ರೇವನೂರ ತಾಂಡದಲ್ಲಿ ಅಕ್ರಮ ಮದ್ಯಮಾರಾಟ ತಡೆಯುವಂತೆ ಗ್ರಾಮಸ್ಥರಿಂದ ಪ್ರತಿಭಟನೆ!.

ರೇವನೂರ ತಾಂಡದಲ್ಲಿ ಅಕ್ರಮ ಮದ್ಯಮಾರಾಟ ತಡೆಯುವಂತೆ ಗ್ರಾಮಸ್ಥರಿಂದ ಪ್ರತಿಭಟನೆ!.

Share

ಜೆವರ್ಗಿ ತಾಲೂಕಿನ ರೇವನುರು ತಾಂಡದಲ್ಲಿ ಅಕ್ರಮಮಧ್ಯ ಮಾರಾಟ ಬಂದ್ ಮಾಡದೆ ಹೋದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳವದಾಗಿ ಬಸವರಾಜ್ ಅವರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಹಾಗೂ
ರಾಜಾರೋಷವಾಗಿ ಯಾವುದೇ ಪರ್ಮಿಷನ್ ಪರವಾಗಿ ಇಲ್ಲದೆ ರಾತ್ರಿ ಹಗಲು ಎನ್ನದೆ ಸಿಕ್ಕಾಪಟ್ಟಿ ಸರಾಯಿ ಮಾರಾಟ ಮಾಡುತಿರುವುದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದೆ ಕೂಡಲೇ ತಾಂಡಕ್ಕೆ ಸರಾಯಿ ಸರಬರಾಜು ಬಂದು ಮಾಡುವಂತೆ ಒತ್ತಾಯಿಸಿ ರೇವನುರ ಗ್ರಾಮದ ತಾಂಡಾದ ಜನರು ತಹಸಿಲ್ದಾರ್ ಮೂಲಕ ಮನವಿ ಪತ್ರ ಸಲ್ಲಿದರು.
ರೇವನುರ ತಾಂಡಾದಲ್ಲಿ ಸುಮಾರು ವರ್ಷಗಳ ಹಿಂದೆ ರಾಜಾರೋಷವಾಗಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದ್ದರು ಅಧಿಕಾರಿಗಳು ಕ್ಯಾರಿಯನ್ನುತ್ತಿಲ್ಲ. ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ ಮಧ್ಯಪಾನ ಸೇವಿಸಿ ಅನೇಕರು ಮರಣ ಹೊಂದಿದ್ದಾರೆ. ಮತ್ತು ಗ್ರಾಮದಲ್ಲಿ ಗುಂಪು ಘರ್ಷಣೆ ಆಗುತ್ತಿದ್ದು ಇದರಿಂದ ಸಾರ್ವಜನಿಕರು ಬೇಸತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ತಾಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೋಡ ಮನವಿ ಪತ್ರ ಸ್ವೀಕರಿಸಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. “
ಬಸವರಾಜ್ ಬಾಗೇವಾಡಿ ವಿಷ್ಣುಸೇನಾ ತಾಲೂಕ ಅಧ್ಯಕ್ಷರು :- ಮದ್ಯಪಾನ ಮಾರಾಟ ನಿಷೇಧಿಸಿದ ಹೋಗಿದ್ದಲ್ಲಿ ರಾಜ್ಯದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಬಿಜೆಪಿ ಪಕ್ಷದ ಅಧ್ಯಕ್ಷರಾದ ಶಿವರಾಜ್ ಪಾಟೀಲ ರದ್ದೆವಡಗಿ, ತಿಪ್ಪಣ್ಣ ರಾಠೋಡ್, ಗ್ರಾಮ ಪಂಚಾಯತ್ ಸದಸ್ಯರಾದ ಅಪ್ಪಣ್ಣ ಪವರ್, ರಮೇಶ್ ರಾಠೋಡ್ ಮಾಜಿ ಗ್ರಾಮ್ ಪಂಚಾಯತ್ ಅಧ್ಯಕ್ಷರು ಹರನೂರ, ಗೋವಿಂದ, ಗಿನು ನಾಯಕ್, ಸಂತೋಷ್ ರಾಥೋಡ್, ವಿಜಯ್ ರಾಠೋಡ್, ಪಾಂಡು ರಾಥೋಡ್, ತಾವು ರಾಥೋಡ್, ರೇವು ಜಾಧವ್, ಸುನಿಲ್ ಜಾದವ್, ರೇವನೂರ ತಾಂಡಾದ ನೂರಾರು ಮಹಿಳೆಯರು ಉಪಸ್ಥಿತರಿದ್ದರು.


Share