ಧರ್ಮ-ಸಂಘರ್ಷ, ಪಿ.ಎಸ್.ಐ ಹಗರಣ-ಸಿ.ಎಂ. ಮೌನ.

ಧರ್ಮ-ಸಂಘರ್ಷ, ಪಿ.ಎಸ್.ಐ ಹಗರಣ-ಸಿ.ಎಂ. ಮೌನ.

Share

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳು ತಲೆದೂಗುತ್ತಿದ್ದು ಈ ಎಲ್ಲಾ ಸಮಸ್ಯೆಗಳಿಗೆ ಉತ್ತರಿಸಬೆಕಾದ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಯವರ ಮೌನದ ಹಿಂದದೆ ಲೆಕ್ಕವಿಲ್ಲದಷ್ಟು ಅರ್ಥಗಳು ಇರಬಹುದು. ಆದರೆ ಅಭಿಪ್ರಾಯದ ಲೆಕ್ಕದಲ್ಲಿ ಹೇಳುವುದಾದರೆ ಕರ್ನಾಟಕದ ಇಂದಿನ ಪರಿಸ್ಥಿತಿಗೆ ಜೆ.ಸಿ.ಬಿ ರಾಜಕಾರಣಿಗಳೇ ಕಾರಣ. ಧರ್ಮದ ಬೆಂಕಿ ಹಚಿಚಿ ಗುಂಡಾಗಿರಿ ನಡೆಸುತ್ತಿರುವುದು ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಅತಿ ಹೆಚ್ಚಾಗಿರುವುದು ,ಸಂತೋಷ ಆತ್ಮಹತ್ಯೆ, ಹಿಂದೂ ಮುಸ್ಲಿಂ ಗಲಾಟೆಗಳು ಈಗ 545 ಪಿ.ಎಸ್.ಐ ಹುದ್ದೆನೆಮಕತಿ ಪ್ರಕರಣದಲ್ಲಿ ಹಗರಣ ಹೀಗೆ ಸಲು ಸಲು ಸಮಸ್ಯೆಗಳು ಇರುವಗಲೂ ಸಿ.ಎಂ ಬಸವರಜ್ ಬೊಮ್ಮಯಿ ಅವರು ಮೌನÀವಹಿಸಿರುವುದನ್ನು ನೋಡಿದರೆ ಆಡಳಿತ ಯಂತ್ರ ಕುಸಿದಿರುವುದು ಕಂಡು ಬಂದರೂ ಕೂಡ ಪ್ರತಿಕ್ರಯೆ ನೀಡದಷ್ಟು ಸಿ.ಎ. ದೂರ ನಿಂತಿರುವುದನ್ನು ಕಂಡರೆ ಪಕ್ಷದ ಒತ್ತಡ ರಾಜಕಾರಣಿಗಳ, ಅಧಿಕರಿಗಳು ಮತ್ತು ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಅದರಲ್ಲಿಯೂ ರಾಜ್ಯ, ದೇಶ ಕಂಡರಿಯದ ಪಿ.ಎಸ್.ಐ ಹಗರಣವೊಂದು ರಾಜ್ಯದಲ್ಲಿ ನಡೆದಿದೆ. ಈ ಹಗರಣದ ಮುಖ್ಯರುವಾರಿ ಕಲ್ಬುರ್ಗಿಯ ದಿವ್ಯಾ ಹಾಗರಗಿ ತಲೆ ಮರೆಸಿಕೊಂಡಿದ್ದು ಇದರ ಮಧ್ಯೆಯು ಹಳೆಯ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿ ಅಕ್ರಮವು ಸೇರಿದಂತೆ 2011 ಕೆ.ಪಿ.ಸಿ.ಎಸ್ ಹಗರಣವು ಹೀಗೆ ಸಾಲು ಸಾಲು ಹಗರಣಗಳ ಜೀವಚಿತಿಕೆ ಮಧ್ಯೆ ಪಿ.ಎಸ್.ಐ ಹಗರಣದ ಬಗ್ಗೆ ಸಿಐಡಿ ತನಿಖೆಯನ್ನು ತೀವ್ರಗೊಳಿಸಿದ್ದು ಈ ಪಿ.ಎಸ್.ಐ ಪರೀಕೆಯು ಅಕ್ರಮದಲ್ಲಿ ಓ ಎಂ. ಆರ್ ಶೀಟ್ ತದ್ದುಪಡಿ ಸೆರಿದಂತೆ ಬ್ಲೂ ಟೂತ್ ಬಳಕೆ, ಬನಿಯನ್ ನಲ್ಲಿ ಹೈಟೆಕ್ ತಂತ್ರಜ್ಞಾನ ಬಳಸಿ ಪರೀಕ್ಷೆಯಲ್ಲಿ, ಉತ್ತರ ಬರೆಸಿದ ಕೇಂದ್ರವು ಕಲ್ಬುರ್ಗಿಯ ಜ್ಞಾನ ಜ್ಯೋತಿ ಕಾಲ್ಭೆಜ್ ಆಗಿದ್ದು. 545 ಅಭ್ಯರ್ಥಿಗಳ ಪೈಕಿ ಸುಮಾರು 20 ಅಭ್ಯರ್ಥಿಗಳು ಈ ಕೇಂದ್ರದಲೇ ಆಯ್ಕೆಯಾಗಿರುವುದು ಬೆಳಕಿಗೆ ಬಂದಿದೆ. 1 ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗಲೂ ಸಹಾಯ ಮಾಡುವುದಕ್ಕ್ಕಾಗಿ 30 ರಿಂದ 40 ಲಕ್ಷ ನಿಗದಿ ಪಡಿಸಲಾಗಿತ್ತು. ಈಗಾಗಲೇ ಹತ್ತಾರು ಜನರನ್ನು ಬಂಧಿಸಿದ ಸಿಐಡಿಗೆ ಪ್ರಕರಣದ ದಿಕ್ಕು ಇನ್ನೂ ಹೆಚ್ಚಾಗುತ್ತಿದ್ದು ಯಾದಗಿರಿ, ರಾಯಚೂರು, ಕಲ್ಬುರ್ಗಿಯ ಪ್ರಮುಖ ಅಧಿಕಾರಿಗಳು , ವ್ಯಕ್ತಿಗಳು ಭಾಗಿಯಾಗಿದ್ದು ಅದರಲ್ಲಿಯೂ ಕಲ್ಬುರ್ಗಿ ಜಿಲ್ಲೆಯ ಅಫ್ಜಲ್‍ಪುರ್ ತಾಲೂಕಿನ 43 ಕ್ಕೂ ಅಧಿಕ ಅಭ್ಯರ್ಥಿಗಳು ಪಿ.ಎಸ್.ಐ ಪರೀಕ್ಷೆಯಲ್ಲಿ ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿವೆ. ಇದರ ಮಧ್ಯೆ ಆಳಂದ ಶಾಸಕ ಪಾಟೀಲರ ಅಂಗರಕ್ಷಕನ ಬಂಧನವು ಈ ಪ್ರಕರಣದ ರತಾಜಕೀಯ ವಾಸನೆಯನ್ನು ತಿಳಿಸುತ್ತದೆ. ಇತ್ತ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಈ ಪ್ರಕರಣದ ವಿರುದ್ದ ಗಟ್ಟಿಧ್ವನಿ ಎತ್ತಿದರೂ ಕೂಡ ರಾಜ್ಯದ ಗೃಹ ಸಚಿವ ಅರಗಜ್ಞಾನೇಂದ್ರ ಮತ್ತು ಸಿ.ಎಂ.ಬಸವರಾಜ ಬೊಮ್ಮಾಯಿ ಮೌನದ ಹಿಂದೆ ನಿಗೂಢ ಅರ್ಥಗಳಿವೆ. ಅರಗಜ್ಞಾನೇಂದ್ರ ಬೇರೆ ಪ್ರಕರಣಗಳಲ್ಲಿ ಬಾಯ್ಬಿಟ್ಟರೂ ಕೂಡ ಪಿ.ಎಸ್.ಐ ಪ್ರಕರಣದಲ್ಲಿ ಮೌನಕ್ಕೆ ಜಾರಿದ್ದರೆ. ಸಿಐಡಿ ಪೋಲಿಸರು ದಿವ್ಯ ಹಾಗರಗಿ ಬಂಧಿಸುವಲ್ಲಿ ಪ್ರಯತ್ನ ಮಾಡುತ್ತಿರುವಾಗಲೇ ಇನ್ನೋಂದಿಷ್ಟು ಹೊಸ ಹೊಸ ವ್ಯಕ್ತಿಗಳ ಆಗಮನ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದಿಷ್ಟು ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ.
ಹಿಜಾಬ್ ಕೇಸರಿ, ಧರ್ಮ ವ್ಯಾಪಾರ, ಮುಸ್ಲಿಂರಿಗೆ ವ್ಯಾಪರ ನಿಷೇಧ, ಹಲಾಲ್, ಜಟಕಾಕಟ್ ಶಿವಮೊಗ್ಗ ಹರೀಶನ ಹತ್ಯೆ ಶ್ರೀರಾಮ ಸೇನೆಯ ಪ್ರಮೋದ್ ಮುತಲಿಕ್ ಹೇಳಿಕೆಗಳು, ಹುಬ್ಬಳಿಯ ಮೌಲ್ವಿಯ ಹೇಳಿಕೆ, ರಾಜ್ಯದ ಗುಪ್ತದಳ ಹೇಳುವಂತೆ ಹುಬ್ಬಳಿಯ ಗಲಭೆಯು ಬೆಂಗಳೂರಿನ ಡಿ.ಜೆ.ಹಳ್ಲಿ, ಉತ್ತರಹಳ್ಳಿಗಳಂತೆ ಪೂರ್ವ ನಿಯೋಜಿತ ಘಟನೆಗಳಾಗಿದ್ದು ಹಾಗಾದರೆ ಹಿಜಾಬ್ ನಿಂದ ಹಿಡಿದು ಹುಬ್ಬಳ್ಳಿಯ ಗಲಾಟೆವರೆಗೂ ಸಂತೋಷನ ಆತ್ಮಹತ್ಯೆಯಿಂದಿಡಿದು ಪಿ.ಎಸ್.ಐ ಅಕ್ರಮದವರೆಗೂ ಎಲ್ಲರೂ ಮಾತನಾಡಿದರೂ ಮುಖ್ಯಮಂತ್ರಿ ಏಕೆ ಮಾತನಾಡುತ್ತಿಲ್ಲ? ಕೇಂದ್ರದ ನಾಯಕರ ಒತ್ತಡವೋ ಹಿರಿಯ ನಾಯಕರ ಆಜ್ಞೆಯೋ ಅಥವಾ ಈ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕೆಂದು ಸಿ.ಎಂ ಗೆ ಅರ್ಥವಾಗುತ್ತಿಲ್ಲವೋ ಅಥವಾ ಇದುವರೆಗೆ ಬೇರೆ ಬೇರೆ ಹುದ್ದೆಗಳನ್ನು ನಿರ್ವಹಿಸಿದ ಬೊಮ್ಮಾಯಿಯವರಿಗೆ ಸಿ.ಎಂ ಎಂಬ ಮಹತ್ವದ ಹುದ್ದೆಯನ್ನು ನಿರ್ವಹಿಸಲು ಆಗುತ್ತಿಲ್ಲವೋ, ಎಸ್.ಆರ್.ಬೊಮ್ಮಾಯಿ ಯಂತೆ ಮಗ ಬಸವರಾಜ್ ಬೊಮ್ಮಾಯಿ ಆಡಳಿತ ನಡೆಸಲು ಆಗುತ್ತಿಲ್ಲ ಏಕೆ? ಇಚಿತಹ ಹಲವರು ಪ್ರಶ್ನೆಗಳನ್ನು ಬಿ.ಜೆ.ಪಿ ಪಕ್ಷದ ಕಾರ್ಯಕರ್ತರು ಸ್ಭೆರಿದಂತೆ ರಾಜಕಾರಣಿಗಳು , ಬೇರೆ ಪಕ್ಷದ ಕಾರ್ಯಕರ್ತರು, ಜನ ಸಾಮಾನ್ಯರು ಪ್ರಶ್ನೆ ಮಾಡಬೇಕು? ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಷ್ಟು ಸಮಸ್ಯೆಗಳು ಒಚಿದೇ ಸಾರಿ ಬಂದಿರುವುದು ಇದೇ ಮೊದಲು ಎನ್ನಬಹುದು. ಜೊತೆಗೆ ಸಿ.ಎಂ. ಒಬ್ಬರು ಮೌನವಾಗಿರುವುದು ಇದೇ ಮೊದಲು ಎನ್ನಬಹುದು. ಪ್ರತಿಯೊಬ್ಬರು ಪ್ರಶ್ನೆಯನ್ನು ಮಾಡಲೇಬೇಕು. ಸಮಸ್ಯೆಗಳ ಮಧ್ಯೆಯು ಮೌನವಹಿಸುವುದನ್ನು ಕಂಡರೆ ಇತಿಹಸದಲ್ಲಿ ಒಬ್ಬ ರಾಜ ಅರಮನೆಗೆ ಬೆಂಕಿ ಬಿದ್ದಾಗ ಪಿಟೀಲು ನುಡಿಸುತ್ತಿದ್ದನಂತೆ ಹಾಗೆ ನಮ್ಮ ಕರ್ನಾಟಕದ ಪರಿಸ್ಥಿತಿಯಾಗಿದೆ. ಪಕ್ಷ ಮರೆತು ಪ್ರಶ್ನೆ ಮಾಡಿ ಪ್ರಜಾ ಪ್ರಭುತ್ವ ಉಳಿಸಿ.


Share