ಕಾಳಗಿ : ಜಿಲ್ಲೆಯ ಕಾಳಗಿ ತಾಲೂಕಿನ ವ್ಯಾಪ್ತಿಯಲ್ಲಿ ತೆಲಂಗಾಣ ಪಾಸಿಂಗ್ ವಾಹನಗಳಿಂದ ಅಕ್ರಮ ಸವಳು ಗಣಿಗಾರಿಕೆ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ತಹಶಿಲ್ದಾರರು ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಳಗಿ ತಾಲೂಕಿನ ಸೂಗುರ(ಕೆ), ಸುಂಠಾಣ, ಹೋಡೆಬೀರನಳ್ಳಿ, ಕೋರವಿ, ಕೊರವಿ ತಾಂಡಾ, ರಾಮನಗರ ತಾಂಡಾ, ಗಡಿಕೇಶ್ವಾರ, ಹೊಸಳ್ಳಿ, ಹಲಚೇರಾ, ಕುಡಹಳ್ಳಿ ಸೇರಿ ಇತರೆ ತಾಂಡಾ ಹಾಗೂ ಗ್ರಾಮಗಳಲ್ಲಿ ಎಗ್ಗಿಲ್ಲದೆ ಅಕ್ರಮ ಸವಳು ಗಣಿಗಾರಿಗೆ ದಂಧೆ ಜೋರಾಗಿ ನಡೆದಿದೆ. ತಾಲೂಕಿನಲ್ಲಿ ಎಷ್ಟು ಜನ ಗಣಿ ಮಾಲೀಕರು ಭೂಮಿ ಲೀಜ್ ಪಡೆದಿದ್ದಾರೆ ಎಂಬ ನಿಖರ ಮಾಹಿತಿ ದೊರುಕುತ್ತಿಲ್ಲ, ಕೆಲವರು ಒಂದು ಕಡೆ ಲೀಜ್ ಪಡೆದು ಸುಮಾರು ಕಡೆ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಯಾವುದೇ ಭೂಮಿ ಲೀಜ್ ಪಡೆಯದೇ ಗಣಿಗಾರಿಕೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಗಣಿ ಮತ್ತು ಭೂ ಇಲಾಖೆಯವರು ಹಾಗೂ ತಾಲೂಕಾಡಳಿತ ಗಾಢನಿದ್ರೆಗೆ ಜಾರಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ತಾಲೂಕಿನ ಸುಮಾರು ಗ್ರಾಮಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕಣ್ಣೆದುರೇ ರಾಜರೋಷವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆಯನ್ನು ತಡೆಯಬೇಕಾದ ತಾಲೂಕಾಡಳಿತ ಹಾಗೂ ತಹಶಿಲ್ದಾರರರು ಹಣದಾಸೆಗೆ ಅಕ್ರಮ ಸವಳು ಗಣಿಗಾರಿಕೆಗೆ ಸಾಥ್ ನೀಡುತ್ತಿದ್ದಾರೆ ಎಂದು ಹಿಂದೂ ಜಾಗೃತಿ ಸೇನೆ ತಾಲೂಕಾಧ್ಯಕ್ಷ ಶಂಕರ ಚೌಕ ಆರೋಪಿಸಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿನಲ್ಲಿ ಸಾಲು ಸಾಲುಗಳಿಂದ ಸವಳು ಟಿಪ್ಪರ ಲಾರಿಗಳು ಓವರ್ ಲೋಡ್ ತುಂಬಿಕೊಂಡು ಹೋಗುತ್ತಿದ್ದು, ಇದರಿಂದ ಮಣ್ಣು ಟಿಪ್ಪರದಿಂದ ಕೆಳಗೆ ಬಿಳುತ್ತಿದೆ. ಇದರ ಹಿಂಭಾಗದಲ್ಲಿ ಸಂಚರಿಸುವ ವಾಹನಗಳ ಸವಾರರಿಗೆ ತೀವ್ರ ತಲೆ ನೋವಾಗಿದೆ. ಸಾಗಣೆ ಮಾಡುತ್ತಿರುವ ಸವಳು ಮಣ್ಣಿನ ಟಿಪ್ಪರಗಳನ್ನು ತಡೆದು ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರೀಶಿಲನೆ ಮಾಡಿ ವಾಹನಗಳನ್ನು ಸೀಜ್ ಮಾಡುವಂತೆ ಸ್ಥಳೀಯರ ಒತ್ತಾಸೆಯಾಗಿದೆ.
ತಹಶಿಲ್ದಾರ – ಕಂದಾಯ ನೀರಿಕ್ಷಕರ ಮಧ್ಯೆ ವಾಗ್ವಾದ
ಕಾಳಗಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಸವಳು ಗಣಿಗಾರಿಕೆ ಕುರಿತು ಪ್ರಶ್ನಿಸಿಸಲು ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ತಹಸೀಲ್ ಕಛೇರಿಗೆ ಹೋದಾಗ ತಹಶಿಲ್ದಾರರಾದ ಘಮಾವತಿ ರಾಠೋಡ ಅವರು ತಾಲೂಕಿನಲ್ಲಿ ಸವಳು ಗಣಿಗಾರಿಕೆಗೆ ನಡೆಸಲು ತಾಲೂಕಾಡಳಿತದಿಂದ ಯಾರು ಪರವಾನಿಗೆ ಪಡೆದುಕೊಂಡಿಲ್ಲ,
ಅಕ್ರಮ ಸವಳು ಗಣಿಗಾರಿಕೆಗೆ ನಡೆಯುತ್ತಿರುವುದು ಗಮನಕ್ಕಿಲ್ಲ ಎಂದರು. ಆಗ ಸ್ಥಳದಲ್ಲಿದ್ದ ಕಂದಾಯ ನೀರಿಕ್ಷಕ ಮಂಜುನಾಥ ಮಹಾರುದ್ರ ಅವರನ್ನು ಅಕ್ರಮ ಸವಳು ಗಣಿಗಾರಿಕೆಗೆ ಮಾಡುವ ವಾಹನವನ್ನು ಸೀಜ್ ಏಕೆ ಮಾಡುತ್ತಿಲ್ಲ ಎಂದು ಕೇಳಿದಾಗ ಪರವಾನಿಗೆ ಇಲ್ಲದೆ ಅಕ್ರಮ ಸವಳು ಸಾಗಟ ಮಾಡುತ್ತಿರುವ ವಾಹನಗಳನ್ನು ತಡೆದರೆ ನಿಮ್ಮ ತಹಶಿಲ್ದಾರ ಅವರಿಗೆ ಬೇಟಿ ಮಾಡಿ ಮಾತುಕತೆ ಮಾಡಿದ್ದೆವೆ ನಮ್ಮ ವಾಹನ ಬಿಡಿ ಎಂದು ಹೇಳುತ್ತಿದ್ದಾರೆ ಎಂದರು ಆಗ ತಹಶಿಲ್ದಾರರ ಮತ್ತು ಕಂದಾಯ ನೀರಿಕ್ಷರ ಮಧ್ಯೆ ಕೆಲ ಕಾಲ ವಾಗ್ವಾದ ನಡೆಯಿತು.
ಹೆಸರಿಗೆ ಮಾತ್ರ ದಂಡ
ಒಂದು ಗ್ರಾಮದಲ್ಲಿ ಕೆಲವರು ಒಂದೆರಡು ಎಕರೆ ಅಥವಾ ಅರ್ಧ ಎಕರೆ ಭೂಮಿಯಲ್ಲಿ ಲೀಜ್ ಪಡೆದಿದ್ದಾರೆ. ಆದರೆ ಒಂದು ಕಡೆ ಲೀಜ್ ಪಡೆದು ಹಲವಾರು ಕಡೆ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಮೂಲದಿಂದ ತಿಳಿದು ಬಂದಿದೆ. ಅಕ್ರಮ ಗಣಿಗಾರಿಕೆ ಕುರಿತು ದೂರು ನೀಡಿದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೆಸರಿಗಷ್ಟೇ ದಂಡ ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ. ದಂಡ ಹಾಕಿದ ನಂತರ ಗಣಿಗಾರಿಕೆ ಮಾಡುತ್ತಿರುವ ಖನಿಜ ಜಪ್ತಿ ಮತ್ತು ಗಣಿಗಾರಿಕೆ ಸಂಪೂರ್ಣ ಬಂದ್ ಮಾಡದೇ ಸ್ವಲ್ಪ ಪ್ರಮಾಣದ ದಂಡ ಹಾಕಿ ಹೋಗುತ್ತಾರೆ. ಇದರಿಂದ ಗಣಿ ಮಾಲೀಕರು ಇದನ್ನೆ ಲಾಭ ಪಡೆದು ನಿರಂತರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗುತ್ತಾರೆ. ಸ್ವತಃ ಅಧಿಕಾರಿಗಳೇ ಅಕ್ರಮ ನಡೆಸಲು ಗ್ರೀನ್ ಸಿಗ್ನಲ್ ಕೊಡುವಂತಾಗಿದೆ.
ಹೇಳಿಕೆ1: ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು ಮಾಹಿತಿ ಇಲ್ಲ, ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಘಮಾವತಿ ರಾಠೋಡ. ಗ್ರೇಡ್-1 ತಹಶಿಲ್ದಾರ ಕಾಳಗಿ
ಹೇಳಿಕೆ2 : ಅಕ್ರಮ ಸವಳು ಗಣಿಗಾರಿಕೆ ವಿರುದ್ಧ ಸತತ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದೆನೆ, ಜಿಲ್ಲಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತಹಶಿಲ್ದಾರ ಗಮನಕ್ಕೂ ತಂದಿದ್ದೆನೆ. ಆದರೆ ಕಡಿವಾಣ ಹಾಕಬೇಕಾದ ಅಧಿಕಾರಿಗಳೇ ಹಣ ಪಡೆದು ಅಕ್ರಮ ಸವಳು ಗಣಿಗಾರಿಕೆಗೆ ಸಾಥ್ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಗಮನಿಸಿ ಅಕ್ರಮ ಸವಳು ಗಣಿಗಾರಿಕೆ ಬಂದ್ ಮಾಡಿಸದಿದ್ದರೆ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
– ಶಂಕರ ಚೌಕ ರಟಕಲ್. ಹಿಂದೂ ಜಾಗೃತಿ ಸೇನೆ ತಾಲೂಕಾಧ್ಯಕ್ಷ ಕಾಳಗಿ.
2ಕಾಳಗಿ1
ಕಾಳಗಿ : ಸೂಗುರ(ಕೆ) ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮವಾಗಿ ಸವಳು ಗಣಿಗಾರಿಕೆ ನಡೆದಿರುವುದು.
2ಕಾಳಗಿ2
ಕಾಳಗಿ : ಪಟ್ಟಣದ ತಹಶಿಲ್ದಾರರ ಕಛೇರಿಯಲ್ಲಿ ಅಕ್ರಮ ಗಣಿಗಾರಿಕೆ ವಿಷಯದ ಕುರಿತು ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಪ್ರಶ್ನೆ ಮಾಡಲು ಬಂದಾಗ ತಹಶಿಲ್ದಾರರ ಹಾಗೂ ಕಂದಾಯ ನೀರಿಕ್ಷಕನ ಮಧ್ಯೆ ವಾಗ್ವಾದ ನಡೆಯಿತು.