ನಾಗ್ಪುರ: ಅತ್ತ ಕೇರಳದಲ್ಲಿ ಮುಂಗಾರು ಪ್ರವೇಶಿಸಿದ್ದರೆ, ಇತ್ತ ದೆಹಲಿ ರಾಜಸ್ಥಾನ, ಮಹಾರಾಷ್ಟ್ರ ಪ್ರದೇಶಗಳಲ್ಲಿ ತಾಪಮಾನ ಹೆಚ್ಚುತ್ತಿದ್ದು Heat wave ಜನತೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ನಾಗ್ಪುರದಲ್ಲಿ ತಾಪಮಾನ 56 ಡಿಗ್ರಿ ಸೆಲ್ಶಿಯಸ್ ಗೆ ಏರಿಕೆಯಾಗಿದ್ದು, ವಾಯುವ್ಯ ದೆಹಲಿಯ ಮುಂಗೇಶ್ವರ AWS (ಸ್ವಯಂಚಾಲಿತ ಹವಾಮಾನ ಕೇಂದ್ರ)ದಲ್ಲಿ ಇತ್ತೀಚೆಗೆ 52.9 ಡಿಗ್ರಿ ಸೆಲ್ಶಿಯಸ್ ನಷ್ಟು ತಾಪಮಾನ ದಾಖಲಾಗಿತ್ತು.ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ನಾಗ್ಪುರ ಎಡಬ್ಲ್ಯುಎಸ್ ನಲ್ಲಿ ರಾಮ್ ದಾಸ್ ಪೇಟ್ ನಲ್ಲಿರುವ ಪಿಡಿಕೆವಿಗೆ ಸೆರಿದ 24 ಹೆಕ್ಟೇರ್ ಕೃಷಿ ಭೂಮಿಯಲ್ಲಿ 56 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ.
ಸೋನೆಗಾಂವ್‌ನಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರದ ಉದ್ದಕ್ಕೂ AWS 54 ಡಿಗ್ರಿ ಸೆಲ್ಸಿಯಸ್ ನ್ನು ದಾಖಲಿಸಿದೆ.
ಏತನ್ಮಧ್ಯೆ, ಭಾರತೀಯ ಹವಾಮಾನ ಕೇಂದ್ರ (ಐಎಂಡಿ) ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಗುರುವಾರ, ದೇಶದಾದ್ಯಂತ ಶ್ರೀ ಗಂಗಾನಗರ (ಪಶ್ಚಿಮ ರಾಜಸ್ಥಾನ) ನಲ್ಲಿ ಗರಿಷ್ಠ ಗರಿಷ್ಠ ತಾಪಮಾನ 48.3°C ಯಷ್ಟು ವರದಿಯಾಗಿದೆ.ದೆಹಲಿಯಲ್ಲಿ ಸತತ 5 ನೇ ದಿನ Heat wave ವರದಿಯಾಗಿದೆ. ಮೇ.26 ರಿಂದ 30 ವರೆಗೆ ದೆಹಲಿಯ ತಾಪಮಾನ 45°C ನಲ್ಲಿ ಸ್ಥಿರವಾಗಿದೆ.