ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು ಮತ್ತು ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ಲಿಂಗಾಯತ ಸಮುದಾಯಕ್ಕೆ ಸೇರಿದ ನೇಹಾ ಹಿರೇಮಠ ಅವರ ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣಪತ್ರ ವೈರಲ್ ಆಗಿದೆ.
ಲಿಂಗಾಯತ ಸಮುದಾಯಕ್ಕೆ ಸೇರಿದ ನಿರಂಜನ ಹಿರೇಮಠ ಅವರು ತಮ್ಮ ಪುತ್ರಿ ನೇಹಾ ಅವರಿಗೆ ಬೆಂಗಳೂರಿನ ವಿಳಾಸ ತೋರಿಸಿ ಎಸ್ ಸಿ ಜಾತಿ ಪ್ರಮಾಣ ಪತ್ರ ಮಾಡಿಸಿದ್ದಾರೆ ಎಂದು ಸಮತಾ ಸೇನೆ ಗಂಭೀರ ಆರೋಪ ಮಾಡಿದೆ.
ಸದ್ಯ ಈ ಜಾತಿ ಪ್ರಮಾಣ ಪತ್ರ ವೈರಲ್ ಆಗಿದ್ದು, ನೇಹಾ ಇದ್ದದ್ದು ಬೆಂಗಳೂರಿನಲ್ಲಾ ಅಥವಾ ಹುಬ್ಬಳ್ಳಿಯಲ್ಲಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.ನೇಹಾ ಹಿರೇಮಠ ಲಿಂಗಾಯತ ಸಮುದಾಯದಲ್ಲಿದ್ದು, ಬೇಡ ಜಂಗಮ ಪರಿಶಿಷ್ಟ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಪ್ರಮಾಣ ಪತ್ರವನ್ನು ರದ್ದು ಮಾಡಬೇಕು ಹಾಗೂ ನಿರಂಜನ ಹಿರೇಮಠ ಅವರ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಸಮತಾ ಸೇನೆ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಒತ್ತಾಯಿಸಿದೆ.
ನೇಹಾ ಹಿರೇಮಠ ಅವರು ಬೇಗೂರ ರೋಡ ಹೊಂಗಸಂದ್ರ ವಾರ್ಡ್ ನಂಬರ್ 135 ರಲ್ಲಿ ಬೇಡ ಜಂಗಮ ಜಾತಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ.