ದಿನಾಂಕ 15.09.2024 ರಂದು ಹುಣಸೂರು ತಾಲ್ಲೂಕಿನ ಬೆಂಕಿಪುರ ಗ್ರಾಮದಲ್ಲಿ ಹಾಡಹಗಲೇ ನಡೆದಿದ್ದ ರೋಜಾ ಕೋಂ ಸ್ವಾಮಿನಾಯಕ ರವರ ಕೊಲೆ ಪ್ರಕರಣದ ಸಂಬಂಧ ಎರಡನೇ ಆರೋಪಿತಳಾದ ಬೆಂಕಿಪುರ ಗ್ರಾಮದ ವಾಸಿ ಸಣ್ಣಮಲ್ಲಿಗೆ ಕೋಂ ಲೇಟ್ ಪುಟ್ಟಮಂಚನಾಯಕ (37 ವರ್ಷ) ಎಂಬುವಳನ್ನು ಬಿಳಿಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ಈ ದಿನ ದಿನಾಂಕ 01.12.2024 ರ ಮುಂಜಾನೆ ಹುಣಸೂರು ತಾಲ್ಲೂಕಿನ ನಲ್ಲೂರು ಪಾಲ ಗ್ರಾಮದ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ದಸ್ತಗಿರಿ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಮೊದಲನೇ ಆರೋಪಿತನಾದ ಬೆಂಕಿಪುರ ಗ್ರಾಮದ ಸ್ವಾಮಿ ನಾಯಕ ಬಿನ್ ಪೀರನಾಯಕ @ ಚನ್ನನಾಯಕ ಎಂಬುವನನ್ನ ಈಗಾಗಲೇ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದನ್ನು ಸ್ಮರಿಸಬಹುದಾಗಿದೆ.
ಈ ಕಾರ್ಯಾಚರಣೆಯಲ್ಲಿ ಬಿಳಿಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರಾದ ಶ್ರೀಮತಿ ಲೋಲಾಕ್ಷಿ ರವರು, ಸಿಬ್ಬಂದಿಗಳಾದ ಪ್ರಸಾದ್ ಧರ್ಮಾಪುರ, ಶಿವಕುಮಾರ, ಹರೀಶ ಹಾಗೂ ಅಶೋಕ ಕಗ್ಗೆರೆ ರವರುಗಳು ಭಾಗವಹಿಸಿದ್ದರು.
