾಲಚಂದ್ರ ರಾಥೋಡ್ ಪಿಸಿ -1197, ದ್ಯಾಮನಗೌಡ ಪಿ ಸಿ -93, ಈರಣ್ಣ ಪಿಸಿ -105 ತೆಕ್ಕಲಕೋಟೆ ಪೊಲೀಸ್ ಠಾಣೆಯ ನಾಗರಾಜ ಎಚ್ ಸಿ -327, ರಾಮದಾಸ್ ಎಚ್ ಸಿ- 447.ಮೊಕ ಪೊಲೀಸ್ ಠಾಣೆಯ ಅನ್ವರ್ ಭಾಷ ಅವರು ಶ್ಲಾಗನೆ ವ್ಯಕ್ತಪಡಿಸಿದರು.


Share