ಏನಿದು ಎಣ್ಣೆಹೊಳೆ…?

ಏನಿದು ಎಣ್ಣೆಹೊಳೆ…?

Share

ಹೇಮಾವತಿ ನದಿ ಕಾವೇರಿ ನದಿಯ ಮುಖ್ಯ ಉಪನದಿ. ಈ ನದಿಯನ್ನು ಶಾಸನವು ‘ಚಂಡಿಹೊಳೆ’ ಎಂದು ಹೆಸರಿಸುತ್ತದೆ. ಪ್ರಾದೇಶಿಕವಾಗಿ ಈ ನದಿಯನ್ನು ‘ಎಣ್ಣೆಹೊಳೆ’ ಎಂದು ಕರೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟದ ಶ್ರೇಣಿಯ ಮೇಲಬಂಗಾಡಿಯ ಜಾವಳಿಯಲ್ಲಿ ಉಗಮಿಸುವ ಈ ನದಿ, ಮಂಡ್ಯ ಜಿಲ್ಲೆಯ ಪಶ್ಚಿಮದ ಅಂಚಿನಲ್ಲಿ ಸ್ವಲ್ಪದೂರ ಹಾಸನ ಮಂಡ್ಯ ಜಿಲ್ಲೆಗಳ ಗಡಿಯಾಗಿ ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಅನಂತರ ಕೃಷ್ಣರಾಜಪೇಟೆ ತಾಲ್ಲೂಕಿನ ಗುಡ್ಡೇಹೊಸಹಳ್ಳಿ ಬಳಿ ಮಂಡ್ಯಜಿಲ್ಲೆಯನ್ನು ಪ್ರವೇಶಿಸುತ್ತದೆ. ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜಸಾಗರದ ಹಿಂದಿನ ನೀರಿನಲ್ಲಿಕಾವೇರಿ ನದಿಯನ್ನು ಸೇರುತ್ತದೆ. ಹಿನ್ನೀರಿನ ಪ್ರದೇಶಕುಗ್ಗಿದಂತೆ ಬೇಸಿಗೆಯ ಕಾಲದಲ್ಲಿಕೃಷ್ಣರಾಜಪೇಟೆತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿಕಾವೇರಿ ನದಿಗೆ ಹೇಮಾವತಿ ನದಿಯು ಸೇರುವುದನ್ನು ಇಂದಿಗೂ ಕಾಣಬಹುದು. ಹಾಸನ ಜಿಲ್ಲೆಯಗೊರೊರಿನಲ್ಲಿ ಹೇಮಾವತಿ ನದಿಯಅಡ್ಡವಾಗಿಅಣೆಕಟ್ಟೆಯನ್ನುಕಟ್ಟಲಾಗಿದೆ. ಈ ನದಿಯು ಸುಮಾರು 245 ಕಿಲೋ ಮೀಟರ್‍ಉದ್ದ ಹಾಗೂ 5410 ಕಿಲೋ ಮೀಟರ್ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ಇದು ಸುಮಾರು 5410 ಚದರ ಕಿಲೋ ಮೀಟರ್‍ಜಲಾ ಪ್ರದೇಶವನ್ನು ಹೊಂದಿದೆ.

ಹೇಮಾವತಿ ನದಿ ಜಾಬಾಲಿ ಸತ್ಯಕಾಮರ ವರಪ್ರಸಾದ
ಹೇಮಾವತಿ ನದಿಯ ಉಗಮ ಸ್ಥಳದಲ್ಲಿರುವ ಗಣೇಶನದೇವಾಲಯದಲ್ಲಿ ಹೇಮಾವತಿ ನದಿಯಉಗಮದ ಪುರಾಣಕಥೆ ಪ್ರಚಲಿತದಲ್ಲಿದೆ. ಬಹಳ ಹಿಂದೆಗೌತಮ ಮಹರ್ಷಿಗಳು ದಂಡಕಾರಣ್ಯ ಪ್ರದೇಶದಲ್ಲಿಆಶ್ರಮ ಮಾಡಿಕೊಂಡು ಸಂಚಾರ ಮಾಡುತ್ತಿದ್ದಕಾಲದಲ್ಲಿ ಸತ್ಯಕಾಮನೆಂಬ ಬಾಲಕನು ಗೌತಮರನ್ನುಕಂಡುತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಶಿಕ್ಷಣ ನೀಡುವಂತೆ ವಿನಂತಿಸಿದನು. ಆಗ ಗೌತಮರು ನಾನು ಬ್ರಾಹ್ಮಣ ವಟುಗಳಿಗೆ ಮಾತ್ರ ಶಿಕ್ಷಣ ನ ಡುವ ಸಂಕಲ್ಪದವನಾಗಿದ್ದೇನೆ, ನಿನ್ನಗೋತ್ರ ಪ್ರವರಗಳನ್ನು ತಿಳಿಸು ಎಂದು ಸತ್ಯಕಾಮನನ್ನು ಕೇಳಿದರು. ಅದಕ್ಕೆಉತ್ತರವಾಗಿ ಸತ್ಯಕಾಮನು ನನಗೆ ನನ್ನತಾಯಿಗೊತ್ತೇ ವಿನಾ ಗೋತ್ರ, ಸೂತ್ರ, ಪ್ರವರಾದಿಗಳು ತಿಳಿದಿಲ್ಲ, ನಾನು ನನ್ನತಾಯಿಯನ್ನು ಕೇಳಿ ಆಕೆಯಿಂದು ತಿಳಿದು ನಿಮಗೆ ನನ್ನಗೋತ್ರ ಪ್ರವರಗಳನ್ನು ತಿಳಿಸುತ್ತೇನೆಂದು ಹೇಳಿ ಮನೆಗೆ ಬಂದನು. ಮನೆಗೆ ಬಂದ ಸತ್ಯಕಾಮನುತಾಯಿಯಲ್ಲಿತನ್ನಗೋತ್ರ, ಸೂತ್ರ, ಪ್ರವರಾದಿಗಳ ಬಗ್ಗೆ ಗೌತಮರು ಪ್ರಶ್ನಿಸಿದ್ದನ್ನು ತಿಳಿಸಿ, ನನ್ನಜನ್ಮಕಾರಣವನ್ನು ತಿಳಿಸುವಂತೆ ಕೇಳಿಕೊಂಡನು. ಅದಕ್ಕೆ ಸತ್ಯಕಾಮನತಾಯಿಜಾಬಾಲಿಯು, ‘ಮಗನೇ ನಾನು ಬ್ರಾಹ್ಮಣನೋರ್ವನ ಮನೆಯಲ್ಲಿ ದಸಿಯಾಗಿ ಸೇವೆಸಲ್ಲಿಸುತ್ತಿದ್ದ ವೇಳೆಯಲ್ಲಿ ನಾನು ಹಲವಾರು ಅತಿಥಿಗಳನ್ನು ಸತ್ಕರಿಸಿದ ಸಮಯದಲ್ಲಿ ನಿನ್ನಜನನವಾಗಿದೆ. ಹಾಗಾಗಿ ನಿನಗೆ ಪಿತೃಸ್ಥಾನವನ್ನು ನೀಡಿದ ವ್ಯಕ್ತಿಯನ್ನು ನಾನು ಗುರುತಿಸಲು ಸಾಧ್ಯವಿಲ್ಲ. ಹಾಗಾಗಿ ನನ್ನ ಹೆಸರನ್ನೇ ನಿನ್ನ ಹೆಸರಿನೊಂದಿಗೆ ಬಳಸಿ ಇನ್ನು ಮುಂದೆಜಾಬಾಲಿ ಸತ್ಯಕಾಮನೆಂದು ನಿನ್ನ ನಾಮಾಂಕಿತವನ್ನು ಹೇಳು’ ಎಂದು ತಿಳಿಸಿದಳು. ಸತ್ಯಕಾಮನುತಾಯಿಯಿಂದ ವಿಷಯವರಿತುಗೌತಮರಲ್ಲಿ ಮತ್ತೆ ಬಂದುತಾಯಿ ಹೇಳಿದ ಎಲ್ಲವನ್ನೂಅವರಿಗೆ ಹೇಳಿ ತನ್ನನ್ನು ಶಿಷ್ಯನಾಗುವಂತೆ ಕೇಳಿಕೊಂಡನು. ತ್ರಿಲೋಕ ಜ್ಞಾನಿಗಳಾದ ಗೌತಮ ಮಹರ್ಷಿಗಳು ಜಾಬಾಲಿಯಜನನದ ಮರ್ಮವನ್ನರಿತು ಅವನ ಸತ್ಯವಾಕ್ಯಕ್ಕೆ ಮೆಚ್ಚಿಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಅವನಿಗೆ ಉಪನಯನವನ್ನು ನೆರವೇರಿಸಿದರು. ಕೆಲವು ಕಾಲಾನಂತರಆತನಿಗೆ ನಾಲ್ಕು ನೂರು ಗೋವುಗಳನ್ನು ಕೊಟ್ಟು, ಅವುಗಳನ್ನು ಸಾವಿರವಾಗಿ ಪರಿವರ್ತಿಸಿಕೊಂಡು ಬರುವಂತೆ ತಿಳಿಸಿದರು.
ಸತ್ಯಕಾಮನುತನಗೆಗೌತಮ ಮಹರ್ಷಿಗಳು ನೀಡಿದ ಹಸುಗಳ ಸಹಿತಕಾಡಿಗೆ ಬಂದು ನೆಲೆ ನಿಂತನು. ಕಾಡಿನಲ್ಲಿ ಪಂಚಭೂತಗಳು ಜಾಬಾಲಿ ಸತ್ಯಕಾಮನಿಗೆ ಬ್ರಹ್ಮಜ್ಞಾನದ ಮತ್ತು ಆದಿಶಕ್ತಿಯ ಪರಿಚಯ ಮಾಡಿಕೊಟ್ಟವು, ಸತ್ಯಕಾಮನುತಪಸ್ಸಗೆ ಕುಳಿತುಕೊಳ್ಳಲು ನಿರ್ಧರಿಸಿದ ಸ್ಥಳದಲ್ಲಿ ನೀರಿನಆಸರೆಇರಲಿಲ್ಲ. ಅದನ್ನು ಮನಗಂಡ ಸತ್ಯಕಾಮನು ಆದಿಶಕ್ತಿಯನ್ನು ಕುರಿತು ಅತಿಶಯ ಭಕ್ತಯಿಂದ ತಪಸ್ಸನ್ನಾಚರಿಸಿ ಶಿವನ ಜಟೆಯಿ/ ಮದ ಧುಮುಕುವ ಗಂಗೆಯನ್ನು ಕರುಣಿಸಲು ಉಧ್ಯುಕ್ತ ನಾಮನು ತಪಸ್ಸಿಗೆ ಕುಳಿತ ಸ್ಥಳವೇ ಜಾವಳಿಯ ಸಮೀಪವಿರುವ ಹೇಮಾವತಿ ಗುಡ್ಡವೆಂದು ಇಲ್ಲಿನ ಸ್ಥಳೀಯರು ನಂಬಿದ್ದಾರೆ. ಆತನು ನಿರ್ಮಿಸಿದ ಆಶ್ರಮದ ಬಳಿ ಇಂದು ಹೇಮಾವತಿ ನದಿಯ ಮೂಲಸ್ಥಾನವಿದೆ. ಸತ್ಯಕಾಮನ ತಪಸ್ಸಿಗೆ ಪಾರ್ವತಿದೇವಿಯು ಪ್ರತ್ಯಕ್ಷಳಾಗಿ ಸತ್ಯಕಾಮನಿಗೆ ವರವಿತ್ತಳು. ಹಿಮಾಲಯದ ಹಿಮ ಕರಗಿದಂಡಕಾರಣ್ಯದ ಈ ಪ್ರದೇಶದಲ್ಲಿ ನದಿಯಾಗಿ ಪ್ರವಹಿಸುವಂತೆ ವರ ನೀಡಿದಳು. ದಂಡಕಾರಣ್ಯದಲ್ಲಿ ಗುಪ್ತವಾಗಿ ಹರಿದುಕೊಟ್ಟಿಗೆ ಹಾರದಿಂದ ಹೊರನಾಡಿಗೆ ಹೋಗುವ ಮಧ್ಯೆ ಬರುವ ಜಾವಳಿಯ ಸಮೀಪವಿರುವ ಹೇಮಾವತಿಗುಡ್ಡವೇ ಈ ಹೇಮಾವತಿ ನದಿಯ ಉಗಮಸ್ಥಾನ. ಇದರಿಂದ ಹಾಸನ ಜಿಲ್ಲೆ ಸಮೃದ್ಧವಾಯಿತು. ಆ ನದಿಯನ್ನು ಹಿಂದೆ ಹೇಮವಾಹಿನಿ ಎಂದೂ ಅನಂತರ ಹೇಮಾವತಿಯೆಂದೂ ಕರೆಯಲಾಯಿತು. ಇಂದು ಹೇಮಾವತಿ ನದಿ ಹಾಸನ, ಮಂಡ್ಯಜಿಲ್ಲೆಗೆ ವರಪ್ರಸಾದವಾಗಿ ಜನರ ಜೀವನಾಡಿಯಾಗಿ ಪರಿವರ್ತಿತವಾಗಿದೆ.

ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ


Share