ಚಿಕ್ಕೋಡಿ : ಚಿಕ್ಕೋಡಿಯ ಸಿ.ಎಲ್. ಇ. ಸಂಸ್ಥೆಯ ಚಿಂಚನಿ ಶ್ರೀ ಸಿದ್ಧಪ್ರಭು ಸ್ವಾಮಿಜಿಯ ಪ್ರೌಡ ಶಾಲೆ ಚಿಕ್ಕೋಡಿ ಸನ್ 1993-94 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ದಿನಾಂಕ : 02-06-2024 ರಂದು ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನೊತ್ಸವವನ್ನು ಚಿಕ್ಕೋಡಿಯ ಪದ್ಮಾ ಹಾಲ್ ನಲ್ಲಿ ಆಯೋಜನೆ ಮಾಡಿದ್ದರು , ಗುರುವಂದನಾ ಕಾರ್ಯಕ್ರಮದ ಸಾನಿಧ್ಯವನ್ನು ಚಿಕ್ಕೋಡಿಯ ಮ.ನಿ.ಪ್ರ. ಶ್ರೀ ಸಂಪಾದನಾ ಮಾಹಾಸ್ವಾಮಿಗಳು ವಹಿಸಿಕೊಂಡಿದ್ದರು , ದೀಪ ಬೆಳಗಿಸುವ ಮುಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಗುರವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ಗುರುಗಳನ್ನು 30 ವರ್ಷದ ಬಳಿಕ ಹುಡುಕಿ ಅವರನ್ನು ಕರೆತಂದು ಸತ್ಕಾರ ಮಾಡುವುದು ಅವರ ಸೇವೆ ಮಾಡುವುದು ತುಂಬಾ ಸಾರ್ಥಕದ ಕೆಲಸ ವಿದ್ಯೆ ಕಲಿಸಿದ ಗುರು ದೇವರಿಗೆ ಸಮಾನ ಎಂದರು. ಅದೇ ರೀತಿ ಶಿಕ್ಷಕರು ಮಾತನಾಡಿ 30 ವರ್ಷಗಳ ನಂತರ ನೀವೆಲ್ಲರೂ ಸೇರಿರುವುದು ಕಂಡು ತುಂಬಾ ಸಂತೋಷವಾಯಿತು. ನಾವು ಕಲಿಸಿದ ವಿದ್ಯಾರ್ಥಿಗಳಲ್ಲಿ ಕೆಲವರು ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ ಕೆಲವು ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ , ಉತ್ತಮ ವ್ಯಾಪಾರಸ್ಥರು , ಕಾಂಟ್ರೆಕ್ಟರ , ರಾಜಕಾರಣಿಗಳು ಹಾಗೂ ಇನ್ನೀತರ ಕೆಲಸಗಳನ್ನು ಮಾಡುತ್ತಿದ್ದಾರೆ ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು. ನಮ್ಮ ಸಮಾಜಕ್ಕೆ ಪೂರಕವಾದ ಕೆಲಸಗಳನ್ನು ಮಾಡಲಿ ಎಂದು ಆಶಿರ್ವದಿಸಿದರು. ಈ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳು ಕೂಡಿಕೊಂಡು ಗುರುವೃಂದಕ್ಕೆ ಹಾಗೂ ಮುಖ್ಯ ಅತಿಥಿಗಳಿಗೆ ಸನ್ಮಾಣ ಮಾಡಿ ಸವಿನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಿಷೇಷವಾಗಿ ಸ್ಥಳೀಯ ವಿದ್ಯಾರ್ಥಿಗಳಾದ ಅಮಿತ ಸಾಗರೆ , ಮೃತ್ಯುಂಜಯ ಹಿರೇಮಠ , ಸೋಮು ಗವನಾಳೆ ,ಸಿದ್ದು ಚಿಕ್ಕೋಡಿಕರ್ , ತಮ್ಮಣ್ಣ ಲಿಂಬಿಗಿಡದ ಕುಮಾರ ಮಠ ಮತ್ತು ಆರಿಫ ಹೆಚ್ಚು ಮುತ್ಸದ್ದಿ ವಹಿಸಿ ಬಂದ ಅತಿಥಿಗಳಿಗೆ , ಗುರುವೃಂದಕ್ಕೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಿದ್ದರು .