ಮಗುವಿನ ಪ್ರಗತಿಗಾಗಿ ಶಿಕ್ಷಕನು ಶಾಲೆಗೆ ಬರಬೇಕು, ಪಾಟೀಲ.

ಮಗುವಿನ ಪ್ರಗತಿಗಾಗಿ ಶಿಕ್ಷಕನು ಶಾಲೆಗೆ ಬರಬೇಕು, ಪಾಟೀಲ.

Share

ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪ್ರಾಥಮಿಕ ಹಾಗೂ ಪಿಯುಸಿ ವಿಜ್ಞಾನ ವಿಭಾಗದ ಶಾಲಾ ಕಾಲೇಜುಗಳ ಪ್ರಾರಂಭೋತ್ಸವವನ್ನು ದಿನಾಂಕ 01-06-2024 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ವಿಭಾಗದ ಪ್ರಾಂಶುಪಾಲರಾದ ಎಸ್ ಆರ್ ರಾಠೋಡ ಇವರು ಪ್ರಾರಂಭೋತ್ಸವ ಕುರಿತು ಮಾತನಾಡಿದರು ಶಾಲಾ ಕಾರ್ಯಕ್ರಮಗಳ ವೈಖರಿಯನ್ನು ಕುರಿತು ಹಾಗೂ ಮುಂದೆ ಬರುವ ದಿನಗಳಲ್ಲಿ ಶಾಲೆಯು ಗುಣಾತ್ಮಕವಾದ ರೀತಿಯಲ್ಲಿ ಸಾಗಬೇಕು ಅದಕ್ಕಾಗಿ ಶಿಕ್ಷಕರು ತಮ್ಮ ತಮ್ಮ ಪಾಠ ಬೋಧನೆಗಳಿಗೆ ಬೇಕಾಗಿರುವ ಎಲ್ಲಾ ಅವಶ್ಯಕತೆಗಳನ್ನು ತಯಾರಿ ಮಾಡಿ ಇಟ್ಟುಕೊಳ್ಳಿ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳಾದ ಎ ಎಸ್ ಪಾಟೀಲರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಮಗುವಿನ ಪ್ರಗತಿಗಾಗಿ ಶಿಕ್ಷಕನು ಶಾಲೆಗೆ ಬರಬೇಕು ಮಕ್ಕಳಿಂದ ನಾವೆಲ್ಲ ಶಿಕ್ಷಕರು ಬದುಕುತ್ತೇವೆ ಅದಕ್ಕಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ಅದರಲ್ಲೂ ವಿಶೇಷವಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕೃಷಿಕರ ಮಕ್ಕಳು ಹೆಚ್ಚಾಗಿರುವುದರಿಂದ ಆ ಮಕ್ಕಳಿಗೆ ಉತ್ತಮವಾದ ಗುಣಮಟ್ಟದ ಶಿಕ್ಷಣವನ್ನು ಕೊಟ್ಟು ದೇಶದ ಒಬ್ಬ ಒಳ್ಳೆಯ ಪ್ರಜೆಯನ್ನಾಗಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಆಗಿರುತ್ತದೆ ಎಂದು ತಿಳಿಸಿದರು. ಪರಸ್ಪರ ಭಿನ್ನಾಭಿಪ್ರಾಯ ವೈಮನಸ್ಸು ಬಿಟ್ಟು ಪ್ರಾಮಾಣಿಕವಾಗಿ ಆತ್ಮ ಸಾಕ್ಷಿಯಾಗಿ ಪಾಠ ಬೋಧನೆ ಮಾಡಿದಾಗ ಮಾತ್ರ ನಾವು ಕೊಡುತ್ತಿರುವ ಶಿಕ್ಷಣ ಗುಣಮಟ್ಟದ ಶಿಕ್ಷಣವಾಗುತ್ತದೆ. ಮಗುವಿಗೆ ಜ್ಞಾನದ ಹಸಿವು ಈಡೇರಿಸಲು ಸಾಧ್ಯ ಎಂದು ತಿಳಿಸಿದರು. ಯಾವತ್ತು ಶಿಕ್ಷಕನಾದವನು ಮಗುವಿನ ಲೋಪದೋಷಗಳನ್ನು ತಿದ್ದಲು ಪ್ರಯತ್ನ ಮಾಡಬೇಕು. ಆ ಲೋಪದೋಷಗಳಿಂದ ಮಕ್ಕಳು ಹೊರಬಂದು ಮಗುವಿನ ವರ್ತನೆಯಲ್ಲಿ ಬದಲಾವಣೆ ಆದಾಗ ಮಾತ್ರ ನಮ್ಮ ಕೊಡುತ್ತಿರುವ ಶಿಕ್ಷಣಕ್ಕೆ ಮೌಲ್ಯ ಇದೆ ಎಂದು ಅರ್ಥ ಬರುತ್ತದೆ ಇದರಿಂದ ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯವಾಗುತ್ತದೆ. ಒಬ್ಬರ ಶಿಕ್ಷಕರು ಇನ್ನೊಬ್ಬ ಶಿಕ್ಷಕರೊಂದಿಗೆ ಗೌರವಿತ ಭಾವನೆಯಿಂದ ಇರಬೇಕು. ನೀವು ಮಾಡುತ್ತಿರುವ ಕಾರ್ಯದ ಬಗ್ಗೆ ಜನರಿಗೆ ನಂಬಿಕೆ ಬರುವುದಕ್ಕಿಂತ ಮೊದಲು ನಿಮ್ಮ ಮನಕ್ಕೆ ನಂಬಿಕೆ ಬರಲಿ ಅದರಿಂದ ಮೊದಲು ನಾವು ತೃಪ್ತಿಪಟ್ಟುಕೊಳ್ಳೋಣ ನಂತರ ಜಗತ್ತು ತೃಪ್ತಿಪಡುತ್ತದೆ ಎಂದು ತಿಳಿಸಿದರು. ಇವರೊಂದಿಗೆ ವೇದಿಕೆ ಮೇಲೆ ಪ್ರೌಢಶಾಲಾ ಮುಖ್ಯ ಗುರುಗಳಾದ ಬಿ ಎಸ್ ಖ್ಯಾದಿ. ಹಾಗೂ ಪ್ರಾಥಮಿಕ ವಿಭಾಗದ ಮುಖ್ಯ ಗುರುಗಳಾದ ಎ ಎಮ್ ಮುಚ್ಚಂಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಯಾ ವಿಭಾಗಗಳಿಗೆ ಸಂಬಂಧ ಪಟ್ಟಿರುವ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕಿಯರು. ಉಪನ್ಯಾಸಕರು, ಉಪನ್ಯಾಸಕಿಯರು ಉಪಸ್ಥಿತರಿದ್ದರು.


Share