ಜೈನ ಭೋಧನೆ ಮತ್ತು ಇಂದಿನ ಜಗತ್ತು

ಜೈನ ಭೋಧನೆ ಮತ್ತು ಇಂದಿನ ಜಗತ್ತು

Share

ಜೈನ ಧರ್ಮ ವಿಶ್ವದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮ. ಪಾರಂಪರಿಕ ನಂಬಿಕೆಯ ಅನುಸಾರ ವೃಷಭ ದೇವ ಈ ಸತ್ಯಗಳನ್ನು ಅರತ ಮೊದಲಿಗರೆನ್ನಬಹುದು. ಜೈನ ಧರ್ಮವು 23 ಜನ ತೀರ್ಥಂಕರರ ಸತ್ಯಗಳನ್ನೋಳಗೊಂಡ ಧರ್ಮವಾಗಿದ್ದು ವರ್ಧಮಾನ ಮಹಾವೀರರು ಕೊನೆಯ ತೀರ್ಥಂಕರರಾಗಿದ್ದಾರೆ. ಜೈನ ಎಂದರೆ ಜಿನ ಎಂಬ ಶಬ್ದದಿಂದ ಉತ್ಪತ್ತಿಯಾಗಿದ್ದು ಜಿನ ಎಂದರೆ ಇಂದ್ರಿಯಗಳನ್ನು ಗೆದ್ದವನು ಎಂದು ಹೇಳಬಹುದು. ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವರು. ಜೀನರು ಎಂದು ಕರೆಯುವುದರಿಂದ ಜೀನರಿಂದ ಉಪದೇಶಿಸಲ್ಪಟ್ಟ ಧರ್ಮವೇ ಜೈನ ಧರ್ಮ. ಜೈನ ಧರ್ಮವು ಸತ್ಯ ನೀತಿ , ಉತ್ತಮ ನಡವಳಿಕೆ, ಅಹಿಂಸೆ ಮತ್ತು ದಯೆಗಳನ್ನು ಜಗತ್ತಿಗೆ ಸಾರಿವೆ. ಬ್ರಹ್ಮಚರ್ಯ, ಪೂಜೆ ಧರ್ಮಮಾರ್ಗಗಳು ಜೈನ ಧರ್ಮದ ವಿಶೇಷತೆಯಿಂದ ಕೂಡಿದ್ದು ಜಗತ್ತಿಗೆ ಮಾದರಿಯಾಗಿದೆ.
ಇಂದಿನ ಜಗತ್ತು ಹಿಂಸೆ, ಕ್ರೂರತೆ, ಆಸೆ ಮತ್ತು ದುರಾಸೆಯಿಂದ ಕೂಡಿದ್ದು ಮನುಷ್ಯರು ಜಗತ್ತಿನೊಂದಿಗೆ ತನ್ನ ಹೋಲಿಕೆ ಮತ್ತು ಹೋರಾಟದಿಂದ ಮಾನಸೀಕ ಸ್ವಾಸ್ಥ್ಯವನ್ನು ಕಳೆದುಕೊಂಡಿದ್ದಾನೆ. ಮನುಷ್ಯನ ಈ ಮಾನಸಿಕ ಹೊಯ್ದಾಟಗಳು ಮತ್ತು ಕರ್ಮಾದಿಬಂಧಗಳು, ಆಧುನಿಕ ಆಸೆಗಳು ಮತ್ತು ಜಗತ್ತಿನ ಇಂದಿನ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜೈನ ಧರ್ಮದ ತತ್ವಗಳು ಮಾನವನ ಮನಸ್ಸಿಗೆ ಮುಟ್ಟಬೇಕು. ಪ್ರಾಣಿ ಹಿಂಸೆಯಂತಹ ಆಚರಣೆಗಳು ಮನುಷ್ಯನ ಮೂಢನಂಬಿಕೆಗಳನ್ನು ಹೋಗಲಾಡಿಸುವುದು. ಜೈನ ಧರ್ಮದಲ್ಲಿ ಮಾರ್ಗಗಳುಂಟು. ಇಂದಿನ ಜಗತ್ತಿನಲ್ಲಿ ಧರ್ಮ ಮತ್ತು ದೇವರಿಂದ ದೂರನಿಲ್ಲುವ ನಾಸ್ತಿಕವಾದವು ಹೆಚ್ಚಾಗುತ್ತಿದ್ದು ವೈಜ್ಞಾನಿಕ ನೆಲೆಗಟ್ಟಿನಲ್ಲಿ ದೇವರನ್ನು ಸುಳ್ಳು ಎಂದು ಸಾರುವ ಜನ ಒಂದುಕಡೆಯಾದರೆ, ಧರ್ಮಾಧರಿತ ಜನ ಇನ್ನೋಂದು ಕಡೆ, ಬಲಪಂಕ್ತಿಯ ಮತ್ತು ಎಡ ಪಂಕ್ತಿಯ ನಡುವೆ ದೇವರನ್ನು ಜಗತ್ತಿನ ಕರ್ತೃ ಅಲ್ಲ ಎಂದು ನಂಬುವ ನಾಸ್ತಿಕರು ಹೆಚ್ಚಾಗಿದ್ದು ಈ ವಾದವನ್ನು ಜೈನ ಧರ್ಮವು ಕ್ರಿ.ಪೂ.6ನೇ ಶತಮಾನದಲ್ಲಿ ಹೇಳಿದ್ದು ದೇವರನ್ನು ಒಪ್ಪದಿದ್ದರೂ ಕೂಡ ಕರ್ಮ ಬಂಧಗಳಿಂದ ಮುಕ್ತವಾಗಲು ಪೂಜೆ ಮತ್ತು ಆರಾಧನೆ ಬಗ್ಗೆ ಜೈನ ಧರ್ಮವು ಸಸ್ಯಹಾರದ ಮಹತ್ವವನ್ನು ಸಾರಿದ್ದು ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ಮನುಷ್ಯ ಅತ್ಯಂತ ಸರಳ ರೀತಿಯಿಂದ ಬೇರೆಬೇರೆ ತೊಂದರೆಯಾಗದಂತೆ ಬದುಕ ಬೇಕೆಂದು ಸಮ್ಯಕದರ್ಶನ, ಸಮ್ಯಕ ಜ್ಞಾನ, ಸಮ್ಯಕ ಚಾರಿತ್ರ್ಯ ಈ ಮೂರು ರತ್ನಗಳನ್ನು ಪಾಲಿಸಲು ಮತ್ತು ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ, ಅಪರಿಗ್ರಹ ಮತ್ತು ಗೃಹಸ್ಥರಿಗೆ ಏಕಪತ್ನಿತ್ವ ಮತ್ತು ಸಂತೋಷದ ಜೊತೆಗೆ ಕರ್ಮಮಾರ್ಗಗಳನ್ನು ಅತ್ಯಂತ ಸರಳ ಆಡುಭಾಷೆಯಲ್ಲಿ ಮಾನವನಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದೆ. ಇಂದಿನ ಆಧುನಿಕತೆಯ ಜೀವನದ ಒತ್ತಡದ ಮಧ್ಯೆ ಕಷ್ಟಕರವಾದ ಧರ್ಮಗಳನ್ನು ಪಾಲಿಸುವುದು ಅಸಾಧ್ಯದ ಮಾತು. ಅತ್ಯಂತ ಸರಳ ಮತ್ತು ಮಾರ್ಗಯೋಗ್ಯವಾದ ಭೋಧನೆಯುಳ್ಳ ಜೈನ ಧರ್ಮವನ್ನು ಕೆನಡಾ, ಹಾಂಗ್‍ಕಾಂಗ್, ಜಪಾನ್, ಸಿಂಗಾಪುರ, ಸೇರಿದಂತೆ ಹಲವಾರು ದೇಶಗಳು ಮತ್ತು ಹಲವಾರು ಜನರು ಈ ಧರ್ಮವನ್ನು ಅಪ್ಪಿಕೊಂಡಿದ್ದಾರೆ. ಆಧುನಿಕತೆಯ ಬದುಕಿಗೆ ಹೊಂದಿಕೆ ಮತ್ತು ಸುಲಭ ಮೋಕ್ಷಕ್ಕೆ ದಾರಿಯಾದ ಜೈನ ಧರ್ಮವು ವಿಶ್ವವನ್ನು ಆಳುವಂತಾಗಲಿ. ಶಾಂತಿ, ನೆಮ್ಮದಿಯ ಬದುಕು ಮನುಷ್ಯನಿಗೆ ದೊರೆತು ಮಹಾವೀರರ ಆಸೆ ನೆರವೇರಲಿ.


Share