ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಆಗ್ರಹ

ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಆಗ್ರಹ

Share

ಅರಸೀಕೆರೆ ನ್ಯೂಸ್
ಅರಸೀಕೆರೆ ತಾಲ್ಲೋಕ್, ಕಣಕಟ್ಟೆ ಹೋಬಳಿ, ಮಾಡಾಳು ಗ್ರಾಮ ಪಂಚಾಯಿತಿ
PDO ರವರು ಶಾರದಮ್ಮನವರು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸ್ಥಳ & ಗ್ರಾಮ ಪಂಚಾಯಿತಿಯಲ್ಲಿ ಹಣವಿದ್ದರೂ ಸಹ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸದೆ, ತ್ಯಾಜ್ಯ ವಿಲೇವಾರಿ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ ಮಾಡಾಳು ಗ್ರಾಮದಲ್ಲಿ ಹಾದುಹೋಗಿರುವ ಅರಸೀಕೆರೆ -ಹುಳಿಯಾರು ರಸ್ತೆಯ ಎರಡೂ ಕಡೆ ಕಸದ ರಾಶಿಯನ್ನು ಹಾಕಲಾಗಿದ್ದು, ರಸ್ತೆಯ ಮೇಲೆಲ್ಲಾ ಹರಡುತ್ತಿದ್ದು,ಸಾರ್ವಜನಿಕರು ಮೂಗು ಮುಚ್ಚಿಕೊಂಡು,ಓಡಾಡುವ ಪರಿಸ್ಥಿತಿ ಎದುರಾಗಿದೆ,ಮಾನ್ಯ, EO ರವರೇ, ಮಾನ್ಯ, CEO ರವರೇ, ಮಾನ್ಯ, ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೇ,
ಗ್ರಾಮೀಣಾಭಿವೃದ್ಧಿ &ಪಂಚಾಯತ್ ರಾಜ್ ಇಲಾಖೆಯ ಸಚಿವರೇ
ಇದೇ ರಸ್ತೆಯಲ್ಲಿ PDO ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು,ಅಧ್ಯಕ್ಷರು, ಸದಸ್ಯರು ನೋಡಿಕೊಂಡು ಓಡಾಡುತ್ತಿರುವರೆ ವಿನಃ ಇದುವರೆಗೂ ಸ್ವಚ್ಛಗೊಳಿಸುವ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿರುವ ಸರತಿ ಸದರಿ ಅಧಿಕಾರಿಗಳ & ಅಧ್ಯಕ್ಷರು, ಸದಸ್ಯರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಕಸದ ರಾಶಿಯನ್ನು ಬೇರೆಡೆ ಸ್ಥಳಾoತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿ, ಆಕ್ರೋಶ ವ್ಯಕ್ತಪಡಿಸಿದರು.


Share