ಸರ್ಕಾರದ ವಿರುದ್ಧ ಅಮರನಾಥ ಮಧುರಕರ ಕೆಂಡಮಂಡಲ.

ಸರ್ಕಾರದ ವಿರುದ್ಧ ಅಮರನಾಥ ಮಧುರಕರ ಕೆಂಡಮಂಡಲ.

Share

ಜೆವರ್ಗಿ ಸುದ್ದಿ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಾಗಿನಿಂದ ರಾಜ್ಯದಲ್ಲಿ 800 ಕೋಟಿ ಹೈನುಗಾರಿಕೆ ಅನುದಾನ ಬಿಡುಗಡೆ ಮಾಡದೆ ಸರ್ಕಾರ ರೈತರನ್ನು ದಿವಾಳಿಯನ್ನಾಗಿ ಮಾಡಿದ್ದು ರಾಜ್ಯದ ಜನತೆಗೆ ಗೊತ್ತೇ ಇದೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮತ್ತು ಸರಕಾರದ ಶೂನ್ಯ ಸಾಧನೆಯ ಬಗ್ಗೆ ಜನಸಾಮಾನ್ಯರಿಂದ ಹಿಡಿದು ಎಲ್ಲರೂ ಹಿಡೀ ಶಾಪಹಾಕುತ್ತಿದ್ದಾರೆ ಮಹಿಳಾ ಸಬಲೀಕರಣಕ್ಕಾಗಿ ಅಂದಿನ ರಾಜ್ಯ ಸರ್ಕಾರದ ಕೂಟ ಶ್ರೀನಿವಾಸ್ ಪೂಜಾರಿ ಸಮಾಜ ಕಲ್ಯಾಣ ಇಲಾಖೆಯ ಸಚಿವರ ನೇತೃತ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷವಾಗಿ ಕರಾಟೆ ತರಬೇತಿ ಪ್ರತ್ಯೇಕವಾಗಿ ಅನುದಾನ ಬಿಡುಗಡೆ ಮಾಡಿತ್ತು ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಮುರಾರ್ಜಿ ವಸತಿ ಶಾಲೆಗಳ ಕರಾಟೆ ತರಬೇತಿ ಅನುದಾನವನ್ನು ಬಿಡುಗಡೆ ಮಾಡದೆ ಉಚಿತ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನರಿಗೆ ಮಂಕು ಬುದ್ಧಿ ಎರಚಿದೆ ಮುಂದೆ ಬರುವಂತಹ ದಿನಗಳಲ್ಲಿ ನಾಡಿನ ಜನರು ಈ ಸರ್ಕಾರಕ್ಕೆ ತಕ್ಕ ಬುದ್ಧಿಯನ್ನೆ ಕಲಿಸಲಿದ್ದಾರೆ ಎಂದು ಪ್ರಗತಿಪರ ಚಿಂತಕ ಜೇವರ್ಗಿ ತಾಲೂಕ ಜೆನ್ನ ಶಿಟೋರಿಯೊ ಕರಾಟೆ ಅಸೋಸಿಯೇಷನ್ ತಾಲೂಕ ಉಪಾದ್ಯಕ್ಷರು ಖ್ಯಾತ ಕರಾಟೆ ಶಿಕ್ಷಕರಾದ ಸೇನಸೈ ಅಮರನಾಥ್ ಮಧುರಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share