ಎನ್ಎಸ್ಎಸ್ ವಾರ್ಷಿಕ ಸಿಬಿರ ಕಾರ್ಯಕ್ರಮ

ಎನ್ಎಸ್ಎಸ್ ವಾರ್ಷಿಕ ಸಿಬಿರ ಕಾರ್ಯಕ್ರಮ

Share

ಯಾದಗಿರಿ :ಹಿರೇವಡೆಗೆರಾ ನಗರದ ಬನಸಿರಿ ಪದವಿ ಮಹಾವಿದ್ಯಾಲಯವು ರಾಯಚೂರು ವಿಶ್ವವಿದ್ಯಾಲಯ ಸಂಯೋಗದೊಂದಿಗೆ ಹಿರೇವಡೆಗೇರಾದ ಕಮಲ ನಾಯಕ ನಗರದಲ್ಲಿ ಎನ್.ಎಸ್.ಎಸ್. ವಾರ್ಷಿಕ ಶಿಬಿರ ನೆರವೇರಿತು. ಗ್ರಾಮದ ಹಿರಿಯ ಮುಖಂಡರಾದ ಕಮಲಪ್ಪ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಯಾದಗಿರಿ ಸರ್ಕಾರಿ ಪದವಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ ಚಂದ್ರಶೇಖರ್ ಕೊಂಕಲ್ ಅವರು ವಹಿಸಿ ಸ್ವಯಂಸೇವಕರು ಇಂತಹ ಶಿಬಿರದಲ್ಲಿ ಭಾಗವಹಿಸಿ ಗಾಂಧೀಜಿಯವರ ಕನಸು ನನಸಾಗಬೇಕಾದರೆ ಗ್ರಾಮಗಳು ಉದ್ಧಾರವಾಗಬೇಕು. ಹಳ್ಳಿಗಳ ಉದ್ಧಾರವೇ ನಮ್ಮ ಉದ್ದೇಶ, ಹಳ್ಳಿ ಹಳ್ಳಿಗಳಲ್ಲಿ ಸ್ವಚ್ಛತೆ ಅರಿವು ಮೂಡಿಸಬೇಕು ನಾವು ಕಲಿತು ಮತ್ತೊಬ್ಬರಿಗೆ ಕಲಿಸಬೇಕು ಎಂದರು. ಕಾಲೇಜಿನ ಪ್ರಾಂಶುಪಾಲರಾದ ರಾಚಯ್ಯ ಬಿ ಹಿರೇಮಠ್ ಶಿಬಿರ ಅಧಿಕಾರಿ ದೇವೇಂದ್ರಪ್ಪ ಸಜ್ಜನ್ ಕಾಲೇಜಿನ ಸಿಬ್ಬಂದಿಗಳಾದ ಸುರೇಶ್ ಕುಮಾರ್ ಮಠ ಮಲ್ಲರೆಡ್ಡಿ ಜಡಿ, ವಿರುಪಾಕ್ಷಯ್ಯ ಸ್ವಾಮಿ, ರಾಷ್ಟ್ರೀಯ ಸೇವಾದಳ ಜಿಲ್ಲಾ ಸಂಘಟಕರಾದ ಖಮುರುದ್ದಿನ ,ಮತ್ತು ಗ್ರಾಮದ ಜನರು ,ಸ್ವಯಂ ಸೇವಕರು, ಶಿಬಿರಾರ್ಥಿಗಳು ಮತ್ತು ಉಪಸ್ಥಿತರಿದ್ದರು


Share