ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಕೋಟಿ ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡಿದೆ.
2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್ ಬಿಐ (RBI) ಹಿಂಪಡೆದಿದ್ದು, ಸಾರ್ವಜನಿಕರ ಕೈಲಿದ್ದ ನೋಟುಗಳ ಪೈಕಿ ಈ ವರೆಗೂ ಶೇ.97.87 ರಷ್ಟು ನೋಟುಗಳು ಮರಳಿ ಆರ್ ಬಿಐ ವ್ಯಾಪ್ತಿಗೆ ಬಂದಿದೆ. 7,581 ಕೋಟಿ ರೂಪಾಯಿ ಮೌಲ್ಯದ ಮುಖಬೆಲೆಯ ನೋಟುಗಳು ಮಾತ್ರವೇ ಸಾರ್ವಜನಿಕರ ಬಳಿ ಇದೆ ಎಂದು ಆರ್ ಬಿಐ ತಿಳಿಸಿದೆ.2023 ರ ಮೇ.19 ರಂದು ಆರ್ ಬಿಐ 2000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಹೇಳಿತ್ತು. ಚಲಾವಣೆಯಲ್ಲಿರುವ 2000 ರೂ.ಗಳ ನೋಟುಗಳ ಒಟ್ಟು ಮೌಲ್ಯವು 2023 ರ ಮೇ 19 ರಂದು ವ್ಯವಹಾರದ ಮುಕ್ತಾಯದ ವೇಳೆಗೆ 3.56 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, ಜೂನ್ 28, 2024 ರಂದು ವ್ಯವಹಾರದ ಮುಕ್ತಾಯದ ವೇಳೆಗೆ 7,581 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ.
ಠೇವಣಿ ಮತ್ತು/ಅಥವಾ ರೂ 2000 ಬ್ಯಾಂಕ್ ನೋಟುಗಳ ವಿನಿಮಯದ ಸೌಲಭ್ಯವು ಅಕ್ಟೋಬರ್ 7, 2023 ರವರೆಗೆ ದೇಶದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿತ್ತು.