ಕಾಳಗಿ : ,ಬಡವನಾಗಿ ಹುಟ್ಟಿದರು ಸಮಾಜದ ಬದುಕಿಗೆ ಆದರ್ಶವಾದ ಅಧಿಕಾರಿ ಸದಾ ಜನರ ಸೇವೆ ಜನಾರ್ದನ ಸೇವೆಗೆ ಎಂಬಂತೆ ಸರಕಾರಿ ಕೆಲಸ
ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಕಾಳಗಿ, ಕೊಪ್ಪಳ, ಚಿಂಚೋಳಿ, ಕಲಬುರಗಿ ತಾಲೂಕುಗಳಲ್ಲಿ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯ ಅನುಭವ. ಅದರಲ್ಲೂ ಕಾಳಗಿಯಲ್ಲಿ 10 ವರ್ಷಗಳ ಸೇವಾವಧಿಯಲ್ಲಿ ಇಲಾಖೆಯ ಸಿಬ್ಬಂಧಿಗಳ ಸಹಕಾರದಿಂದ ಅನೇಕ ಅಭಿವೃದ್ಧಿ ಕೆಲಸಗಳಾಗಿದ್ದು, ಯಾವುದೇ ಕಳಪೆ ಕೆಲಸವಾಗಿಲ್ಲ ಎಂಬ ಸಂತೃಪ್ತಿಯೊಂದಿಗೆ ನಿವೃತ್ತಿ ಹೊಂದಿದ್ದೇನೆ ಎಂದರಲ್ಲದೇ ಲೋಕೊಪಯೋಗಿ ಇಲಾಖೆಯಲ್ಲಿ ಸಲ್ಲಿಸುವುದರೊಂದಿಗೆ, ನೌಕರರ ಸಂಘಟನೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆಯಲು ತಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶರಣಗೌಡ ಪೊಲೀಸ ಪಾಟೀಲ್ ಮಾತನಾಡಿ ಕಳಂಕರಹಿತ ಸೇವೆ ಮುಖ್ಯ. ಆ ನಿಟ್ಟಿನಲ್ಲಿ ಸಿದ್ರಾಮ ದಂಡಗುಲಕರ್ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿ ತಮ್ಮ ವೃತ್ತಿಗೆ ನ್ಯಾಯ ಒದಗಿಸಿ ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ತಹಶಿಲ್ದಾರರ ಘಮಾವತಿ ರಾಠೋಡ, ಡಾ. ಪ್ರಿಯಾಂಕ ದಂಡಗೂಲಕರ್, ಸೃಜನ್ ದಂಡಗೂಲಕರ್, ಪಪಂ ಸದಸ್ಯ ಸೂರ್ಯಕಾಂತ ಕಟ್ಟಿಮನಿ ಮಾತನಾಡಿದರು.
ಚಿತ್ತಾಪುರ ಪಿಡ್ಬ್ಲೂಡಿ ಎಇಇ ಮಹ್ಮದ ಸಲೀಂ, ಕಾಳಗಿ ಪ್ರಭಾರಿ ಪಿಡ್ಬ್ಲೂಡಿ ಎಇಇ ಮಲ್ಲಿಕಾರ್ಜುನ ದಂಡಿನ್, ಪ್ರಾಚಾರ್ಯ ಶ್ರೀಶೈಲ ಬೋನಾಳ, ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಆನಂದ ಮಹಾಗಾಂವ್, ಎಇ ರಾಹುಲ್, ಜೆಇ ರಾಜೇಂದ್ರ ದೇಶಪಾಂಡೆ, ಥಾವುರು ರಾಠೋಡ, ಅಕ್ಷಯ ಕುಲಕರ್ಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಮಹಾರುದ್ರ, ಜಿಲ್ಲಾ ಭೋವಿ ಸಮಾಜ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳುಕೆ, ಉದ್ಯಮಿ ಮಹೇಶ ಭದ್ರಾವತಿ, ಸಂತೋಷ ಪಾಟೀಲ ಮಂಗಲಗಿ, ಶಿವಶರಣಪ್ಪ ಕಮಲಾಪೂರ, ರಾಘವೇಂದ್ರ ಗುತ್ತೇದಾರ, ವೇದಪ್ರಕಾಶ ಮೊಟಗಿ, ಶೇಖರ ಪಾಟೀಲ ಹಣಮಂತ ಒಡೆಯರಾಜ,ರಾಜು ಮೇಳಕುಂದಿ,ಲಕ್ಷ್ಮಣ ಜಾಧವ,ಭೀಮರಾವ್ ಗುತ್ತೆದಾರ ,ಸುನೀಲ್ ದಂಡಗುಲಕರ್, ದಶರಥ ಜಾಧವ,ನರಸಿಂಗ್ ಜಾಧವ್ ,ಸುನೀಲ ಪಲ್ಲೆಪೂರ,ರಾಜು ಮಂಜಳಕರ್ ಇತರರು ಇದ್ದರು.
ಭೀಮರಾಯ ಮಲಘಾಣ ಸ್ವಾಗತಿಸಿದರು, ಶಿವಕುಮಾರ್ ಶಾಸ್ತ್ರಿ ನಿರೂಪಿಸಿ ವಂದಿಸಿದರು.