ವಿವಿಧೆಡೆ ಸಂಭ್ರಮದ ಮಧ್ಯ ಶಾಲಾ ಆರಂಭೋತ್ಸವ

ವಿವಿಧೆಡೆ ಸಂಭ್ರಮದ ಮಧ್ಯ ಶಾಲಾ ಆರಂಭೋತ್ಸವ

Share

ಆಳಂದ:- ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸುತ್ತೋಲೆಯಂತೆ ಶಾಲಾ ಆರಂಭೋತ್ಸವ ಸಂಭ್ರಮ ಸಡಗರದೊಂದಿಗೆ ಸಿಹಿ ಹಂಚಿ ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು.
ತಾಲ್ಲೂಕಿನ ನರೋಣಾ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ದಿನದಂದು ಶಾಲೆಯ ಕೋಣೆ, ಬಾಗಿಲುಗಳಿಗೆ ತಳಿರು, ತೋರಣ ಕಟ್ಟಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಸಂಸ್ಕೃತಿ ಮತ್ತು ಸಿಹಿ ಹಂಚಿ ಸ್ವಾಗತಿಸಲಾಯಿತು. ಈ ವೇಳೆ ಶಾಲಾ ಸಿಬ್ಬಂದಿಗಳು, ಮುಖ್ಯ ಶಿಕ್ಷಕ ನಾಗಪ್ಪ ಎಸ್ ದೇವಂತಗಿ, ಅರುಣ್ ಕುಮಾರ ಭೈರಗೊಂಡ, ಶಿವರಾಜ ಯಾವತ್ತು, ರವಿ ರಾಗಿ, ನಂದಿತಾ ಬುಕ್ ಸೇರಿದಂತೆ ಮಕ್ಕಳು ಹಾಜರಿದ್ದ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ತಾಲೂಕಿನ ತಡೋಳಾ ಶಾಲಾ ಮಕ್ಕಳಿಗೆ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಹೂ ನೀಡಿ ಸ್ವಾಗತಿಸಿ ಸಂಭ್ರಮಿಸಿದರು.


Share