ಮನ ಶಾಂತಿಗಾಗಿ ಆಧ್ಯಾತ್ಮಿಕ ಚಿಂತನೆ ಅವಶ್ಯಕವಾಗಿ ಬೇಕು ಧರ್ಮು:ಚಿನ್ನಿ ರಾಠೋಡ್.

ಮನ ಶಾಂತಿಗಾಗಿ ಆಧ್ಯಾತ್ಮಿಕ ಚಿಂತನೆ ಅವಶ್ಯಕವಾಗಿ ಬೇಕು ಧರ್ಮು:ಚಿನ್ನಿ ರಾಠೋಡ್.

Share

ಇಂದಿನ ದಿನಮಾನದ ಆಧುನಿಕತೆಯ ಭರಾಟೆಯಲ್ಲಿ ಇಂದಿನ ಜೀವನಶೈಲಿ ಆಹಾರ ಮತ್ತು ವಿಹಾರ ಕಲಬೆರಕೆಯಾಗಿ ಮನಸ್ಸಿನ ನೆಮ್ಮದಿ ಕಳೆದುಕೊಂಡು ಐ ಬಿಪಿ ಶುಗರ್ ಮತ್ತು ಪಾಶ್ಚರ್ರ್ವಾಯು ನಂತಹ ಮಾರಕ ರೋಗಗಳಿಗೆ ಚಿಕ್ಕ ವಯಸ್ಸಿನ ಯುವಕರು ಬಲಿಯಾಗುತಿರುವದು ಕೇದಕರ ಸಂಗತಿಯಾಗಿದ್ದು ಹಣ ಆಸ್ತಿ ಅಂತಸ್ತು ಮಾಡುವ ಬರದಲ್ಲಿ ಆರೋಗ್ಯದ ಕಡೆ ಗಮನ ಕೊಡದೆ ಮನಸಿನ ನಿಯಂತ್ರಣವಿಲ್ಲದೆ ಉದ್ವೇಗಕ್ಕೆ ಒಳಗಾಗಿ ಮಾನಸಿಕ ಖಿನ್ನತೆ ಗೊಳಗಾಗಿ ಲಕ್ವಾ ದಂತಹ ಮಾರಕ ಕಾಯಿಲೆಗಳಿಗೆ ಇಂದಿನ ಯುವ ಜನತೆ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಇದಕ್ಕೆಲ್ಲ ಒಂದೇ ಪರಿಹಾರ ವೇದ ಶಾಸ್ತ್ರ ಪುರಾಣಗಳ ಕಾಲದಿಂದಲೂ ಪರಿಹಾರವಿದೆ ನಿಯಮಿತವಾದ ವ್ಯಾಯಾಮ ಸಮಯಕ್ಕೆ ಸರಿಯಾದ ಉಪಹಾರ ಹಾಗೂ ಉನ್ನತ ಮಟ್ಟದ ಸತ್ಸಂಗದಿಂದ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಹಾಗೂ ಭಗವದ್ಗೀತೆಯ ಅಧ್ಯಯನ ಮಾಡುವುದರಿಂದ ದುಷ್ಟ ವಿಚಾರಗಳಿಂದ ದೂರವಿರಬಹುದು ದುಷ್ಟ ಅಭ್ಯಾಸಗಳಿಂದ ದೂರವಿರಬೇಕಾದರೆ ಭಕ್ತಿ ಮಾರ್ಗದಲ್ಲಿ ನಡೆಯಬೇಕು ಪ್ರತಿಯೊಬ್ಬ ಯುವಕರು ಮದುವೆ ಆಗುವವರೆಗೂ ಬ್ರಹ್ಮಚರ್ಯ ಪಾಲನೆ ಮಾಡ ಬೇಕು ಮತ್ತು ಭಗವಂತನಲ್ಲಿ ನಂಬಿಕೆ ಇಟ್ಟಾಗ ಮಾತ್ರ ಶಾಶ್ವತವಾದ ನೆಮ್ಮದಿ ಸಿಗುತ್ತದೆ ಎಂದು ಆಧ್ಯಾತ್ಮಿಕ ಚಿಂತಕರು ಸಮಾಜ ಸೇವಕರಾದ ಧರ್ಮು, ಚಿನ್ನಿ ರಾಥೋಡ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share